ಮುಂಬೈ: ಸ್ಟಾರ್ ಡೈರೆಕ್ಟರ್ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾದಲ್ಲಿ, ಸಿಂಗಮ್ ಸ್ಟಾರ್ ಅಜಯ್ ದೇವ್‌ಗನ್ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅವರಿಗೆ ಗುರು ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗ್ತಿದೆ.
- " class="align-text-top noRightClick twitterSection" data="
">
ರಾಜಮೌಳಿ ಅವರು ಬಾಲಿವುಡ್ ತಾರೆಗಳಾದ ಆಲಿಯಾ ಭಟ್ ಮತ್ತು ಅಜಯ್ ದೇವ್‌ಗನ್ ಅವರನ್ನು ಆರ್‌ಆರ್‌ಆರ್ ಸಿನಿಮಾಕ್ಕೆ ಕರೆತರಲಿದ್ದಾರೆ ಎಂದು ಈ ಹಿಂದೆಯೇ ಹೇಳಲಾಗುತ್ತಿತ್ತು. ಅದರಂತೆ ದೇವ್‌ಗನ್ ಅವರು ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಅವರ ಪಾತ್ರಕ್ಕೆ ರಾಷ್ಟ್ರೀಯವಾದಿಯಾಗಿ ಹಾಗೂ ಗುರುವಾಗಿ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ.
ಅಜಯ್ ಅವರು ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸುಮಾರು 10 ದಿನಗಳ ಕಾಲ ಚಿತ್ರೀಕರಣ ಮಾಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. 1900 ರ ದೆಹಲಿಯನ್ನು ಮರುಸೃಷ್ಟಿಸಿದ ಚಿತ್ರದ ಫ್ಲ್ಯಾಷ್‌ಬ್ಯಾಕ್ ದೃಶ್ಯಗಳಲ್ಲಿ ನಟ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಫ್ಲ್ಯಾಷ್‌ಬ್ಯಾಕ್ ಎಪಿಸೋಡ್‌ಗಳಲ್ಲಿ ಅಜಯ್ ಅವರ ಜೊತೆ ಸಹನಟ ಶ್ರಿಯಾ ಸರನ್ ಸಹ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
- " class="align-text-top noRightClick twitterSection" data="">
ಸುಮಾರು 450 ಕೋಟಿ ರೂ.ಗಳ ಅಂದಾಜು ಬಜೆಟ್‌ನಲ್ಲಿ ನಿರ್ಮಿಸುತ್ತಿರುವ ಈ ಚಿತ್ರವು 2021 ರ ಜನವರಿ 8 ರಂದು ಚಿತ್ರಮಂದಿರಗಳನ್ನು ತೆರೆಕಾಣುವ ಸಾಧ್ಯತೆಯಿದೆ. ಕೋವಿಡ್-19 ಹಿನ್ನೆಲೆ ಚಿತ್ರದ ಬಿಡುಗಡೆಯ ದಿನಾಂಕವನ್ನು ಮರು ನಿಗದಿಪಡಿಸುವ ಸಾಧ್ಯತೆಗಳು ಹೆಚ್ಚಾಗಿವೆ.