ಮುಂಬೈ: ಬಾಲಿವುಡ್ ನಟಿಯರು ಮುಂಬೈನ ಫಿಲ್ಮ್ ಸಿಟಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸುತ್ತಾಟ ನಡೆಸುತ್ತಿದ್ದು, ಈ ವೇಳೆ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ನಟಿ ಅಮಿರಾ ದಸ್ತೂರ್ ಮತ್ತು ಸನ್ನಿ ಲಿಯೋನ್ ಹಾಗೂ ಸೋಹಾ ಅಲಿ ಖಾನ್ ಕಾಣಿಸಿಕೊಂಡರು. ‘ಕೊಯಿ ಜಾನೆ ನಾ’ ಚಿತ್ರದಲ್ಲಿ ಅಮಿರಾ ದಸ್ತೂರ್ ನಟಿಸಿದ್ದು, ಏ.02 ರಂದು ಸಿನಿಮಾ ಬಿಡುಗಡೆಯಾಗಲಿದೆ.
ಇನ್ನು ಕತ್ರಿನಾ ಕೈಫ್ ಸಹೋದರಿಯೊಂದಿಗೆ ರೆಸ್ಟೋರೆಂಟ್‌ನಲ್ಲಿ ಮಸ್ತಿ ಮಾಡುತ್ತಿದ್ದು, ಕತ್ರಿನಾ ‘ಸೂರ್ಯವಂಶಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನೃತ್ಯಗಾರ್ತಿ ಹಾಗೂ ನಟಿ ನೋರಾ ಫತೇಹಿ ಮುಂಬೈಯಲ್ಲಿ ಪ್ಯಾಪ್‌ಗಳಲ್ಲಿ ಸುತ್ತಾಡುತ್ತಿದ್ದು, ಸದ್ಯ ‘ಸತ್ಯಮೇವ ಜಯತೆ 2’ ಚಿತ್ರದ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ.