ETV Bharat / sitara

ಚಿತ್ರರಂಗದಲ್ಲಿ ಅವಕಾಶಗಳಿಲ್ಲದೆ ಬೇಸರ....ಅಪಾರ್ಟ್​​​ಮೆಂಟ್ ಮೇಲಿಂದ ಧುಮುಕಿ ನಟಿ ಆತ್ಮಹತ್ಯೆ - ಅಪಾರ್ಟ್​ಮೆಂಟ್

ನಟಿ ಪೆರಲ್ ಹಾಗೂ ಆಕೆ ತಾಯಿ ನಡುವೆ ಪ್ರತಿದಿನ ಜಗಳ ನಡೆಯುತ್ತಿದ್ದು ಪೆರಲ್​ ಡಿಪ್ರೆಶನ್​​ಗೆ ಒಳಗಾಗಿದ್ದರು ಎನ್ನಲಾಗಿದೆ. ಬಹಳ ದಿನಗಳಿಂದ ಚಿತ್ರರಂಗದಲ್ಲಿ ಬ್ರೇಕ್​​​ಗಾಗಿ ಕಾಯುತ್ತಿದ್ದ ಪೆರಲ್​​​​ ಅಂದುಕೊಂಡಂತೆ ಅವಕಾಶಗಳು ಸಿಗದ ಕಾರಣ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪೆರಲ್ ಪಂಜಾಬಿ
author img

By

Published : Aug 30, 2019, 4:44 PM IST

ಮುಂಬೈ: ಚಿತ್ರರಂಗದಲ್ಲಿ ತಾನು ಅಂದುಕೊಂಡಿದ್ದನ್ನು ಸಾಧಿಸಲಾಗಲಿಲ್ಲ, ಒಳ್ಳೆ ಅವಕಾಶಗಳು ದೊರೆಯಲಿಲ್ಲ ಎಂಬ ದು:ಖದಿಂದ ನಟಿಯೊಬ್ಬರು ತಾನು ವಾಸವಿದ್ದ ಅಪಾರ್ಟ್​ಮೆಂಟ್ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಟಿ ಪೆರಲ್ ಪಂಜಾಬಿ ಎಂಬುವವರೇ ಆತ್ಮಹತ್ಯೆ ಮಾಡಿಕೊಂಡವರು.ಬಹಳ ದಿನಗಳಿಂದ ಅವರು​ ಚಿತ್ರರಂಗದಲ್ಲಿ ಬ್ರೇಕ್​​​ಗಾಗಿ ಕಾಯುತ್ತಿದ್ದರು ಎನ್ನಲಾಗಿದೆ. ಚಿಕ್ಕಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ಪೆರಲ್​​ಗೆ ಅಂದುಕೊಂಡಂತೆ ಅವಕಾಶಗಳು ದೊರೆಯದೆ ಆಕೆ ಡಿಪ್ರೆಶನ್​​​ಗೆ ಒಳಗಾಗಿದ್ದರು. ಪ್ರತಿದಿನ ಇದೇ ವಿಷಯಕ್ಕೆ ಪೆರಲ್​​ ಹಾಗೂ ತಾಯಿ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಈ ಹಿಂದೆ ಕೂಡಾ 2-3 ಬಾರಿ ಪೆರಲ್ ಆತ್ಮಹತ್ಯೆಗೆ ಯತ್ನಿಸಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಗುರುವಾರ ರಾತ್ರಿ ಸುಮಾರು 12 ಗಂಟೆ ವೇಳೆಗೆ ಅಪಾರ್ಟ್​​​ಮೆಂಟ್ ಬಳಿ ಸೆಕ್ಯೂರಿಟಿ ಗಾರ್ಡ್​ಗೆ ಏನೋ ಶಬ್ಧ ಕೇಳಿಬಂದಿದೆ. ಸ್ಥಳಕ್ಕೆ ಬಂದು ನೋಡಿದಾಗ ಪೆರಲ್ ಮೂರನೇ ಅಂತಸ್ತಿನಿಂದ ಬಿದ್ದು ತೀವ್ರ ಗಾಯದಿಂದ ಮೃತಪಟ್ಟಿದ್ದಾರೆ. ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Intro:Body:

actress suicide

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.