ಮುಂಬೈ: ಬಾಲಿವುಡ್ ಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ವಿರುದ್ಧ ನಟಿ ಪಾಯಲ್ ಘೋಷ್ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಕಶ್ಯಪ್, ತಾನು ಹಾಗೇ ಅನುಚಿತವಾಗಿ ವರ್ತಿಸುವುದಿಲ್ಲ. ಅಂತಹ ಘಟನೆಯು ತನ್ನ ಸುತ್ತ ನಡೆಯುವುದನ್ನು ಕೂಡ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಕೆಲವು ವರ್ಷಗಳ ಹಿಂದೆ ಅನುರಾಗ್ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿರುವ ಪಾಯಲ್ ಅವರು, ಕಶ್ಯಪ್ ವಿರುದ್ಧ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ. ಈ ಟ್ವೀಟ್ನ್ನು ಪ್ರಧಾನಮಂತ್ರಿ ಕಚೇರಿಗೆ ಟ್ಯಾಗ್ ಮಾಡಿ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
"@ಅನುರಾಗ್ಕಶ್ಯಪ್72 ನನ್ನ ಮೇಲೆ ಬಲವಂತವಾಗಿ ಮತ್ತು ಕೆಟ್ಟದಾಗಿ ವರ್ತಿಸಿದ್ದಾರೆ!" ಎಂದು ಪಾಯಲ್ ಟ್ವೀಟ್ ಮಾಡಿದ್ದಾರೆ.
-
@anuragkashyap72 has forced himself on me and extremely badly. @PMOIndia @narendramodi ji, kindly take action and let the country see the demon behind this creative guy. I am aware that it can harm me and my security is at risk. Pls help! https://t.co/1q6BYsZpyx
— Payal Ghosh (@iampayalghosh) September 19, 2020 " class="align-text-top noRightClick twitterSection" data="
">@anuragkashyap72 has forced himself on me and extremely badly. @PMOIndia @narendramodi ji, kindly take action and let the country see the demon behind this creative guy. I am aware that it can harm me and my security is at risk. Pls help! https://t.co/1q6BYsZpyx
— Payal Ghosh (@iampayalghosh) September 19, 2020@anuragkashyap72 has forced himself on me and extremely badly. @PMOIndia @narendramodi ji, kindly take action and let the country see the demon behind this creative guy. I am aware that it can harm me and my security is at risk. Pls help! https://t.co/1q6BYsZpyx
— Payal Ghosh (@iampayalghosh) September 19, 2020
ತನ್ನ ವಿರುದ್ಧದ ಆರೋಪಗಳಿಗೆ ಅನುರಾಗ್ ಹಿಂದಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. "ವಾಹ್, ನನ್ನ ಬಾಯ್ಬಿ ಮುಚ್ಚಿಸುವ ಪ್ರಯತ್ನವಿದು. ಈ ಪ್ರಯತ್ನದಲ್ಲಿ, ನೀವು ಮಾತ್ರವಲ್ಲದೆ, ಇತರ ಮಹಿಳೆಯರನ್ನೂ ಎಳೆದಿದ್ದೀರಿ. ಸ್ವಲ್ಪ ಮಿತಿಯಿಂದ ವರ್ತಿಸಿ ಮೇಡಂ. ಯಾವುದೇ ಆರೋಪಗಳು ಇದ್ದರೂ ನೀವು ಹೇಳಲು ಬಯಸುತ್ತೀರಿ. ಆದರೆ ಅವೆಲ್ಲವೂ ಆಧಾರರಹಿತವಾಗಿವೆ" ಎಂದರು.
ಈ ವಿವಾದದಲ್ಲಿ ಬಚ್ಚನ್ ಕುಟುಂಬವನ್ನು ಎಳೆದುತಂದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, "ನನ್ನ ಮೇಲೆ ಆರೋಪ ಹೊರಿಸುವ ಪ್ರಕ್ರಿಯೆಯಲ್ಲಿ ನೀವು ನನ್ನ ಕಲಾವಿದರನ್ನು ಮತ್ತು ಬಚ್ಚನ್ ಕುಟುಂಬವನ್ನು ಎಳೆಯಲು ಪ್ರಯತ್ನಿಸಿದ್ದೀರಿ. ಆದರೆ ಅದು ವಿಫಲವಾಗಿದೆ. ಮೇಡಮ್ ನಾನು ಎರಡು ಬಾರಿ ಮದುವೆಯಾಗಿದ್ದೇನೆ, ಅದು ನನ್ನ ಅಪರಾಧವಾಗಿದ್ದರೆ ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ನಾನು ಎಲ್ಲರನ್ನೂ ತುಂಬಾ ಪ್ರೀತಿಸುತ್ತೇನೆ. ಅನೇಕ ನಟಿಯರೊಂದಿಗೆ ನಾನು ಕೆಲಸ ಮಾಡಿದ್ದೇನೆ. ಅಷ್ಟೇ ಅಲ್ಲ, ಇಂದಿಗೂ ಅನೇಕ ಮಹಿಳೆಯರು ನನ್ನೊಂದಿಗೆ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲರನ್ನೂ ನಾನು ಪ್ರೀತಿಸುತ್ತೇನೆ" ಎಂದಿದ್ದಾರೆ.
"ನಾನು ಆ ರೀತಿ ಅನುಚಿತವಾಗಿ ವರ್ತಿಸುವುದಿಲ್ಲ. ಅದನ್ನು ಸಹಿಸುವುದೂ ಇಲ್ಲ. ಏನಾಗುತ್ತದೆಯೋ ಅದನ್ನು ನಾನು ನೋಡುತ್ತೇನೆ. ನಿಮ್ಮ ವಿಡಿಯೋದಲ್ಲಿ ಎಷ್ಟು ಸತ್ಯ-ಎಷ್ಟು ಸುಳ್ಳು ಎಂಬುದು ತಿಳಿಯಲಿ. ನಿಮ್ಮ ಮೇಲೆ ನನ್ನ ಆಶೀರ್ವಾದ ಮತ್ತು ಪ್ರೀತಿ ಇದೆ. ನಿಮ್ಮ ಇಂಗ್ಲಿಷ್ ಟ್ವೀಟ್ಗೆ ನಾನು ಹಿಂದಿಯಲ್ಲಿ ಉತ್ತರಿಸಿದ್ದೇನೆ. ಅದಕ್ಕೆ ಕ್ಷಮೆಯಾಚಿಸುತ್ತೇನೆ" ಎಂದು ಹೇಳಿದ್ದಾರೆ.
"ಇಲ್ಲಿಯವರೆಗೆ ನಾನು ಭಯದಿಂದ ಇದ್ದೆ, ಈಗ ಹೊರಬಂದಿದ್ದೇನೆ" ಎಂದು ಪಾಯಲ್ ತಿಳಿಸಿದ್ದಾರೆ. ಇನ್ನು, ಪಾಯಲ್ ಟ್ವೀಟ್ಗೆ ಸ್ಪಂದಿಸಿದ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, "ನಟನ ವಿರುದ್ಧ ಎನ್‌ಸಿಡಬ್ಲ್ಯು ಪ್ರಕರಣ ದಾಖಲಿಸಲಾಗುವುದು. ನೀವು ನನಗೆ ದೂರನ್ನು ಚೇರ್‌ಪರ್ಸನ್- ncw@nic.inಗೆ ಕಳುಹಿಸಿ. ಬಳಿಕ NCWIndia ದೂರನ್ನು ಪರಿಶೀಲಿಸುತ್ತದೆ. @ಐಯಾಮ್ಪಾಯಲ್ಘೋಷ್" ಎಂದು ಶರ್ಮಾ ಹೇಳಿದ್ದಾರೆ.
-
You may send me the detailed complaint at chairperson-ncw@nic.in and @NCWIndia will look into it. @iampayalghosh https://t.co/KZzPwkmuwZ
— Rekha Sharma (@sharmarekha) September 19, 2020 " class="align-text-top noRightClick twitterSection" data="
">You may send me the detailed complaint at chairperson-ncw@nic.in and @NCWIndia will look into it. @iampayalghosh https://t.co/KZzPwkmuwZ
— Rekha Sharma (@sharmarekha) September 19, 2020You may send me the detailed complaint at chairperson-ncw@nic.in and @NCWIndia will look into it. @iampayalghosh https://t.co/KZzPwkmuwZ
— Rekha Sharma (@sharmarekha) September 19, 2020