ಮುಂಬೈ: ಲಾಕ್ಡೌನ್ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಸಿಲುಕಿರುವ ಸುಮಾರು 1 ಸಾವಿರ ವಲಸೆ ಕಾರ್ಮಿಕರನ್ನು ಮನೆಗೆ ತಲುಪಿಸಲು ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರು 10 ಚಾರ್ಟರ್ಡ್ ವಿಮಾನಗಳನ್ನು ಕಾಯ್ದಿರಿಸಿದ್ದಾರೆ.
ಈ ಚಾರ್ಟರ್ಡ್ ವಿಮಾನಗಳು ಅಲಹಾಬಾದ್, ವಾರಣಾಸಿ, ಗೋರಖ್‌ಪುರ ಮತ್ತು ಲಖನೌಗೆ ತಲಾ 180 ವಲಸಿಗರನ್ನು ಕಡೆದುಕೊಂಡು ಹೋಗಲಿವೆ. ನಾಲ್ಕು ವಿಮಾನಗಳು ಇಂದು ಹಾರಾಟ ನಡೆಸಲಿದ್ದು, ಎರಡು ವಿಮಾನಗಳು ಗುರುವಾರ ತೆರಳಲಿವೆ.
ಬಿಗ್ ಬಿ ನೆರವಿಗೆ ಕೃತಜ್ಞತೆ ಸೂಚಿಸುವ ಸಲುವಾಗಿ ವಲಸೆ ಕಾರ್ಮಿಕರು ನಿರ್ಗಮನದ ಸಮಯದಲ್ಲಿ ಅಮಿತಾಭ್ ಅವರ ಕಟೌಟ್ ನಿಲ್ಲಿಸಿದ್ದಾರೆ. ಅಮಿತಾಭ್ ಬಚ್ಚನ್ ಕಾರ್ಫೋರೇಷನ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಯಾದವ್ ಅವರು ಬಿಗ್ ಬಿ ನಿರ್ದೇಶನದಲ್ಲಿ ಈ ಎಲ್ಲಾ ಕಾರ್ಯವನ್ನು ನಿರ್ವಹಿಸಿದ್ದಾರೆ.
ವಲಸೆ ಕಾರ್ಮಿಕರ ಕಷ್ಟಕ್ಕೆ ಬಾಲಿವುಡ್ ನಟ ಸೋನು ಸೂದ್ ಸ್ಪಂದಿಸಿದ್ದು, ಸಾವಿರಾರು ಕಾರ್ಮಿಕರನ್ನು ತಮ್ಮ ತಮ್ಮ ಊರಿಗೆ ಕಳುಹಿಸಿಕೊಟ್ಟಿದ್ದಾರೆ. ಇದೀಗ ಅಮಿತಾಭ್ ಬಚ್ಚನ್ ಕೂಡ ವಲಸಿಗರ ನೆರವಿಗೆ ಧಾವಿಸಿದ್ದಾರೆ.