ETV Bharat / sitara

ಜೂನ್ 18ರಂದು ಝುಂಡ್ ಸಿನಿಮಾ ಬಿಡುಗಡೆ - ಬಾಲಿವುಡ್ ಸುದ್ದಿ

ಬಿಗ್ ಬಿ ಅಮಿತಾಬ್​​ ಬಚ್ಚನ್ ಅವರ ಸಿನಿಮಾ ಝುಂಡ್ ಜೂನ್ 18ರಂದು ಬಿಡುಗಡೆಯಾಗಲಿದೆ ಎಂದು ಸ್ವತಃ ಅಮಿತಾಬ್ ಬಚ್ಚನ್ ಟ್ವೀಟ್​ ಮಾಡಿ ಮಾಹಿತಿ ನೀಡಿದ್ದಾರೆ.

Amitabh Bachchan-starrer 'Jhund' in theatres on June 18
ಜೂನ್ 18ಕ್ಕೆ ಬಿಗ್​ ಬಿಯ ಝುಂಡ್ ಸಿನಿಮಾ ಬಿಡುಗಡೆ
author img

By

Published : Feb 19, 2021, 9:35 PM IST

ಮುಂಬೈ: ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಹೊಸ ಸಿನಿಮಾ ಝುಂಡ್ ಇದೇ ವರ್ಷದ ಜೂನ್ 18ರಂದು ತೆರೆಗೆ ಅಪ್ಪಳಿಸಲಿದೆ ಎಂದು ಸ್ವತಃ ಅಮಿತಾಬ್​ ಬಚ್ಚನ್ ಟ್ವೀಟ್ ಮಾಡಿ, ಅಭಿಮಾನಿಗಳಲ್ಲಿ ಸಂತಸ ಇಮ್ಮಡಿಗೊಳಿಸಿದ್ದಾರೆ.

'ಕೋವಿಡ್​ನಿಂದ ಹಿನ್ನಡೆಯಾಗಿತ್ತು. ಆದರೆ ನಾವು ಕಂಬ್ಯಾಕ್ ಮಾಡಿದ್ದೇವೆ. ನಾವು ಚಿತ್ರಮಂದಿರಗಳಿಗೆ ಮರಳಿದ್ದೇವೆ. ಝುಂಡ್ ಜೂನ್ 18ಕ್ಕೆ ಬಿಡುಗಡೆಯಾಗಲಿದೆ' ಎಂದು ಬಿಗ್ ಬಿ ಅಮಿತಾಬ್ ಬಚ್ಚನ್ ಟ್ವೀಟಿಸಿದ್ದಾರೆ.

ಸೈರಾಟ್ ಸಿನಿಮಾದ ನಾಗರಾಜ್ ಮಂಜುಳೆ ಈ ಸಿನಿಮಾವನ್ನು ನಿರ್ದೇಶಿಸಿದ್ದು, ಸಿನಿಮಾ ಟ್ರೇಡ್ ಅನಾಲಿಸ್ಟ್ ತರನ್ ಆದರ್ಶ್ ಕೂಡ ಈ ಬಗ್ಗೆ ಟ್ವೀಟ್ ಮಾಡಿ, ಜೂನ್ 18ರಂದು ಸಿನಿಮಾ ಬಿಡುಗಡೆಯನ್ನು ಇನ್ನೊಮ್ಮೆ ಖಚಿತಪಡಿಸಿದ್ದಾರೆ.

ಈ ಸಿನಿಮಾದಲ್ಲಿ ಅಮಿತಾಬ್​ ಬಚ್ಚನ್ ಸಾಮಾಜಿಕ ಕಾರ್ಯಕರ್ತ ಮತ್ತು ಸ್ಲಮ್ ಸಾಕರ್ ಎಂಬ ಸಂಘಟನೆ ಸೃಷ್ಟಿಸಿದ ವಿಜಯ್ ಬರ್ಸೆ ಎಂಬ ಸಾಧಕನ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಸಿನಿಮಾ ಓರ್ವ ಪ್ರೊಫೆಸರ್ ಯಾವ ರೀತಿಯಲ್ಲಿ ಬಡ ಮಕ್ಕಳಿಗೆ ಫುಟ್​ಬಾಲ್ ತಂಡ ಕಟ್ಟಲು ನೆರವು ನೀಡುತ್ತಾನೆ ಎಂಬ ಕಥೆ ಹೊಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.