ETV Bharat / sitara

ಡೆತ್​​ನೋಟ್ ಬರೆದು ಭೋಜ್​​​ಪುರಿ ನಟಿ ಆತ್ಮಹತ್ಯೆ - Film industry suicide cases

ಸುಶಾಂತ್ ಸಿಂಗ್, ಮನ್ಮೀತ್​ ಗ್ರೆವಲ್, ಸಮೀರ್ ಶರ್ಮಾ ಆತ್ಮಹತ್ಯೆ ಪ್ರಕರಣಗಳ ನಂತರ ಭೋಜ್​​ಪುರಿ ನಟಿಯೊಬ್ಬರು ಆಗಸ್ಟ್ 2 ರಂದು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.

Bhojpuri actress Anupama committed suicide
ಭೋಜ್​​​ಪುರಿ ನಟಿ ಆತ್ಮಹತ್ಯೆ
author img

By

Published : Aug 7, 2020, 11:57 AM IST

ಚಿತ್ರರಂಗದಲ್ಲಿ ಸರಣಿ ಆತ್ಮಹತ್ಯೆ ಪ್ರಕರಣಗಳು ಮುಂದುವರೆಯುತ್ತಲೇ ಇವೆ. ನಿನ್ನೆಯಷ್ಟೇ ಹಿಂದಿ ಕಿರುತೆರೆ ನಟ ಸಮೀರ್ ಶರ್ಮಾ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಭೋಜ್​ಪುರಿ ನಟಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಭೋಜ್​​ಪುರಿ ಸಿನಿಮಾ, ಕಿರುತೆರೆ ನಟಿ ಅನುಪಮಾ ಪಾಠಕ್ (40)​ ಶವ ಆಗಸ್ಟ್ 2 ರಂದು ಮುಂಬೈನ ದಹಿಸರ್​​​ನ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆತ್ಮಹತ್ಯೆಗೂ ಮುನ್ನ ಅನುಪಮಾ ಫೇಸ್​​​ಬುಕ್​​ ಲೈವ್ ಮಾಡಿದ್ದಾರೆ. ಬಿಹಾರದ ಪಾಟ್ನಾದಲ್ಲಿ ಹುಟ್ಟಿ , ಬೆಳೆದ ಅನುಪಮಾ ಸಿನಿಮಾ ಕೆಲಸಗಳಿಗಾಗಿ ಮುಂಬೈಗೆ ಬಂದು ನೆಲೆಸಿದ್ದರು. ಅನುಪಮಾ ಬರೆದ ಡೆತ್​​ನೋಟ್ ಕೂಡಾ ಪೊಲೀಸರಿಗೆ ದೊರೆತಿದೆ ಎನ್ನಲಾಗಿದೆ.

'ನಿಮ್ಮ ಸಮಸ್ಯೆಯನ್ನು ಯಾರ ಬಳಿಯೂ ಹೇಳಿಕೊಳ್ಳಬೇಡಿ, ಯಾರನ್ನೂ ಸುಲಭವಾಗಿ ನಂಬಬೇಡಿ. ಎಲ್ಲರೂ ನಿಮ್ಮನ್ನು ನೋಡಿ ಅಪಹಾಸ್ಯ ಮಾಡುತ್ತಾರೆ' ಎಂದು ಫೇಸ್​​ಬುಕ್​​ ಲೈವ್​​​ನಲ್ಲಿ ಅನುಪಮಾ ಹೇಳಿಕೊಂಡಿದ್ದರು ಎನ್ನಲಾಗಿದೆ. ಅಲ್ಲದೆ, ಅನುಪಮಾ ಬರೆದ ಡೆತ್​​​ನೋಟ್​​ನಲ್ಲಿ ಆತ್ಮಹತ್ಯೆಗೆ ಎರಡು ಕಾರಣಗಳನ್ನು ತಿಳಿಸಿದ್ದಾರೆ.

ಮಲಾದ್ ನಿರ್ಮಾಪಕರೊಬ್ಬರಿಗೆ ನಾನು 10 ಸಾವಿರ ರೂಪಾಯಿ ಹಣ ನೀಡಿದ್ದೆ. ಆದರೆ ಅದನ್ನು ವಾಪಸ್ ನೀಡದೆ ಆತ ಸತಾಯಿಸುತ್ತಿದ್ದರು. ಅಲ್ಲದೆ ನನ್ನ ಸ್ಕೂಟರನ್ನು ಪರಿಚಯಸ್ಥರಿಗೆ ಮಾರಾಟ ಮಾಡಿದ್ದೆ , ಆದರೆ ಅವರೂ ಕೂಡಾ ಬಾಕಿ ಹಣವನ್ನು ನೀಡಿಲ್ಲ, ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ' ಎಂದು ಅನುಪಮಾ ಡೆತ್​​​​ನೋಟ್​​ನಲ್ಲಿ ಬರೆದಿದ್ದಾರೆ ಎನ್ನಲಾಗಿದೆ.

ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.