ಬಾಲಿವುಡ್ ನಟಿ ಆಲಿಯಾ ಭಟ್ ಅಭಿನಯದ 'ಗಂಗೂಬಾಯಿ ಕಥಿವಾಡಿ' ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿರುವ ನಟ ಅಜಯ್ ದೇವಗನ್ ಇಂದು ತಮ್ಮ ಫಸ್ಟ್ ಲುಕ್ ಪೋಸ್ಟರ್ ಅನ್ನು ಅನಾವರಣಗೊಳಿಸಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಹಾಗೂ ಟ್ವಟರ್ ಹ್ಯಾಂಡಲ್ನಲ್ಲಿ ದೇವಗನ್ ಅವರು ಚಿತ್ರದಲ್ಲಿ ತಮ್ಮ ಪಾತ್ರದ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಪಿಸ್ತಾ ಕಲರ್ ವಿಂಟೇಜ್ ಕಾರಿನ ಮುಂದೆ ಬಿಳಿ ಬಣ್ಣದ ಪ್ಯಾಂಟ್, ಬಿಳಿ ಬಣ್ಣದ ಶರ್ಟ್, ಬೂದು ಬಣ್ಣದ ಬ್ಲೇಜರ್, ಗಾಢ-ಕಂದು ಬಣ್ಣದ ಕ್ಯಾಪ್ ಧರಿಸಿ ಅಜಯ್ ಪೋಸ್ ನೀಡುತ್ತಿರುವ ಪೋಸ್ಟರ್ ಇದಾಗಿದೆ. 'ಗಂಗೂಬಾಯಿ ಕಥಿವಾಡಿ' ಸಿನಿಮಾದ ಟ್ರೈಲರ್ ನಾಳೆ ಬಿಡುಗಡೆಯಾಗುತ್ತಿದೆ ಎಂಬ ಸಿಹಿಸುದ್ದಿಯನ್ನು ಅಜಯ್ ದೇವಗನ್ ನೀಡಿದ್ದಾರೆ.
-
Apni pehchaan se chaar🌙 lagane, aa rahe hai hum! Trailer out tomorrow. #GangubaiKathiawadi in cinemas on 25th Feb, 2022. #SanjayLeelaBhansali @aliaa08 @jayantilalgada @PenMovies @bhansali_produc @saregamaglobal pic.twitter.com/zF1EB1hdtq
— Ajay Devgn (@ajaydevgn) February 3, 2022 " class="align-text-top noRightClick twitterSection" data="
">Apni pehchaan se chaar🌙 lagane, aa rahe hai hum! Trailer out tomorrow. #GangubaiKathiawadi in cinemas on 25th Feb, 2022. #SanjayLeelaBhansali @aliaa08 @jayantilalgada @PenMovies @bhansali_produc @saregamaglobal pic.twitter.com/zF1EB1hdtq
— Ajay Devgn (@ajaydevgn) February 3, 2022Apni pehchaan se chaar🌙 lagane, aa rahe hai hum! Trailer out tomorrow. #GangubaiKathiawadi in cinemas on 25th Feb, 2022. #SanjayLeelaBhansali @aliaa08 @jayantilalgada @PenMovies @bhansali_produc @saregamaglobal pic.twitter.com/zF1EB1hdtq
— Ajay Devgn (@ajaydevgn) February 3, 2022
ಇದನ್ನೂ ಓದಿ: 'ಅಥರ್ವ'ನಾಗಿ ಎಂಎಸ್ ಧೋನಿ.. ಫಸ್ಟ್ ಲುಕ್ ರಿಲೀಸ್
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಈ ಚಿತ್ರದಲ್ಲಿ ಆಲಿಯಾ ಭಟ್ ಮುಖ್ಯ ಭೂಮಿಕೆಯಲ್ಲಿ ವೇಶ್ಯೆ ಪಾತ್ರದಲ್ಲಿ ನಟಿಸಿದ್ದು, ಈಗಾಗಲೇ ಚಿತ್ರದ ಟೀಸರ್ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಇದೇ ಫೆಬ್ರವರಿ 25 ರಂದು 'ಗಂಗೂಬಾಯಿ ಕಥಿವಾಡಿ' ಸಿನಿಮಾ ತೆರೆಗೆ ಬರಲಿದೆ. ಹುಸೇನ್ ಜೈದಿ ಬರೆದಿರುವ ‘ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ ಪುಸ್ತಕದ ಅಧ್ಯಾಯಗಳಲ್ಲಿ ಒಂದನ್ನು ಆರಿಸಿ, ಕಾಮಾಟಿಪುರದ ವೇಶ್ಯೆ ಗಂಗುಬಾಯಿ ಕೋಠೆವಾಲಿ ಜೀವನದ ಸತ್ಯ ಘಟನೆ ಆಧರಿಸಿ ಈ ಚಿತ್ರವನ್ನು ನಿರ್ದೇಶಿಸಲಾಗಿದೆ.