ಮುಂಬೈ: ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ಮೊದಲ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ತಿರುಪತಿಗೆ ಭೇಟಿ ನೀಡಿದ್ದ ವೇಳೆ ಅಭಿಮಾನಿವೋರ್ವ ರಣವೀರ್ ಮುಂದೆಯೇ ದೀಪಿಕಾಗೆ ಪ್ರಪೋಸ್ ಮಾಡಿದ್ದಾನೆ.
ಇದೇ ತಿಂಗಳ 14 ರಂದು ರಣವೀರ್ ಸಿಂಗ್ ಮತ್ತು ದೀಪಿಕಾ ತಿರುಪತಿಗೆ ಭೇಟಿ ನೀಡಿದ್ದ ವೇಳೆ ಅಭಿಮಾನಿವೋರ್ವ ದೀಪಿಕಾ ಐ ಲವ್ ಯೂ ಎಂದಿದ್ದಾನೆ. ಈ ವೇಳೆ ಆತನಿಗೆ ಒಂದು ಸ್ಮೈಲ್ ನೀಡಿ ದೀಪಿಕಾ ಮುಂದೆ ಸಾಗಿದ್ದಾರೆ. ಅದೇ ಅಭಿಮಾನಿ ರಣವೀರ್ಗೂ ಕೂಡ ಐ ಲವ್ ಯೂ ಭಯ್ಯಾ ಎಂದಿದ್ದಾನೆ.
ಅಭಿಮಾನಿಯ ಮಾತು ಕೇಳಿದ ದೀಪಿಕಾ ಕೂಡ ಪ್ರತಿಕ್ರಿಯೆ ನೀಡಿದ್ದು, ಆದರೆ ನೀನು ಅವರಿಗಿಂತ ನನ್ನನ್ನೇ ಹೆಚ್ಚು ಪ್ರೀತಿಸುತ್ತೀಯ ಎಂದಿದ್ದಾರೆ. ಈ ವೇಳೆ ಪತಿ-ಪತ್ನಿ ಇಬ್ಬರೂ ನಗುತ್ತಲೇ ಮುಂದೆ ಸಾಗಿದ್ದಾರೆ.
ಮೊದಲ ವಿವಾಹ ವಾರ್ಷಿಕೋತ್ಸವ ಪ್ರಯುಕ್ತ ದೀಪಿಕಾ ಮತ್ತು ರಣವೀರ್ ಜೋಡಿ ತಿರುಪತಿ ತಿಮ್ಮಪ್ಪನ ದರ್ಶನದ ನಂತರ ಅಮೃತ್ಸರದಲ್ಲಿರುವ ಗೋಲ್ಡನ್ ಟೆಂಪಲ್ಗೆ ಭೇಟಿ ನೀಡಿದ್ದರು.