ನವದೆಹಲಿ: ಎರಡು ಮುದ್ದಾದ ನಾಯಿಗಳನ್ನು ಸಾಕಿ - ಸಲುಹಿರುವ ನಟಿ ಅನನ್ಯಾ ಪಾಂಡೆ ಅವರ ಹೆಮ್ಮೆಯ ಶ್ವಾನಗಳ ಪೋಷಣೆಯ ಬಗ್ಗೆ ಬಹಳ ಕಾಳಜಿ ವಹಿಸುತ್ತಾರೆ. ಸಾಕು ಪ್ರಾಣಿಗಳ ಆಹಾರದ ಬ್ರ್ಯಾಂಡ್‌ಗಳು ಡ್ರೂಲ್ಸ್ ಸಾಕುಪ್ರಾಣಿಗಳ ಪೋಷಣೆ ಬಗ್ಗೆ ಜನರಿಗೆ ತಿಳಿಸಲು ಮತ್ತು ಆ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಮಾಡಲು ನಟಿ ಅನನ್ಯಾ ಪಾಂಡ್ಯ ಅವರನ್ನು ಡ್ರೂಲ್ಸ್ ಕಂಪನಿ ಬ್ರಾಂಡ್ ಅಂಬಾಸಿಡರ್ ಆಗಿ ಘೋಷಣೆ ಮಾಡಿದೆ.
ಭಾರತದಲ್ಲಿ ಬೆಕ್ಕುಗಳ ಆರೈಕೆಯನ್ನು ಪ್ರೋತ್ಸಾಹಿಸುತ್ತಿರುವ ಡ್ರೂಲ್ಸ್ ಕಂಪನಿ, ಸಾಕು ಪ್ರಾಣಿಗಳಿಗೆ ಆರೋಗ್ಯಕರ ವಾತಾವರಣ ಸೃಷ್ಟಿಸಲು ಶ್ರದ್ಧೆಯಿಂದ ಕೆಲಸ ಮಾಡುತ್ತಿದೆ. ಸಾಕು ಪ್ರಾಣಿಗಳಿಗೆ ಆಹಾರ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಕಂಪನಿ ಆಕರ್ಷಕ ಆಹಾರ ಪ್ಯಾಕ್ಗಳನ್ನು ತಯಾರಿಸುವುದರಲ್ಲಿ ಮುಂಚೂಣಿಯಲ್ಲಿದೆ.
ಕಂಪನಿಯ ಬ್ತಾಂಡ್ ಅಂಬಾಸಿಡರ್ ಆಗಿ ಆಯ್ಕೆ ಆಗಿರುವ ಬಗ್ಗೆ ಪ್ರತಿಕ್ರಿಸಿರುವ ಅನನ್ಯಾ, ನಾಯಿಗಳು ನಮ್ಮ ಉತ್ತಮ ಸ್ನೇಹಿತರೆಂದು ಪದೇ ಪದೆ ಸಾಬೀತಾಗಿದೆ. ನನ್ನ ಮಕ್ಕಳಾದ ಆಸ್ಟ್ರೋ ಮತ್ತು ಮಿಠಾಯಿ (ಕ್ರಮವಾಗಿ ಗೋಲ್ಡನ್ ರಿಟ್ರೈವರ್ ಮತ್ತು ಯಾರ್ಕ್‌ಷೈರ್ ಟೆರಿಯರ್) ನಾನು ಬೇಷರತ್ ಪ್ರೀತಿಯನ್ನು ಪಡೆಯುತ್ತಿದ್ದೇನೆ. ಹೀಗಾಗಿಯೇ ನಾನು ಅವುಗಳ ರಕ್ಷಣೆ, ಬೆಳವಣಿಗೆ ಮತ್ತು ಪೋಷಣೆಯನ್ನು ಕಾಳಜಿಪೂರ್ವಕವಾಗಿ ಹಾಗೂ ಪ್ರೀತಿಯಿಂದ ಮಾಡುತ್ತಿದ್ದೇನೆ. ಸಾಕು ಪ್ರಾಣಿಗಳ ಜೀವನದಲ್ಲಿ ಆಹಾರ ಎಷ್ಟು ಮುಖ್ಯ ಎಂಬುದನ್ನು ಅರ್ಥ ಮಾಡಿಕೊಂಡಿದ್ದೇನೆ. ಇದೇ ವೇಳೆ ಪ್ರಾಣಿಗಳ ಬದುಕಿಗೆ ಆಸರೆಯಾಗಿರುವ ಡ್ರೂಲ್ಸ್‌ನೊಂದಿಗೆ ಸಹಕರಿಸಲು ನಾನು ಹೆಮ್ಮೆಪಡುತ್ತೇನೆ ಎಂದಿದ್ದಾರೆ.
ಇನ್ನು ಡ್ರೂಲ್ಸ್‌ನ ರಾಷ್ಟ್ರೀಯ ಮಾರಾಟ ನಿರ್ದೇಶಕ ಡಾ.ಶಶಾಂಕ್ ಸಿನ್ಹಾ ಮಾತನಾಡಿ, ಪ್ರಾಣಿಗಳ ಚರ್ಮ ಮತ್ತು ಅವುಗಳ ದೇಹಾರೋಗ್ಯವನ್ನು ನೋಡಿಕೊಳ್ಳುವುದು ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಳ ಜೀರ್ಣಾಂಗ ವ್ಯವಸ್ಥೆಯ ಪೋಷಣೆ ಕಂಪನಿಯ ಬಹುಮುಖ್ಯ ಕೆಲಸವಾಗಿದೆ. ಸಾಕುಪ್ರಾಣಿಗಳಿಗೆ ಆರೋಗ್ಯಕರ ಜೀವನ ಮತ್ತು ಆಹಾರ ಪದ್ಧತಿ ಉತ್ತೇಜಿಸುವಲ್ಲಿ ಡ್ರೂಲ್ಸ್ ಯಾವಾಗಲೂ ಹೆಮ್ಮೆಪಡುತ್ತದೆ ಎಂದು ಹೇಳಿದ್ದಾರೆ. ಅದರಲ್ಲೂ ಅನನ್ಯಾ ಪಾಂಡೆ, ನಮ್ಮೊಂದಿಗೆ ಕೈ ಜೋಡಿಸಿರುವುದಕ್ಕೆ ನಾವು ರೋಮಾಂಚನಗೊಂಡಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ:ಫೇಸ್‌ಬುಕ್ ಷೇರುಗಳ ಮೌಲ್ಯದಲ್ಲಿ ಭಾರಿ ಕುಸಿತ; ಶ್ರೀಮಂತಿಕೆಯಲ್ಲಿ ಅದಾನಿ, ಅಂಬಾನಿ ನಂತರದ ಸ್ಥಾನಕ್ಕೆ ಇಳಿಕೆ..