ಮುಂಬೈ: ವಾಣಿಜ್ಯ ನಗರಿಯ ಪ್ರಸಿದ್ಧ ಸ್ಥಳ ಗೇಟ್ ವೇ ಆಫ್ ಇಂಡಿಯಾಕ್ಕೆ ನಿನ್ನೆ ಬಾಲಿವುಡ್ ಫೇಮಸ್ ನಟಿಯರಾದ ದೀಪಿಕಾ ಪಡುಕೋಣೆ ಹಾಗೂ ಅನನ್ಯ ಪಾಂಡ್ಯ ಭೇಟಿ ನೀಡಿದ್ದರು. ಪೋಸ್ಟ್ ಶೂಟಿಂಗ್ಗಾಗಿ ಆ ಇಬ್ಬರು ನಟಿಯರು ಗೇಟ್ ವೇ ಆಫ್ ಇಂಡಿಯಾಕ್ಕೆ ಭೇಟಿ ನೀಡಿದ್ದರು.
ಶಕುನ್ ಬಾತ್ರಾ ಅವರ ಮುಂಬರುವ ಪ್ರಾಜೆಕ್ಟ್ಗಾಗಿ ಈ ಶೂಟಿಂಗ್ ನಡೆದಿದೆ ಎನ್ನಲಾಗಿದೆ. ಅನನ್ಯ ಪಾಂಡ್ಯ ಮೇಲಂಗಿ ಹಾಗೂ ಶಾಟ್ಸ್ನಲ್ಲಿ ಕಾಣಿಸಿಕೊಂಡರೆ, ಪಡುಕೋಣೆ ಆರಾಮದಾಯಕ ಉಡುಗೆಯಲ್ಲಿ ಕಂಡಬಂದರು.