ಮುಂಬೈ: ಬುಡಾಪೆಸ್ಟ್‌ನಲ್ಲಿ 'ಧಾಕಡ್' ಚಿತ್ರೀಕರಣ ಮುಗಿದ ನಂತರ ನಟ ಅರ್ಜುನ್ ರಾಂಪಾಲ್ ತಮ್ಮ ಹಿರಿಯ ಮಗಳು ಮಹಿಕಾ ಅವರೊಂದಿಗೆ ಅತ್ಯುತ್ತಮವಾದ ಸಮಯ ಕಳೆಯಲು ಲಂಡನ್‌ಗೆ ತೆರಳಿದ್ದಾರೆ. ಮಗಳು ಮಹಿಕಾ ಮತ್ತು ಅವಳ ಸಹಪಾಠಿಗಳನ್ನು ಭೇಟಿಯಾದ ಒಂದು ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಅವರು ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಇನ್ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿರುವ ನಟ ಅರ್ಜುನ್ ರಾಂಪಾಲ್, ''ಡ್ಯಾಡಿಸ್ ಡೇ ಔಟ್. ಮಹಿಕಾ ಮತ್ತು ಅವರ ಕೆಲವು ಸಹಪಾಠಿಗಳೊಂದಿಗೆ ಅದ್ಭುತ ದಿನವನ್ನು ಕಳೆದಿದ್ದೇನೆ. ಅವರೊಂದಿಗೆ ಗುಣಮಟ್ಟದ ಚರ್ಚೆ ನಡೆದಿದೆ. ಈ ಮಹತ್ವಾಕಾಂಕ್ಷಿ ಯುವ ಫಿಲ್ಮ್ಮೇಕರ್ಸ್/ತಾರೆಯರು ಅವರ ವಿಶೇಷ ಕ್ಯಾಂಪಸ್‌ನ ಪ್ರವಾಸವನ್ನು ನನಗೆ ನೀಡಿದರು'' ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ಅರ್ಜುನ್ ರಾಂಪಾಲ್, ಮಹಿಕಾ ಮತ್ತು ಅವರ ಸ್ನೇಹಿತರೊಂದಿಗಿನ ಕೆಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
- " class="align-text-top noRightClick twitterSection" data="
">
ಧಾಕಡ್ ಚಿತ್ರದ ಮುಂಬರುವ ಚಿತ್ರೀಕರಣದಲ್ಲಿ ನಟ ಅರ್ಜುನ್ ರಾಂಪಾಲ್, ಖಳನಾಯಕ ರುದ್ರವೀರ್ ಪಾತ್ರದಲ್ಲಿ ನಟಿಸಲಿದ್ದಾರೆ.