ನವದೆಹಲಿ: ಬಾಲಿವುಡ್ ಸ್ಟಾರ್ ಜೋಡಿಯಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅಧಿಕೃತವಾಗಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.
ರಾಜಸ್ಥಾನದ ಸಿಕ್ಸ್ ಸೆನ್ಸಸ್ ಪೋರ್ಟ್ ಬವೇರಾದಲ್ಲಿ ಅದ್ಧೂರಿಯಾಗಿ ಹಮ್ಮಿಕೊಂಡಿದ್ದ ಮದುವೆ ಸಮಾರಂಭದಲ್ಲಿ ತಮ್ಮ ಕುಟುಂಬಸ್ಥರ ಸಮ್ಮುಖದಲ್ಲಿ ಕತ್ರಿನಾಗೆ, ವಿಕ್ಕಿ ಕೌಶಲ್ ಮಾಂಗಲ್ಯಧಾರಣೆ ಮಾಡುವುದರೊಂದಿಗೆ ಸಪ್ತಪದಿ ತುಳಿದಿದ್ದಾರೆ.
ಇದನ್ನೂ ಓದಿ: ಬಾಲಿವುಡ್‌ನಲ್ಲಿ ಇದೊಂದು ಹೈಪ್ರೊಫೈಲ್ ಮದುವೆ; ಹಣದ ಹೊಣೆ ಹೊತ್ತವರಾರು ಗೊತ್ತಾ?
ಡಿ.7ರಿಂದ ಆರಂಭವಾಗಿದ್ದ ಮದುವೆ ಸಮಾರಂಭದ ಮೊದಲ ದಿನ ಮೆಹಂದಿ ಕಾರ್ಯ, ಮರುದಿನ ಪಂಜಾಬಿ ಸಂಗೀತ್ ಮತ್ತು ಇಂದು ಮಾಂಗಲ್ಯಧಾರಣೆ ಕಾರ್ಯ ನಡೆದಿದೆ. ಈ ವೇಳೆ ಕಬೀರ್ ಖಾನ್, ಅಂಗನಾ ಬೇಡಿ, ನೇಹಾ ದೂಫಿಯಾ ಸೇರಿದಂತೆ ಬಾಲಿವುಡ್ ಗಣ್ಯರು, ನಟ-ನಟಿಯರು ಹಾಜರಿದ್ದರು.