ಬಾಲಿವುಡ್ ಬ್ಯಾಡ್ ಬಾಯ್ ಸಲ್ಲು ವಿರುದ್ಧ ಮೊಬೈಲ್ ಸ್ನಾಚಿಂಗ್ ದೂರು ದಾಖಲಾಗಿದೆ. ಮುಂಬೈನ ಡಿ.ಎನ್ ನಗರ ಪೊಲೀಸ್ ಠಾಣೆಯಲ್ಲಿ ಭಜರಂಗಿ ಭಾಯ್ಜಾನ್ ವಿರುದ್ಧ ಪತ್ರಕರ್ತನೊಬ್ಬ ಈ ಕೇಸ್ ದಾಖಲಿಸಿದ್ದಾರೆ.
ಸುಲ್ತಾನ್ ಸಲ್ಮಾನ್ ಖಾನ್ ನಿನ್ನೆ ಸಾಯಂಕಾಲ ಸೈಕಲ್ ಏರಿ ಮುಂಬೈ ಸಿಟಿ ರೌಂಡ್ ಹೊಡೆಯುತ್ತಿದ್ದರು. ಇದನ್ನು ಚಿತ್ರೀಕರಿಸಲು ಪತ್ರಕರ್ತ ಸಲ್ಮಾನ್ ಅವರ ಬಾಡಿಗಾರ್ಡ್ಗೆ ಪರ್ಮಿಷನ್ ಕೇಳಿದ್ದಾನೆ. ಆದರೆ, ಶೂಟಿಂಗ್ಗೆ ಆಸ್ಪದ ಕೊಡದಂತೆ ಸಲ್ಲು ತಮ್ಮ ಬಾಡಿಗಾರ್ಡ್ಗೆ ಸೂಚಿಸಿದ್ದಾರೆ. ಇದನ್ನು ಕೇರ್ ಮಾಡದ ಆತ ಚಿತ್ರೀಕರಣ ಮಾಡಿದ್ದಾರೆ. ಈ ವೇಳೆ ಬಾಡಿಗಾರ್ಡ್ ಪತ್ರಕರ್ತನ ಸಹಪಾಠಿಯನ್ನು ಹಿಂದಕ್ಕೆ ತಳ್ಳಿದ್ದಾರೆ. ಮಧ್ಯೆ ಪ್ರವೇಶಿಸಿದ ಸಲ್ಮಾನ್ ಅವರಿಬ್ಬರ ಮೊಬೈಲ್ ಕಿತ್ತುಕೊಂಡಿದ್ದಾರೆ. ಎಷ್ಟೇ ಕೇಳಿಕೊಂಡ್ರು ಅವುಗಳನ್ನು ವಾಪಸ್ ಮಾಡಿಲ್ಲ. ತಡವಾಗಿ ಹಿಂದುರಿಸಿದ್ದಾರಂತೆ.
ಸಲ್ಮಾನ್ ಅವರ ಈ ನಡೆ ಖಂಡಿಸಿರುವ ಪತ್ರಕರ್ತ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಸಲ್ಮಾನ್ ಖಾನ್ ಕಡೆಯಿಂದಲೂ ಕೌಂಟರ್ ಕೇಸ್ ದಾಖಲಾಗಿದೆ.