ಮುಂಬೈ: ಹೇಮಾ ಮಾಲಿನಿ, ಕರೀನಾ ಕಪೂರ್, ದಿಶಾ ಪಟಾನಿ, ಮಲೈಕಾ ಅರೋರಾ ಸೇರಿದಂತೆ ಅನೇಕ ಬಾಲಿವುಡ್ ಸೆಲಬ್ರಿಟಿಗಳು ಸಾರ್ವಜನಿಕ ಸ್ಥಳಗಳಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ.
ಮಾರ್ಚ್ 30 ರಂದು ಮುಂಬೈ ಮತ್ತು ಸುತ್ತಮುತ್ತ ನಟಿಯರು ಸುತ್ತಾಡುವ ದೃಶ್ಯ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ. ಬಾಂದ್ರಾದ ಸಲೂನ್‌ನಲ್ಲಿ ನಟಿ ದಿಶಾ ಪಟಾನಿ ಕ್ಯಾಮರಾಕ್ಕೆ ಪೋಸ್ ಕೊಟ್ಟರು. ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ತಮ್ಮ ಬಹು ನಿರೀಕ್ಷಿತ ಚಿತ್ರ 'ರಾಧೆ'ಯಲ್ಲಿ ದಿಶಾ ಕೆಲಸ ಮಾಡುತ್ತಿದ್ದು, ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ.
ಇನ್ನು ಹೇಮಾ ಮಾಲಿನಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಕರೀನಾ ಕಪೂರ್ ಹಾಗೂ ಮಲೈಕಾ ಅರೋರಾ ಕೂಡ ಮುಂಬೈನಲ್ಲಿ ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದು, ಈ ಕುರಿತಾದ ಒಂದು ವಿಡಿಯೋ ಝಲಕ್ ಇಲ್ಲಿದೆ.