ಹೈದರಾಬಾದ್ : ಯಾವಾಗಲೂ ಕುರ್ತಾ ಹಾಗೂ ಚೂಡಿದಾರ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಬಾಲಿವುಡ್ ನಟಿ ಸಾರಾ ಅಲಿ ಖಾನ್, ಕಾರ್ಯಕ್ರಮವೊಂದಲ್ಲಿ ಸೀರೆಯುಟ್ಟು ಅಭಿಮಾನಿಗಳ ಕಣ್ಮನ ಸೆಳೆದಿದ್ದಾರೆ.
ಸೆ.25ರಂದು ಮುಂಬೈನಲ್ಲಿ ನಡೆದ ಗ್ಲೋಬಲ್ ಸಿಟಿಜನ್ ಲೈವ್ ಕಾರ್ಯಕ್ರಮದಲ್ಲಿ ಸಾರಾ ಪಾಲ್ಗೊಂಂಡಿದ್ದರು. ಸಮಾರಂಭದಲ್ಲಿ ಮನಮೋಹಕವಾದ ಸೀರೆಯುಟ್ಟು ಅಪ್ಪಟ ಭಾರತೀಯ ಹೆಣ್ಣು ಮಗಳಾಗಿ ಕಂಡು ಬಂದರು. ಸೀರೆ ಧರಿಸಿ ಅದಕ್ಕೆ ಹೊಂದಿಕೊಳ್ಳುವ ಬಳೆ, ಜುಮ್ಕಾ ಹಾಗೂ ಬಿಂದಿಯೊಂದಿಗೆ ಅಂದವಾಗಿ ಕಂಗೊಳಿಸಿದರು.
- " class="align-text-top noRightClick twitterSection" data="
">
ನಟಿ ಸಾರಾ ಈವೆಂಟ್ನಲ್ಲಿ ಭಾಗವಹಸಿದ್ದ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, 'ಯಾಗವಾಗಲೂ ಮಹಿಳೆಯರು ಸೀರೆಯಲ್ಲಿ ಅಂದವಾಗಿ ಕಾಣುತ್ತಾರೆ' ಎಂದು ಅಡಿಬರಹ ಬರೆದಿದ್ದಾರೆ.
ನೆಚ್ಚಿನ ನಟಿಯನ್ನು ಸೀರೆಯಲ್ಲಿ ಕಂಡ ಅಭಿಮಾನಿಗಳು ಫುಲ್ ಖುಷ್ ಆಗಿದ್ದು, ಲೈಕು, ಕಮೆಂಟ್ ಮಾಡುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸದ್ಯ ಆನಂದ್ ಎಲ್ ರಾಯ್ ಅವರ ಅಟ್ರಂಗಿ ರೇ ಸಿನಿಮಾದಲ್ಲಿ ನಟ ಅಕ್ಷಯ್ ಹಾಗೂ ಧನುಷ್ ಜೊತೆಯಾಗಿ ಸಾರಾ ಅಭಿನಯಿಸುತ್ತಿದ್ದಾರೆ.
ಇದನ್ನೂ ಓದಿ: ಪವರ್ ಸ್ಟಾರ್ 'ಜೇಮ್ಸ್' ಚಿತ್ರದ ಸ್ಯಾಟ್ಲೈಟ್ ಹಕ್ಕು 15 ಕೋಟಿಗೆ ಮಾರಾಟ?