ETV Bharat / sitara

ಕನ್ನಡದ 'ಯು ಟರ್ನ್' ಹಿಂದಿಗೆ ರಿಮೇಕ್: ಥ್ರಿಲ್ಲರ್ ವರದಿ ನೀಡಲು ಬರ್ತಿದ್ದಾರೆ ಅಲಯ.ಎಫ್

ಶ್ರದ್ಧಾ ಶ್ರೀನಾಥ್ ಅಭಿನಯದ 2016ರಲ್ಲಿ ಕನ್ನಡದಲ್ಲಿ ತೆರೆ ಕಂಡಿದ್ದ ‘ಯು ಟರ್ನ್’ ಸಿನಿಮಾ ಇದೀಗ ಕಲ್ಟ್ ಮೂವೀಸ್ ಬ್ಯಾನರ್​ ಅಡಿ ಹಿಂದಿಗೆ ರಿಮೇಕ್​ ಆಗುತ್ತಿದೆ.

author img

By

Published : Jul 5, 2021, 4:58 PM IST

Alaya F to star in Hindi remake of Kannada hit U-Turn
ಥ್ರಿಲ್ಲರ್ ವರದಿ ನೀಡಲು ಬರುತ್ತಿದ್ದಾರೆ ಅಲಯ.ಎಫ್

ಕನ್ನಡ ಥ್ರಿಲ್ಲರ್ ನಿನಿಮಾ ‘ಯು ಟರ್ನ್’ ಹಿಂದಿಯಲ್ಲಿ ರಿಮೇಕ್ ಆಗುತ್ತಿದೆ. ‘ಜವಾನಿ ಜಾನೆಮನ್’ ನಟಿ ಅಲಯ.ಎಫ್ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.

ಚಿತ್ರಕ್ಕೆ ಚೊಚ್ಚಲ ನಿರ್ದೇಶಕ ಆರಿಫ್ ಖಾನ್ ಆಕ್ಷನ್ ಕಟ್ ಹೇಳಲಿದ್ದು, ಜುಲೈ 6 ರಂದು (ನಾಳೆ) ಯು ಟರ್ನ್ ಸೆಟ್ಟೇರಲಿದೆ. ಚಿತ್ರವನ್ನು ಶೋಭಾ ಕಪೂರ್ ಮತ್ತು ಏಕ್ತಾ ಕಪೂರ್ ಅವರ ಬಾಲಾಜಿ ಟೆಲಿಫಿಲ್ಮ್ಸ್ಅಡಿಯಲ್ಲಿನ ಹೊಸ ವಿಭಾಗವಾದ ಕಲ್ಟ್ ಮೂವೀಸ್ ನಿರ್ಮಿಸಲಿದೆ.

ಅನುರಾಗ್ ಕಶ್ಯಪ್ ಅವರ ದೊಬಾರಾ ಮತ್ತು ದಿಬಾಕರ್ ಬ್ಯಾನರ್ಜಿ ಅವರ ಎಲ್ಎಸ್​ಡಿ 2 ನಂತರ ಕಲ್ಟ್ ಮೂವೀಸ್ ಬ್ಯಾನರ್​ ಅಡಿ ನಿರ್ಮಾಣವಾಗುತ್ತಿರುವ ಮೂರನೇ ಚಿತ್ರ ಇದಾಗಿದೆ. ಶ್ರದ್ಧಾ ಶ್ರೀನಾಥ್ ಅಭಿನಯದ ‘ಯು ಟರ್ನ್’ 2016ರಲ್ಲಿ ಕನ್ನಡದಲ್ಲಿ ತೆರೆ ಕಂಡಿತ್ತು. ಈ ಹಿಂದೆ 2017 ರಲ್ಲಿ ಮಲಯಾಳಂನಲ್ಲಿ, 2018 ರಲ್ಲಿ ತೆಲುಗು-ತಮಿಳು ಭಾಷೆಯಲ್ಲಿ ರಿಮೇಕ್​ ಮಾಡಲಾಗಿದೆ.

ಏಕ್ತಾ ಕಪೂರ್ ಅವರು 2020ರ ತಮ್ಮ ಮೊದಲ ಚಿತ್ರದಲ್ಲಿ ನಟಿಸಿ ಅಲಯ ಎಫ್​ ಅಭಿನಯಕ್ಕೆ ಮನಸೋತಿದ್ದರು. ಈ ಚಿತ್ರದಲ್ಲಿ ವರದಿಗಾರರಾಗಿ ಅಲಯ ನಟಿಸಲಿದ್ದಾರೆ. ನಿರ್ದೇಶಕ ಆರಿಫ್ ಖಾನ್ ಅವರು "ಗುಂಜನ್ ಸಕ್ಸೇನಾ", "2 ಸ್ಟೇಟ್ಸ್" ಮತ್ತು "ಸ್ಟೂಡೆಂಟ್ಸ್​ ಆಫ್​ ದಿ ಈಯರ್​​" ಸೇರಿದಂತೆ ಹತ್ತು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.