ETV Bharat / sitara

ಕಂಗನಾ ರಣಾವತ್​​​​​​​​ಗೂ ಕರಾವಳಿ ಪತ್ರೊಡೆಗೂ ಎತ್ತಣಿಂದೆತ್ತ ಸಂಬಂಧವಯ್ಯಾ...?

author img

By

Published : Aug 15, 2020, 2:05 PM IST

Updated : Aug 15, 2020, 7:49 PM IST

ನಟಿ ಕಂಗನಾ ರಣಾವತ್ ಹಿಮಾಚಲ ಪ್ರದೇಶಕ್ಕೆ ಸೇರಿದ ಹುಡುಗಿ. ಒಂದು ರಾಜ್ಯದವರಿಗೆ ಬೇರೆ ರಾಜ್ಯದ ಖಾದ್ಯಗಳ ಬಗ್ಗೆ ಅಷ್ಟೇನೂ ಪರಿಚಯ ಇರುವುದಿಲ್ಲ. ಆದರೆ ಕಂಗನಾ ಎರಡು ದಿನಗಳ ಹಿಂದೆ ಮಂಗಳೂರಿನ ಫೇಮಸ್ ತಿಂಡಿ ಪತ್ರೊಡೆಯನ್ನು ತಿಂದಿದ್ದಾಗಿ ಟ್ವೀಟ್ ಮಾಡಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

Kangana Ranavat Patrode tweet
ಕರಾವಳಿ ಪತ್ರೊಡೆ

ಬಾಲಿವುಡ್​ ನಟಿಯರಾದ ಐಶ್ವರ್ಯ ರೈ ಹಾಗೂ ಶಿಲ್ಪಾ ಶೆಟ್ಟಿ ಮಂಗಳೂರಿನವರು ಎಂಬುದು ತಿಳಿದ ವಿಚಾರ. ಶಿಲ್ಪಾ ಶೆಟ್ಟಿ ತಮ್ಮ ಅಡುಗೆ ಚಾನೆಲ್ ಮೂಲಕ ಈಗಾಗಲೇ ಮಂಗಳೂರಿನ ಅನೇಕ ಖಾದ್ಯಗಳನ್ನು ಮಾಡಿ ಬಾಲಿವುಡ್​​ ಸೆಲಬ್ರಿಟಿಗಳಿಗೆ ರುಚಿ ತೋರಿಸಿದ್ದಾರೆ.

ಇನ್ನು ನಟಿ ಕಂಗನಾ ರಣಾವತ್ ಬಹಳ ದಿನಗಳಿಂದ ಬಾಲಿವುಡ್​​​ನಲ್ಲಿ ಸ್ವಜನಪಕ್ಷಪಾತ, ಸ್ಟಾರ್​​ ಕಿಡ್​​​​​​​​​ಗಳಿಗೆ ಸಂಬಂಧಿಸಿದಂತೆ ಹೆಚ್ಚಾಗಿ ಟ್ವೀಟ್ ಮಾಡುತ್ತಿದ್ದರು. ಆದರೆ 2 ದಿನಗಳ ಹಿಂದೆ ಅವರು ಮಂಗಳೂರಿನ ಫೇಮಸ್ ತಿಂಡಿ ಪತ್ರೊಡೆ ಬಗ್ಗೆ ಟ್ವೀಟ್ ಮಾಡಿರುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ಅದರಲ್ಲೂ ಈ ಟ್ವೀಟ್​​​​​​ನಿಂದ ಆಶ್ಚರ್ಯ ಹಾಗೂ ಖುಷಿಯಾಗಿರುವುದು ಮಂಗಳೂರಿನ ಜನತೆ.

  • Today mother made my most favourite Patrodu and lassi jhol, Patrodu made from giant arbi leaves and chana daal paste blended in two of my most favourite herbs launge and bhavari a lot like Basil 🌿 but way better, they are steamed together then pan fried in Ghee - KR pic.twitter.com/3QZHE2knXO

    — Team Kangana Ranaut (@KanganaTeam) August 13, 2020 " class="align-text-top noRightClick twitterSection" data=" ">

ಪತ್ರೊಡೆ ಮಂಗಳೂರಿನ ಫೇಮಸ್ ತಿಂಡಿ. ಮಳೆಗಾಲದ ವೇಳೆ ಬಿಸಿ ಬಿಸಿ ಪತ್ರೊಡೆ ಮಾಡಿ ಕಾಫಿ, ಟೀಯೊಂದಿಗೆ ತಿನ್ನುತ್ತಿದ್ದರೆ ಅದರ ಮಜಾನೇ ಬೇರೆ. ಕರಾವಳಿ ಜನರು ಹೊರಗೆ ಇದ್ದರೂ ಆಗ್ಗಾಗ್ಗೆ ಪತ್ರೊಡೆ ತಿನ್ನುವುದನ್ನು ಮಾತ್ರ ಮರೆಯುವುದಿಲ್ಲ. ಕೆಸುವಿನ ಎಲೆಯಿಂದ ಮಾಡುವ ಈ ಖಾದ್ಯ ಕರಾವಳಿ ಜನರ ಮೋಸ್ಟ್ ಫೇವರೆಟ್ ತಿಂಡಿ.

ಇದೀಗ ಕಂಗನಾ ನಾನು ಪತ್ರೊಡೆ ತಿಂದೆ ಎಂದು ಟ್ವೀಟ್ ಮಾಡಿದ್ದಾರೆ. ಆಗಸ್ಟ್ 13 ರಂದು ಈ ಟ್ವೀಟ್ ಮಾಡಿರುವ ಕಂಗನಾ 'ಇಂದು ನನ್ನ ಅಮ್ಮ ನನ್ನ ಇಷ್ಟದ ಪತ್ರೊಡೆ ಹಾಗೂ ಲಸ್ಸಿ ಮಾಡಿಕೊಟ್ಟರು. ಕೆಸುವಿನ ಎಲೆ ಹಾಗೂ ತುಳಸಿ ಬಳಸಿ ಹಬೆಯಲ್ಲಿ ಬೇಯಿಸಿ, ತುಪ್ಪದಲ್ಲಿ ಹುರಿಯಲಾದ ಪತ್ರೊಡೆ ಬಹಳ ರುಚಿಯಾಗಿದೆ' ಎಂದು ಬರೆದುಕೊಂಡು ಪತ್ರೊಡೆ, ತುಳಸಿ ಹಾಗೂ ಕೆಸುವಿನ ಎಲೆ ಫೋಟೋವನ್ನು ಜೊತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

Kangana Ranavat Patrode tweet
ಕಂಗನಾ ರಣಾವತ್

ಕಂಗನಾಗೆ ಮಂಗಳೂರಿನ ತಿಂಡಿಯನ್ನು ಯಾರು ಪರಿಚಯಿಸಿದರು ಎಂದು ಕೆಲವರು ಆಶ್ಚರ್ಯ ಪಡುತ್ತಿದ್ದರೆ, ಬಹುಶ: ಶಿಲ್ಪಾ ಶೆಟ್ಟಿಯೇ ಕಂಗನಾಗೆ ಪತ್ರೊಡೆ ಬಗ್ಗೆ ಹೇಳಿರಬಹುದು ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಕರ್ನಾಟಕದ ಫೇಮಸ್ ತಿಂಡಿಯ ಬಗ್ಗೆ ಕಂಗನಾ ಟ್ವೀಟ್ ಮಾಡಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ ಎನ್ನಬಹುದು.

Last Updated : Aug 15, 2020, 7:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.