ಮಹಿಗೆ ಇನ್ನೂ ಮದುವೆ ಆಗಿಲ್ಲ. ವಿವಾಹದ ಮುಂಚೆಯೇ ತಾಯಿ ಆಗಿರುವ ಸೀಕ್ರೆಟ್ ಈಗ ಹೊರಹಾಕಿದ್ದಾರೆ. ಇತ್ತೀಚಿಗೆ ನಡೆದ ಮಾಧ್ಯಮಗೋಷ್ಠಿಯಲ್ಲಿ ಈ ಸಂಗತಿ ಹೊರಹಾಕಿರುವ ಅವರು, ಮೂರು ವರ್ಷದ ಹಿಂದೆಯೇ ಹೆಣ್ಣು ಮಗುವಿಗೆ ಜನ್ಮ ನೀಡಿದೆ. ಈ ವಿಚಾರವನ್ನು ಎಂದಿಗೂ ಬಚ್ಚಿಡಲು ನಾನು ಬಯಸಿಲ್ಲ. ಆದರೆ, ಯಾರೂ ಇದುವರೆಗೂ ನನ್ನನ್ನು ಈ ಬಗ್ಗೆ ಪ್ರಶ್ನಿಸಿಲ್ಲ. ಆದ್ದರಿಂದ ಸದ್ಯ ಇದನ್ನು ನಿಮ್ಮ ಮುಂದೆ ಹೇಳುತ್ತಿದ್ದೇನೆ ಎಂದಿದ್ದಾರೆ.
- View this post on Instagram
Can't get over holiday mood! Bringing in new year in style. :) #redismycolour #readyfornew
">
ತಾವು ಮದುವೆಯಾಗದಿರುವ ವಿಚಾರವನ್ನು ಹಂಚಿಕೊಂಡಿರುವ ಅವರು, ನಾನು ಇನ್ನೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿಲ್ಲ. ನನಗೆ ಯಾವಾಗ ಮದುವೆ ಬೇಕು ಅನ್ನಿಸುತ್ತೋ ಅವಾಗ ಆಗುತ್ತೇನೆ. ಹಾಗಂತ ನಾನು ಸಿಂಗಲ್ ಆಗಿಲ್ಲ. ವ್ಯಕ್ತಿಯೊಬ್ಬರ ಜತೆ ಡೇಟಿಂಗ್ನಲ್ಲಿದ್ದೇನೆ ಎಂದು ತಿಳಿಸಿದ್ದಾರೆ.
- " class="align-text-top noRightClick twitterSection" data="
">
ಇನ್ನು ಸಂಬಂಧಿಕರ ಮನೆಯಲ್ಲಿ ನನ್ನ ಮಗಳು ಬೆಳೆಯುತ್ತಿದ್ದಾಳೆ ಎಂದಿರುವ ಮಹಿ, ಬರುವ ಆಗಸ್ಟ್ಗೆ ಆಕೆಗೆ ಮೂರು ವರ್ಷ ತುಂಬಲಿದೆ ಎಂದಿದ್ದಾರೆ. ಹಿಂದಿಯ ದೇವ್ ಡಿ, ಸಾಬ್ ಬಿವಿ ಗ್ಯಾಂಗ್ಸ್ಟರ್ ಹಾಗೂ ದಬಾಂಗ್ ಚಿತ್ರಗಳಲ್ಲಿ ನಟಿಸಿರುವ ಮಹಿ, ಸದ್ಯ Family of Thakurganj ಸಿನಿಮಾ ರಿಲೀಸ್ಗೆ ಎದುರು ನೋಡುತ್ತಿದ್ದಾರೆ.