ಇಡೀ ದೇಶದಲ್ಲೇ ಮಹಾರಾಷ್ಟ್ರ ರಾಜ್ಯದಲ್ಲಿ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿದೆ. ಅಲ್ಲೋ ಇಲ್ಲೋ ಎಂಬಂತೆ ಕೆಲವೆಡೆ ಸೋಂಕಿತರು ಗುಣಮುಖರಾಗುತ್ತಿದ್ದರೆ ಮತ್ತೆ ಮತ್ತೆ ಕೊರೊನಾದಿಂದ ನರಳುತ್ತಿರುವವರ ಸಂಖ್ಯೆ ದುಪ್ಪಟ್ಟಾಗುತ್ತಿದೆ.
ಇನ್ನು ವೈದ್ಯರು, ರೋಗಿಗಳ ಪ್ರಾಣ ಉಳಿಸಲು ತಮ್ಮ ಪ್ರಾಣವನ್ನೇ ಪಣವಾಗಿಟ್ಟಿದ್ದಾರೆ. ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಕೆಲವು ವೈದ್ಯರು ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹ ವೈದ್ಯರಿಗಾಗಿ ಪಿಪಿಇ ಕಿಟ್ ಕ್ಯಾಂಪೇನ್ ಆರಂಭಿಸಿದ್ದಾರೆ. ಏಕೆಂದರೆ ದೇಶಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ವೈದ್ಯಕೀಯ ಸಿಬ್ಬಂದಿಗಳಿಗೆ ಪಿಪಿಇ ಕಿಟ್ ಕೊರತೆ ಉಂಟಾಗಿದೆ.
'ವೈದ್ಯರು, ನರ್ಸ್ಗಳು ಕೊರೊನಾ ರೋಗಿಗಳಿಗಾಗಿ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟಿದ್ದಾರೆ. ಪಿಪಿಇ ಕಿಟ್ಗಳ ಕೊರತೆ ಇರುವುದರಿಂದ ಅಭಿಮಾನಿಗಳು ಕಿಟ್ಗಳನ್ನು ದಾನ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ. ಕೊರೊನಾ ವಿರುದ್ಧ ಹೋರಾಡಲು ನೀವೆಲ್ಲಾ ಜೊತೆಯಾಗಿ ನಿಲ್ಲುತ್ತೀರಿ ಎಂದು ನನಗೆ ನಂಬಿಕೆ ಇದೆ' ಎಂದು ಸೋನಾಕ್ಷಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಬಳಿ ಮನವಿ ಮಾಡಿದ್ದಾರೆ.
ಸೋನಾಕ್ಷಿ ಮನವಿಯಂತೆ ಪಿಪಿಇ ಕಿಟ್ ನೀಡಲು ಅಭಿಮಾನಿಗಳು ಕೂಡಾ ಮುಂದಾಗಿದ್ದಾರೆ. 25-100 ಪಿಪಿಇ ಕಿಟ್ ನೀಡಿದ ಅಭಿಮಾನಿಗಳಿಗೆ ಸೋನಾಕ್ಷಿ ಸೋಷಿಯಲ್ ಮೀಡಿಯಾದಲ್ಲಿ ಪರ್ಸನಲ್ ಮೆಸೇಜ್ ಮಾಡಿ ಧನ್ಯವಾದ ಅರ್ಪಿಸುತ್ತಿದ್ದಾರೆ. 100-200 ಪಿಪಿಇ ಕಿಟ್ ನೀಡಿದ ಅಭಿಮಾನಿಗಳಿಗೆ ವಿಡಿಯೋ ಮೆಸೇಜ್ ಮಾಡುತ್ತಿದ್ದಾರೆ. ಅಲ್ಲದೆ 200 ಕ್ಕಿಂತ ಹೆಚ್ಚು ಪಿಪಿಇ ಕಿಟ್ ಕಳಿಸಿದ ಅಭಿಮಾನಿಗಳಿಗೆ ಆಕೆಯೊಂದಿಗೆ ವಿಡಿಯೋ ಕಾಲ್ ಮಾಡುವ ಅವಕಾಶ ನೀಡಿದ್ಧಾರೆ. ನಿಮಗೂ ಸೋನಾಕ್ಷಿ ಜೊತೆ ಮಾತನಾಡುವ ಆಸೆ ಇದ್ದಲ್ಲಿ ಈ ವೆಬ್ಸೈಟ್ ಸಂಪರ್ಕಿಸಿ. https://www.tring.co.in/sonakshi-sinha