ETV Bharat / sitara

ಜೀ ರಿಷ್ತೆ ಅವಾರ್ಡ್ಸ್ 2020: ಸುಶಾಂತ್​ನನ್ನು ನೆನಪಿಸಿಕೊಂಡ ನಟಿ ಅಂಕಿತಾ ಲೋಖಂಡೆ - ಪವಿತ್ರಾ ರಿಷ್ತಾ

ಮುಂಬೈನಲ್ಲಿ ನಡೆದ ಜೀ ರಿಷ್ತೆ ಅವಾರ್ಡ್ಸ್ 2020 ಯಲ್ಲಿ ನಟಿ ಅಂಕಿತಾ ಲೋಖಂಡೆ ಅವರು ತಮ್ಮ ಪವಿತ್ರಾ ರಿಷ್ತಾ ಧಾರಾವಾಹಿಯ ಸಹನಟ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ವಿಶೇಷ ಗೌರವ ಸಲ್ಲಿಸಿದರು.

ಪವಿತ್ರಾ ರಿಷ್ತಾ
ಪವಿತ್ರಾ ರಿಷ್ತಾ
author img

By

Published : Dec 6, 2020, 12:47 PM IST

ಮುಂಬೈ: ಶನಿವಾರ ರಾತ್ರಿ ನಗರದಲ್ಲಿ ನಡೆದ ಜೀ ರಿಷ್ತೆ ಅವಾರ್ಡ್ಸ್​ 2020ನಲ್ಲಿ ನಟಿ ಅಂಕಿತಾ ಲೋಖಂಡೆ ಅವರು ದಿವಂಗತ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರಿಗೆ ವಿಶೇಷ ಗೌರವ ನೀಡುವ ಮೂಲಕ ಮತ್ತೆ ನೆನಪಿಸಿಕೊಂಡಿದ್ದಾರೆ.

ಲೋಖಂಡೆ ಅವರು ನೃತ್ಯದ​​ ಮೂಲಕ ಸುಶಾಂತ್​​ ಅವರೊಂದಿಗಿನ ತೆರೆಯ ಮೇಲಿನ ಪ್ರಣಯವನ್ನು ಮರುಸೃಷ್ಟಿಸಲು ಪ್ರಯತ್ನಿಸಿದರು. 2016 ರಲ್ಲಿ ಸುಶಾಂತ್​ರನ್ನು ತೊರೆಯುವ ಮೊದಲು ಲೋಖಂಡೆ ಹಲವಾರು ವರ್ಷಗಳ ಕಾಲ ಡೇಟಿಂಗ್ ಕೂಡ ಮಾಡಿದ್ದರು ಎಂದು ಹೇಳಲಾಗಿದೆ.

"ದಯವಿಟ್ಟು ಕಾರ್ಯಕ್ರಮವನ್ನು ವೀಕ್ಷಿಸಿ, ಏಕೆಂದರೆ ಇದು ಸುಶಾಂತ್ ಅವರ ಎಲ್ಲ ಅಭಿಮಾನಿಗಳಿಗೆ ವಿಶೇಷವಾಗಿದೆ. ಜನರು ಸುಶಾಂತ್ ಅವರನ್ನು ತುಂಬಾ ಪ್ರೀತಿಸುತ್ತಾರೆ ಎಂದು ನನಗೆ ತಿಳಿದಿದೆ. ಅವರಿಗೆ ನನ್ನಿಂದ ಒಂದು ಸಣ್ಣ ಗೌರವ ನೀಡಲಾಗಿದೆ. ದಯವಿಟ್ಟು ಅದನ್ನು ನೋಡಿ ಮತ್ತು ಅದಕ್ಕೆ ನಿಮ್ಮ ಸಹಕಾರ ನೀಡಿ. " ಎಂದು ಅಂಕಿತಾ ಲೋಖಂಡೆ ಹೇಳಿದ್ದಾರೆ.

ಇದನ್ನು ಓದಿ: ಕಿಕ್​​ ಫ್ಲೈ ವಿಡಿಯೋ ಶೇರ್​​ ಮಾಡಿದ ಟೈಗರ್​ ಶ್ರಾಫ್​​​

"ಈ ಸಮಯದಲ್ಲಿ ನಾನು ಅಭಿನಯಿಸುವುದು ತುಂಬಾ ಕಷ್ಟ. ನೋವಿನ ಸಂಗತಿ ಕೂಡ ಹೌದು" ಎಂದು ಅವರು ಇನ್​ಸ್ಟಾಗ್ರಾಮ್​ನಲ್ಲಿ ವೀಡಿಯೊದ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.