ಮುಂಬೈ (ಮಹಾರಾಷ್ಟ್ರ) : ಇಂದು ನಾಯಕಿ ದೀಪಿಕಾ ಪಡುಕೋಣೆ ಅವರ ಹುಟ್ಟುಹಬ್ಬ. ಹೀಗಾಗಿ, ಅವರ ಜನ್ಮದಿನಕ್ಕೆ ಮುಂಬರುವ ರೋಮ್ಯಾಂಟಿಕ್ ಡ್ರಾಮಾ ಗೆಹ್ರೈಯಾನ್ ಚಿತ್ರದ ಪೋಸ್ಟರ್ ಮತ್ತು ಬಿಡುಗಡೆ ದಿನಾಂಕವನ್ನು ಅಮೆಜಾನ್ ಒರಿಜಿನಲ್ ಮೂವಿಯಲ್ಲಿ ಅನಾವರಣಗೊಳಿಸಿದ್ದಾರೆ.
240ಕ್ಕೂ ಹೆಚ್ಚು ದೇಶಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ತನ್ನ ಛಾಪು ಮೂಡಿಸಿರುವ OTT ಚಾನೆಲ್ ಅಮೆಜಾನ್ ಒರಿಜಿನಲ್ ಮೂವಿಯಲ್ಲಿ ಇದೇ ಫೆಬ್ರವರಿ 11, 2022ರಂದು ದೀಪಿಕಾ ಪಡುಕೋಣೆ ನಟಿಸಿರುವ ಚಿತ್ರ ಬಿಡುಗಡೆಯಾಗಲಿದೆ.
- " class="align-text-top noRightClick twitterSection" data="
">
ಶಕುನ್ ಬಾತ್ರಾ ನಿರ್ದೇಶಿಸಿದ, ಬಹುನಿರೀಕ್ಷಿತ ಚಲನಚಿತ್ರವು ಆಧುನಿಕ ಸಂಬಂಧಗಳ ಬಗ್ಗೆ ತಿಳಿಸುತ್ತದೆ. ಪೋಸ್ಟರ್‌ಗಳನ್ನು ಹಂಚಿಕೊಂಡಿರುವ ದೀಪಿಕಾ, ಇದನ್ನು ತಮ್ಮ ಅಭಿಮಾನಿಗಳಿಗೆ ಅರ್ಪಿಸಿದ್ದಾರೆ. ಈ ವಿಶೇಷ ದಿನದಂದು ನೀವು ನಮಗೆ ಧಾರೆಯೆರೆದ ಎಲ್ಲಾ ಪ್ರೀತಿಗೆ ಒಂದು ಪುಟ್ಟ ಹುಟ್ಟುಹಬ್ಬದ ಉಡುಗೊರೆ ಅಂತಾ ಬರೆದುಕೊಂಡಿದ್ದಾರೆ.
ದೀಪಿಕಾ ಮತ್ತು ಸಿದ್ಧಾಂತ್ ಜೊತೆಗೆ ಚಿತ್ರದಲ್ಲಿ ಅನನ್ಯ ಪಾಂಡೆ ತಿಯಾ ಮತ್ತು ಧೈರ್ಯ ಕರ್ವಾ ಕರಣ್ ನಟಿಸುತ್ತಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ನಾಸಿರುದ್ದೀನ್ ಶಾ ಮತ್ತು ರಜತ್ ಕಪೂರ್ ಅಭಿನಯಿಸುತ್ತಿದ್ದಾರೆ.
ಧರ್ಮಾ ಪ್ರೊಡಕ್ಷನ್ಸ್, ವಯಾಕಾಮ್ 18 ಮತ್ತು ಶಕುನ್ ಬಾತ್ರಾ ಅವರ ಜೌಸ್ಕಾ ಫಿಲ್ಮ್ಸ್ ಜಂಟಿಯಾಗಿ ನಿರ್ಮಿಸಿದ ಈ ಚಲನಚಿತ್ರವು ಫೆಬ್ರವರಿ 11, 2022ರಂದು ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಲಿದೆ.