ಮುಂಬೈ: ಬಾಲಿವುಡ್ ನಟ ಹೃತಿಕ್ ರೋಷನ್ ನಿನ್ನೆಯಷ್ಟೇ ತಮ್ಮ ಜನ್ಮದಿನವನ್ನು ಆಚರಿಸಿದ್ದಾರೆ. ಹೃತಿಕ್ಗೆ ಬಾಲಿವುಡ್ ಮಂದಿಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಈ ನಡುವೆ ಚಲನಚಿತ್ರ ನಿರ್ಮಾಪಕ ಮತ್ತು ನಟ ಫರ್ಹಾನ್ ಅಖ್ತರ್ ಅವರ ಜೊತೆಗಿನ ಬಾಲ್ಯದ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
'ಭಾಗ್ ಮಿಲ್ಖಾ ಭಾಗ್' ನಟ ತಮ್ಮ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಬಾಲ್ಯದ ಗೆಳೆಯ ಹೃತಿಕ್ ರೋಷನ್ ಅವರೊಂದಿಗಿನ ಥ್ರೋಬ್ಯಾಕ್ ಚಿತ್ರವನ್ನು ಹಂಚಿಕೊಂಡಿದ್ದಾರೆ. "ಭಾಲಾ ನಿನ್ನ ಬಾಲ್ಯಕ್ಕಿಂತ ನನ್ನ ಬಾಲ್ಯ ಹೇಗೆ ದೊಡ್ಡದಾಗುತ್ತದೆ" ಜನ್ಮದಿನದ ಶುಭಾಶಯಗಳು ಹೃತಿಕ್, ದೇವರು ನಿನಗೆ ಒಳ್ಳೆಯದನ್ನು ಮಾಡಲಿ, ನಿನಗೆ ಬಿಗ್ ಬಿಗ್ ಹಗ್, ಎಂದು ಅವರು ತಮಾಷೆಯಾಗಿ ಪೋಸ್ಟ್ ಮಾಡಿದ್ದಾರೆ.
ಚಿತ್ರದಲ್ಲಿ ಹದಿಹರೆಯದ ಫರ್ಹಾನ್ ಮತ್ತು ಹೃತಿಕ್ ಅವರು ಕ್ಯಾಮರಾಕ್ಕೆ ಪೋಸ್ ನೀಡುವುದನ್ನು ಕಾಣಬಹುದು. ಫರ್ಹಾನ್ ಕಪ್ಪು ಮುದ್ರಿತ ಟೀ ಶರ್ಟ್ ಜೊತೆಗೆ ಸುರುಳಿಯಾಕಾರದ ಹೇರ್-ಡೂ ಅನ್ನು ಹಾಕಿದ್ದರೆ, ಹೃತಿಕ್ ಬೂದು ಬಣ್ಣದ ಟಿ-ಶರ್ಟ್ ಮತ್ತು ನೀಲಿ ಜೀನ್ಸ್‌ನಲ್ಲಿ ಚಿತ್ರಕ್ಕೆ ಪೋಸ್ ನೀಡಿದ್ದಾರೆ.
ಇದನ್ನೂ ಓದಿ: 'ಗ್ರೀಕ್ ಗಾಡ್'ಗೆ 47ನೇ ಹುಟ್ಟುಹಬ್ಬ.. ಶುಭಾಶಯಗಳ ಮಹಾಪೂರ ಹರಿಸಿದ ಬಿಟೌನ್ ಸ್ಟಾರ್ಸ್..
ಇನ್ನು ಹೃತಿಕ್ 'ವಾರ್' ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರೊಂದಿಗೆ ತಮ್ಮ ಮುಂದಿನ ಚಿತ್ರ 'ಫೈಟರ್' ನಲ್ಲಿ ಮತ್ತೆ ಒಂದಾಗಲಿದ್ದಾರೆ. ಇದರಲ್ಲಿ ಮೊದಲ ಬಾರಿಗೆ ದೀಪಿಕಾ ಪಡುಕೋಣೆ ಜೊತೆ ಡ್ಯುಯೆಟ್ ಹಾಡಲಿದ್ದಾರೆ. ಮತ್ತೊಂದೆಡೆ, ಫರ್ಹಾನ್ ರಾಕೀಶ್ ಒಂಪ್ರಕಾಶ್ ಮೆಹ್ರಾ ಅವರ 'ಟೂಫಾ'ದಲ್ಲಿ ಕಾಣಿಸಿಕೊಳ್ಳಲಿದ್ದಾರೆ.