ETV Bharat / sitara

ಗೆಹ್ರೈಯಾನ್‌ ಚಿತ್ರದ ಮೊದಲ ಹಾಡು ಬಿಡುಗಡೆ ; ಜಾಲತಾಣದಲ್ಲಿ ಮತ್ತೆ ಜಾಗ ಪಡೆದ ದೀಪಿಕಾ-ಸಿದ್ಧಾಂತ್ ನಡುವಿನ ಜಬರ್ದಸ್ತ್​ ಕಿಸ್​​ ಸೀನ್​ಗಳು - ಗೆಹ್ರೈಯಾನ್‌ ಚಿತ್ರದ ಕಿಸ್​ ಸೀನ್​ಗಳು

ಕೌಸರ್ ಮುನೀರ್ ಎಂಬುವರು ಬರೆದಿರುವ ಈ ಹಾಡಿಗೆ ಲೋತಿಕಾ ಕಂಠ ದಾನ ನೀಡಿದ್ದಾರೆ. ಸವೇರಾ ನಿರ್ಮಿಸಿ ಸಂಯೋಜಿಸಿದ್ದಾರೆ. ಎಂಗೇಜ್‌ಮೆಂಟ್​ ಮಾಡಿಕೊಂಡ ಯುವಕ, ಮದುವೆಯಾದ ಪರಸ್ತ್ರೀ ಜೊತೆ ಸಂಬಂಧ ಬೆಳೆಸುವ ಕಥೆ ಈ ಸಿನಿಮಾದಲ್ಲಿದೆ ಎನ್ನಲಾಗುತ್ತಿದೆ. ಅದನ್ನೇ ಈ ಹಾಡಿನ ಮೂಲಕ ಹೆಣೆಯಲಾಗಿದೆ..

Gehraiyaan song Doobey: Deepika-Siddhant find it hard to resist temptation

author img

By

Published : Jan 24, 2022, 1:39 PM IST

ಹೈದರಾಬಾದ್(ತೆಲಂಗಾಣ) : ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇದಿ, ಅನನ್ಯ ಪಾಂಡೆ ಮತ್ತು ಧೈರ್ಯ ಕರ್ವಾ ನಟಿಸಿರುವ ಬಹು ನಿರೀಕ್ಷಿತ 'ಗೆಹ್ರೈಯಾನ್‌' ಚಿತ್ರದ ಆಲ್ಬಂ ಹಾಡೊಂದು ಬಿಡುಗಡೆಯಾಗಿದೆ. ಟೀಸರ್​ ಮತ್ತು ಟ್ರೈಲರ್​ನಿಂದಲೇ ಗಮನ ಸೆಳೆದಿರುವ ಚಿತ್ರ ಇದೀಗ ವಿಡಿಯೋ ಹಾಡು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

ದೀಪಿಕಾ-ಸಿದ್ಧಾಂತ್ ಅವರ ರೊಮ್ಯಾಂಟಿಕ್ ಟ್ರ್ಯಾಕ್​ನಿಂದ ಆರಂಭವಾಗುವ ಹಾಡು ಯುಟ್ಯೂಬ್​ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಲಿಪ್‌ಲಾಕ್ ಹಾಗೂ ಹಸಿ-ಬಿಸಿ ಸೀನ್​ಗಳಿಂದಲೇ ಕೂಡಿರುವ ಹಾಡು ನೋಡುಗರ ತವಕ ಹೆಚ್ಚಿಸದೇ ಇರದು. ಈ ಹಾಡು ರಸಿಕತೆಗೆ ಉತ್ತೇಜನ ನೀಡುವ ಮತ್ತು ಯುವ ಸಮುದಾಯವನ್ನು ಟಾರ್ಗೆಟ್​ ಮಾಡಿಕೊಂಡೇ ಬಿಡುಗಡೆ ಮಾಡಲಾಗಿದೆಯಂತೆ.

ಇದನ್ನೂ ಓದಿ: ಆ ಒಂದು ಸನ್ನಿವೇಶಕ್ಕೆ ಬರೋಬ್ಬರಿ 48 ರಿಟೇಕ್​ ಪಡೆದರಂತೆ ದೀಪಿಕಾ!

ಯಾವಾಗಲೂ ಒಬ್ಬರಿಗೊಬ್ಬರು ಅಂಟಿಕೊಂಡೇ ಇರುವ ದೀಪಿಕಾ ಮತ್ತು ಸಿದ್ಧಾಂತ್ ನಡುವಿನ ದೃಶ್ಯ ಜಾಲತಾಣದಲ್ಲಿ ಈಗಾಗಲೇ ಜಾಗ ಪಡೆದಿವೆ. ಇದೀಗ ಈ ಹಾಡು ಸಹ ಅದೇ ಮಾರ್ಗ ಅನುಸರಿಸಿದೆ. ಕೇವಲ ಎರಡು ನಿಮಿಷಗಳಿರುವ ಈ ವಿಡಿಯೋದಲ್ಲಿ ಅವರ ನಡುವಿನ ಅಗಾಧ ಸಂಬಂಧದ ಬಗ್ಗೆ ಹೇಳುತ್ತದೆ.

  • " class="align-text-top noRightClick twitterSection" data="">

ಕೌಸರ್ ಮುನೀರ್ ಎಂಬುವರು ಬರೆದಿರುವ ಈ ಹಾಡಿಗೆ ಲೋತಿಕಾ ಕಂಠ ದಾನ ನೀಡಿದ್ದಾರೆ. ಸವೇರಾ ನಿರ್ಮಿಸಿ ಸಂಯೋಜಿಸಿದ್ದಾರೆ. ಎಂಗೇಜ್‌ಮೆಂಟ್​ ಮಾಡಿಕೊಂಡ ಯುವಕ, ಮದುವೆಯಾದ ಪರಸ್ತ್ರೀ ಜೊತೆ ಸಂಬಂಧ ಬೆಳೆಸುವ ಕಥೆ ಈ ಸಿನಿಮಾದಲ್ಲಿದೆ ಎನ್ನಲಾಗುತ್ತಿದೆ. ಅದನ್ನೇ ಈ ಹಾಡಿನ ಮೂಲಕ ಹೆಣೆಯಲಾಗಿದೆ.

ಆನಂದ್ ಎಲ್. ರಾಯ್ ನಿರ್ದೇಶನದ ಈ ಚಿತ್ರವನ್ನು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಮತ್ತು ವಯಾಕಾಮ್ 18 ಸ್ಟುಡಿಯೋಸ್ ಮತ್ತು ಶಕುನ್ ಬಾತ್ರಾ ಅವರ ಜೌಸ್ಕಾ ಫಿಲ್ಮ್​ ಸಹಯೋಗದೊಂದಿಗೆ ಜಂಟಿಯಾಗಿ ನಿರ್ಮಿಸಲಾಗಿದೆ. ಈ ಚಿತ್ರವು ಫೆಬ್ರವರಿ 11ರಂದು ಅಮೆಜಾನ್​​ ಪ್ರೈಮ್‌ನಲ್ಲಿ ತೆರೆ ಕಾಣಲಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಸಿನಿಮಾ ಬಗ್ಗೆ ದೀಪಿಕಾ ಪಡುಕೋಣೆ ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದು, ಅಭಿಮಾನಿಗಳು ಸಹ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ನಾಸಿರುದ್ದೀನ್ ಶಾ ಮತ್ತು ರಜತ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಂಬಂಧಗಳ ಸಂಕೀರ್ಣತೆಯ ಬಗ್ಗೆ ಈ ಸಿನಿಮಾ ಬೆಳಕು ಚೆಲ್ಲಲಿದೆ ಎನ್ನಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.