ಮುಂಬೈ: ನಾನು ಮನುಷ್ಯರಿಗಿಂತ ಪ್ರಾಣಿಗಳೊಂದಿಗೆ ಹೆಚ್ಚು ಆರಾಮದಾಯಕವಾಗಿರುತ್ತೇನೆ ಎಂದು ನಟಿ ಅದಾ ಶರ್ಮಾ ಹೇಳಿದ್ದಾರೆ.
ನಾನು ಯಾವಾಗಲೂ ಮನುಷ್ಯರಿಗಿಂತ ಪ್ರಾಣಿಗಳ ಜೊತೆ ಹೆಚ್ಚು ಹಾಯಾಗಿರುತ್ತೇನೆ. ನನಗೆ ಗೊತ್ತಿಲ್ಲದ ಜನರೊಂದಿಗೆ ಬೆರೆಯಲು ಹಾಗೂ ಪಾರ್ಟಿಗಳಂತಹ ಸಾಮಾಜಿಕ ಸ್ಥಳಗಳಿಗೆ ತೆರಳಲು ಇಷ್ಟಪಡುವುದಿಲ್ಲ. ನನ್ನನ್ನು ಪ್ರಾಣಿಗಳೊಂದಿಗೆ ಕಾಡಿನಲ್ಲಿ ಬಿಟ್ಟರೂ ನಾನು ಅದನ್ನು ಮನೆಯಂತೆಯೇ ಭಾವಿಸುತ್ತೇನೆ. ಪ್ರಾಣಿಗಳೊಂದಿಗೆ ಸಂವಹನ ಮಾಡುವುದು ಸುಲಭ ಎಂದಿದ್ದಾರೆ.
ಅದಾ ಶರ್ಮಾ, ಹೈದರಾಬಾದ್ನಲ್ಲಿ ತಮ್ಮ ಸಿನಿಮಾದ ಚಿತ್ರೀಕರಣ ನಡೆಸುತ್ತಿದ್ದಾಗ ಪಕ್ಷಿಯೊಂದು ಮರದಿಂದ ಕೆಳಗೆ ಬಿದ್ದು ಗಾಯಗೊಂಡಿತ್ತು. ಅದಾ ಗಾಯಗೊಂಡ ಹಕ್ಕಿಯನ್ನು ರಕ್ಷಿಸಿ, ಅದಕ್ಕೆ ಟ್ವಿಟರ್ ಎಂದು ಹೆಸರಿಟ್ಟಿದ್ದರು.
ನಾನು ಇನ್ಸ್ಟಾಗ್ರಾಮ್ನಲ್ಲಿ ಪ್ರೇಕ್ಷಕರಿಗೆ ಈ ಹಕ್ಕಿಗೆ ಏನೆಂದು ಕರೆಯುವಿರಿ ಕೇಳಿದ್ದೆ, ಅವರು ಟ್ವಿಟರ್ ಎಂದು ಉತ್ತರಿಸಿದ್ದರು. ನನಗೆ ಟ್ಟೀಟ್ ಮಾಡುವುದು ಮತ್ತು ಪಕ್ಷಿಯ ಶಬ್ದಗಳು ಇಷ್ಟವಾದ ಕಾರಣ ಟ್ವಿಟರ್ ಒಳ್ಳೆಯ ಹೆಸರು ಎಂದು ಭಾವಿಸಿ ಆ ಹೆಸರಿಟ್ಟೆ ಎಂದು ವಿವರಿಸಿದ್ದರು.
ಮೊಬೈಲ್ ನೆಟ್‌ವರ್ಕ್, ವಾಯುಮಾಲಿನ್ಯ ಮತ್ತು ಪರಿಸರ ಹಾನಿ ಬಗ್ಗೆ ಕಳವಳ ವ್ಯಕ್ತಪಡಿಸಿರುವ ನಟಿ ಅದಾ ಶರ್ಮಾ, ಪಕ್ಷಿಗಳು ಅಳಿವಿನಂಚಿನಲ್ಲಿರುವುದು ದುಃಖಕರವಾಗಿದೆ. ಅವು ತಾಯಿಯ ಸ್ವಭಾವದ ಒಂದು ಭಾಗ ಎಂದಿದ್ದಾರೆ.
ಈ ನಟಿ ಇತ್ತೀಚೆಗೆ ಅನುಪ್ರಿಯಾ ಗೋಯೆಂಕಾ ಜೊತೆಯಾಗಿ ನಟಿಸಿರುವ "ಚುಹಾ ಬಿಲ್ಲಿ" ಎಂಬ ಕಿರುಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ಐದು ಹೊಸ ತೆಲುಗು ಚಿತ್ರಗಳಿಗೆ ಸಹಿ ಹಾಕಿದ್ದಾರೆ.