ಡಾರ್ಲಿಂಗ್ ಪ್ರಭಾಸ್ ಈಗ ವರ್ಲ್ಡ್ ವೈಡ್ ಹೆಸರು ಮಾಡಿರುವ ನಾಯಕ. ಯಾವಾಗ ರಾಜಮೌಳಿ ನಿರ್ದೇಶನದ ಬಾಹುಬಲಿ ಮತ್ತು ಬಾಹುಬಲಿ-2 ಸಿನಿಮಾ ತೆರೆ ಕಂಡವೋ ಅಂದಿನಿಂದ ಪ್ರಭಾಸ್ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಶುರುವಾಯಿತು. ಇಂದು ಪ್ರಭಾಸ್ 42ನೇ ವಸಂತಕ್ಕೆ ಕಾಲಿಟ್ಟು ಹುಟ್ಟುಹಬ್ಬದ ಹುಮ್ಮಸ್ಸಿನಲ್ಲಿದ್ದಾರೆ. ಇವರ ಬರ್ತ್‌ಡೇಗೆ ವಿಶ್ವದ ನಾನಾ ಕಡೆಯಿಂದ ಶುಭಾಶಯ ಸಂದೇಶಗಳು ಬರುತ್ತಿವೆ.
ಪ್ರಭಾಸ್‌ಗೆ ‘ರಾಧೆ ಶ್ಯಾಮ್’ ಚಿತ್ರತಂಡ ಇಂದು ಬೆಳಗ್ಗೆ 11.16ಕ್ಕೆ ಟೀಸರ್ ಗಿಫ್ಟ್ ನೀಡಲಿದೆ. ಅದರಂತೆ ‘ಸಲಾರ್’ ಚಿತ್ರ ತಂಡ ಯಾವ ಗಿಫ್ಟ್ ನೀಡುತ್ತೆ ಎಂಬುದು ಕಾದು ನೋಡ್ಬೇಕಾಗಿದೆ. ಪ್ರಭಾಸ್ ಸಿನಿಮಾ ಜರ್ನಿಯ ಮೈಲಿಗಲ್ಲುಗಳು ಶುರುವಾಗಿದ್ದೇ 2002ರಿಂದ. ಇವರು ಮೊದಲು ನಾಯಕ ನಟನಾಗಿ ಅಭಿನಯಿಸಿದ ಸಿನಿಮಾ ತೆಲುಗಿನ 'ಈಶ್ವರ್', ನಂತ್ರ 'ಮಿರ್ಚಿ'ಯಲ್ಲೂ ಅದ್ಭುತವಾಗಿ ನಟಿಸಿದ್ದು, ಈ ಪಾತ್ರಕ್ಕೆ ನಂದಿ ಪ್ರಶಸ್ತಿಯನ್ನು ಪಡೆದರು.
ಪ್ರಭಾಸ್‌ಗೆ ಅಭಿಮಾನಿಗಳು ಮಿಸ್ಟರ್ ಪರ್ಫೆಕ್ಟ್ ಅಂತ ಹೆಸರಿಟ್ಟಿದ್ದಾರೆ. ಇದಕ್ಕೆ ಕಾರಣ 2011ರಲ್ಲಿ ತೆರೆಕಂಡ 'ಮಿಸ್ಟರ್ ಪರ್ಫೆಕ್ಟ್' ಸಿನಿಮಾ. 2005ರಲ್ಲಿ ರಾಜಮೌಳಿ ನಿರ್ದೇಶನದಲ್ಲಿ ಮೂಡಿಬಂದ 'ಛತ್ರಪತಿ' ಕೂಡ ಇವರ ಜನಪ್ರಿಯತೆ ಹೆಚ್ಚಿಸಿದೆ.
ಈಶ್ವರ್, ವರ್ಷಂ, ಅಡವಿ ರಾಮುಲು, ಛತ್ರಪತಿ, ಬುಜ್ಜಿಗಾಡು, ಬಿಲ್ಲಾ, ಏಕ್ ನಿರಂಜನ್, ಡಾರ್ಲಿಂಗ್, ಮಿಸ್ಟರ್ ಪರ್ಫೆಕ್ಟ್, ಚಕ್ರಂ, ಪೌರ್ಣಮಿ, ಯೋಗಿ, ಮುನ್ನ, ರಾಘವೇಂದ್ರ, ರೆಬಲ್, ಬಾಹುಬಲಿ, ಬಾಹುಬಲಿ-2, ಸಾಹೋ ಸಿನಿಮಾಗಳಲ್ಲಿ ಪ್ರಭಾಸ್ ಮನೋಜ್ಞ ಅಭಿನಯ ತೋರಿದ್ದಾರೆ. ಪ್ರಭಾಸ್‌ಗೆ ಜಪಾನ್ನಲ್ಲೂ ವಿಶೇಷ ಅಭಿಮಾನಿಗಳ ಬಳಗವೇ ಇದ್ದು, ಅಲ್ಲಿಂದಲೂ ಜನ್ಮದಿನದ ಶುಭಾಶಯಗಳು ಹರಿದುಬರ್ತಿವೆ.