ಹೈದರಾಬಾದ್: ನಟಿ ದಿಯಾ ಮಿರ್ಜಾ, ಪತಿ ವೈಭವ್ ರೇಖಿ ಜೊತೆಗೆ ಹನಿಮೂನ್ಗಾಗಿ ಮಾಲ್ಡೀವ್ಸ್ಗೆ ತೆರಳಿದ್ದಾರೆ. ಈ ಫೋಟೋಗಳನ್ನು ದಿಯಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಇನ್ನು ಮಾಲ್ಡೀವ್ಸ್ಗೆ ವೈಭವ್ ಅವರ ಮೊದಲ ಪತ್ನಿಯ ಮಗಳು ಸಮೈರಾ ರೇಖಿ ಕೂಡ ತೆರಳಿದ್ದು, ಆಕೆಯ ಜೊತೆ ತೆಗೆಸಿರುವ ಫೋಟೋವನ್ನು ಸಹ ದಿಯಾ ಶೇರ್ ಮಾಡಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಇದನ್ನು ಓದಿ: ದಿಯಾ ಮಿರ್ಜಾ ಮದುವೆಯಲ್ಲಿ ಮಹಿಳಾ ಪೌರೋಹಿತ್ಯ...ಫೋಟೋ ನೋಡಿ ಆಶ್ಚರ್ಯ ವ್ಯಕ್ತಪಡಿಸಿದ ನೆಟಿಜನ್ಸ್
ಫೆಬ್ರವರಿಯಲ್ಲಿ ದಿಯಾ ಮತ್ತು ವೈಭವ್ ವಿವಾಹವಾಗಿತ್ತು. ಈ ಬಳಿಕ ಮೊದಲ ಬಾರಿಗೆ ವೈಭವ್ ಜೊತೆಗಿನ ಫೋಟೋವನ್ನು ದಿಯಾ ಹಂಚಿಕೊಂಡಿದ್ದಾರೆ. "ನಾವು ಮಾಲ್ಡೀವ್ಸ್ನಲ್ಲಿ ಕೆಲವು ವಿಶೇಷ ನೆನಪುಗಳನ್ನು ಸಂಗ್ರಹಿಸುತ್ತಿದ್ದೇವೆ" ಎಂದು ಶೀರ್ಷಿಕೆ ನೀಡಿದ್ದಾರೆ. ಈ ಚಿತ್ರಕ್ಕೆ ಬಿಪಾಶಾ ಬಸು, ಮಸಾಬಾ ಗುಪ್ತಾ ಮತ್ತು ಇತರ ಅನೇಕ ಪ್ರಸಿದ್ಧ ವ್ಯಕ್ತಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
- " class="align-text-top noRightClick twitterSection" data="
">
ವೈಭವ್ ಅವರ ಮಗಳು ಸಮೈರಾ. ವೈಭವ್ ಈ ಹಿಂದೆ ಯೋಗ ತರಬೇತುದಾರರಾದ ಸುನೈನಾ ರೇಖಿಯನ್ನು ವಿವಾಹವಾಗಿದ್ದರು. ಇನ್ನು ದಿಯಾ ಮತ್ತು ವೈಭವ್ ಅವರ ವಿವಾಹದ ನಂತರ, ಸುನೈನಾ ಅವರು ತಮ್ಮ ಮಗಳು ಕುಟುಂಬದಲ್ಲಿ ಪ್ರೀತಿಯನ್ನು ಕಂಡುಕೊಂಡಿರುವುದಕ್ಕೆ ಸಂತೋಷವಾಗಿದೆ ಎಂದು ಹೇಳಿದ್ದಾರೆ.