ಹೈದರಾಬಾದ್: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ಚಿತ್ರ 'ಅಂತಿಮ್'ನ ಫಸ್ಟ್ ಲುಕ್ ರಿಲೀಸ್ ಆಗಿದೆ. ಸಲ್ಲು ಜೊತೆ ಅವರ ಭಾಮೈದ ಆಯುಷ್ ಶರ್ಮಾ ಕೂಡಾ ಲೀಡ್ ರೋಲ್ನಲ್ಲಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಆಯುಷ್ ಹಾಗೂ ಸಲ್ಲು ಕೈಕೈ ಮಿಲಾಯಿಸಿರುವ ಫಸ್ಟ್ ಲುಕ್ ಅನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಸಲ್ಮಾನ್ ಶೇರ್ ಮಾಡಿದ್ದಾರೆ. 'ಅಂತಿಮ್ ಬಿಗಿನ್ಸ್' ಎಂದು ವಿಡಿಯೋಗೆ ಟೈಟಲ್ ನೀಡಿದ್ದಾರೆ.
- " class="align-text-top noRightClick twitterSection" data="
">
ಇದೊಂದು ಗ್ಯಾಂಗ್ಸ್ಟರ್ ಕಥಾಹಂದರ ಇರುವ ಚಿತ್ರವಾಗಿದ್ದು, 2018ರಲ್ಲಿ ಬಿಡುಗಡೆಯಾದ ಮರಾಠಿಯ ಹಿಟ್ ಚಿತ್ರ 'ಮುಲ್ಶಿ ಪ್ಯಾಟರ್ನ್'ನ ರೀಮೇಕ್ ಆಗಿದೆ. ಮೂಲ ಚಿತ್ರವನ್ನು ಮರಾಠಿ ನಟ, ಚಲನಚಿತ್ರ ನಿರ್ಮಾಪಕ ಪ್ರವೀಣ್ ಟಾರ್ಡೆ ನಿರ್ಮಿಸಿದ್ದರೆ, ಹಿಂದಿಯ ರೀಮೇಕ್ ಅನ್ನು ನಟ, ಚಲನಚಿತ್ರ ನಿರ್ಮಾಪಕ ಮಹೇಶ್ ಮಂಜ್ರೇಕರ್ ನಿರ್ದೇಶಿಸಲಿದ್ದಾರೆ.
ಇದನ್ನೂ ಓದಿ: ಖ್ಯಾತ ನಟ ಮಿಥುನ್ ಚಕ್ರವರ್ತಿ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು
ಇನ್ನು ಚಿತ್ರದಲ್ಲಿ ಸಲ್ಮಾನ್ ಸಿಖ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಆಯುಷ್ ಗ್ಯಾಂಗ್ಸ್ಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಕೆಲ ಭಯಾನಕ ದೃಶ್ಯಗಳನ್ನು ಪುಣೆಯಲ್ಲಿ ಚಿತ್ರೀಕರಿಸಲಾಗಿದ್ದು, ಚಿತ್ರದ ಪ್ರಮುಖ ಚೇಸಿಂಗ್ ದೃಶ್ಯವನ್ನು ಕರ್ಜಾತ್‌ನಲ್ಲಿ ಚಿತ್ರೀಕರಿಸಲಾಗಿದೆ. ನಟ ನಿಕಿಟಿನ್ ಧೀರ್ ಕೂಡ ದರೋಡೆಕೋರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.