ಹೈದರಾಬಾದ್ : ಬಾಲಿವುಡ್ ನಟಿ-ನಿರ್ಮಾಪಕಿ ಅನುಷ್ಕಾ ಶರ್ಮಾ ಅವರು ತಮ್ಮ ಪತಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಮಗಳು ವಮಿಕಾ ಕೊಹ್ಲಿಯವರ ಮುದ್ದಿನ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ಆದರೆ, ಅನುಷ್ಕಾ ವಮಿಕಾಳ ಮುಖವನ್ನು ಬಹಿರಂಗಪಡಿಸಿಲ್ಲ. ಯಾಕೆಂದರೆ, ಅನುಷ್ಕಾ ಮತ್ತು ವಿರಾಟ್ ತಮ್ಮ ಮಗಳು ಸ್ವಲ್ಪ ದೊಡ್ಡವಳಾಗುವವರೆಗೂ ಸಾಮಾಜಿಕ ಮಾಧ್ಯಮದಲ್ಲಿ ಪರಿಚಯಿಸದಿರಲು ನಿರ್ಧರಿಸಿದ್ದಾರೆ.
- " class="align-text-top noRightClick twitterSection" data="
">
ಅನುಷ್ಕಾ ತನ್ನ ಇನ್‌ಸ್ಟಾಗ್ರಾಂನಲ್ಲಿ ವಿರಾಟ್ ಮತ್ತು ವಮಿಕಾಳ ಸುಂದರ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಚಿತ್ರದಲ್ಲಿ ವಿರಾಟ್ ಬಣ್ಣ-ಬಣ್ಣದ ಚೆಂಡುಗಳ ಮಧ್ಯೆ ಕುಳಿತು ಆಡುತ್ತಿರುವ ತನ್ನ ಪುಟ್ಟ ರಾಜಕುಮಾರಿಯನ್ನು ನೋಡಿ ಮನಸ್ಸು ತುಂಬಿ ನಗುತ್ತಿದ್ದಾರೆ. ಈ ಫೋಟೋಗೆ ಅನುಷ್ಕಾ 'ಈ ಫೋಟೋದಂತೆ ತಂದೆ-ಮಗಳ ಜೋಡಿಯೂ ಮುದ್ದಾಗಿದೆ.. "ನನ್ನ ಇಡೀ ಹೃದಯ ಒಂದೇ ಫ್ರೇಮ್‌ನಲ್ಲಿ" ಎಂದು ಕ್ಯಾಪ್ಷನ್ ಬರೆದಿದ್ದಾರೆ.
ಈ ಫೋಟೋ ಅಪ್ಡೇಟ್ ಮಾಡಿದ ತಕ್ಷಣವೇ ಬಾಲಿವುಡ್ ತಾರೆಯಲು ಲೈಕ್ಸ್ ಮೇಲೆ ಲೈಕ್ಸ್ ಒತ್ತಿದ್ದು, ನಟಿ ರಾಕುಲ್ ಪ್ರೀತ್ ಸಿಂಗ್ ಕಮೆಂಟ್ ಸಹ ಮಾಡಿದ್ದಾರೆ.