ETV Bharat / sitara

ಹಿಂದಿ ಬಿಗ್​ ಬಾಸ್​​-15: ಮೊದಲ ಕಂಟೆಸ್ಟೆಂಟ್​ ಆಗಿ ಆದವರು ಯಾರು ಗೊತ್ತಾ? - ಹಿಂದಿ ಬಿಗ್​ ಬಾಸ್​​-15

ಹಿಂದಿ ಕಿರುತೆರೆಯ ಬಹು ಜನಪ್ರಿಯ ರಿಯಾಲಿಟಿ ಶೋ ‘ಬಿಗ್‌ ಬಾಸ್' ಸೀಸನ್​ ಈ ಬಾರಿ ಒಟಿಟಿಯಲ್ಲಿ ಪ್ರಸಾರವಾಗ್ತಿದ್ದು, ಈ ಸೀಸನ್​ನ ಮೊದಲ ಸ್ಪರ್ಧಿಯಾಗಿ ಬಾಲಿವುಡ್​ ಸಿಂಗರ್​ ನೇಹಾ ಭಾಸಿನ್​ ಬಿಗ್​ಬಾಸ್​ ಮನೆ ಪ್ರವೇಶಿಸಲಿದ್ದಾರೆ.

Bigg Boss OTT
ನೇಹಾ ಭಾಸಿನ್
author img

By

Published : Jul 31, 2021, 1:06 PM IST

ಮುಂಬೈ: ಒಟಿಟಿಯಲ್ಲಿ ಪ್ರಸಾರಗೊಳ್ಳುತ್ತಿರುವ ಕರಣ್​ ಜೋಹರ್​ ನಿರೂಪಿಸಲಿರುವ ಹಿಂದಿ ಕಿರುತೆರೆಯ ಬಹು ಜನಪ್ರಿಯ ರಿಯಾಲಿಟಿ ಶೋ ‘ಬಿಗ್‌ ಬಾಸ್' ನ ಮೊದಲ ಸ್ಪರ್ಧಿಯಾಗಿ ಗಾಯಕಿ ನೇಹ ಭಾಸಿನ್​ ಆಯ್ಕೆಯಾಗಿದ್ದಾರೆ.

ನೇಹಾ ಹಿಂದಿ ಬಿಗ್​ಬಾಸ್​​ ಕಾರ್ಯಕ್ರಮಕ್ಕೆ ಪ್ರವೇಶಿಸುತ್ತಿರುವುದನ್ನು VOOT ದೃಢಪಡಿಸಿದೆ. ಆದರೆ, ಈ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿರುವ ಇನ್ನಿತರ ಸ್ಪರ್ಧಿಗಳ ಹೆಸರು ಇನ್ನು ಗೌಪ್ಯವಾಗಿದೆ.

ಬಾಲಿವುಡ್​ನ ಬೇಡಿಕೆಯ ಸಿಂಗರ್​​​ ಆಗಿರುವ ನೇಹಾ ಹಾಡಿರುವ ಸ್ವಗ್ ಸೆ ಸ್ವಾಗತ್, ಅಸಲಾಮ್-ಇ-ಇಷ್ಕ್ವಮ್, ಹೀರಿಯೆ ಮತ್ತು ಜಗ್ ಘೂಮಿಯಾ ಮುಂತಾದ ಹಾಡುಗಳು ಹೆಚ್ಚು ಜನಪ್ರಿಯವಾಗಿವೆ.

ಹಿಂದಿ ಬಿಗ್​ ಬಾಸ್​ ಸೀಸನ್​ 15 ಆಗಸ್ಟ್​ 8 ರಿಂದ ಆರಂಭಗೊಳ್ಳುತ್ತಿದೆ. ಮೊದಲು ಆರು ವಾರದ ಎಪಿಸೋಡ್​ಗಳು ವೂಟ್​ನಲ್ಲಿ ಮಾತ್ರ ಪ್ರಸಾರವಾಗಲಿದ್ದು, ನಂತರ ಟಿವಿಗೆ ಶಿಫ್ಟ್​ ಆಗಲಿದೆ. ಒಟಿಟಿ ಶೋ ನಡೆಸಿಕೊಡೋಕೆ ಖ್ಯಾತ ಬಾಲಿವುಡ್​ ನಿರ್ಮಾಪಕ ಕರಣ್​ ಜೋಹರ್ ಆಗಮಿಸಿದ್ದಾರೆ. ಟಿವಿಯಲ್ಲಿ ಪ್ರಸಾರವಾಗುವ ಶೋ ನ್ನು ಸಲ್ಮಾನ್ ಖಾನ್​ ನಡೆಸಿಕೊಡಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.