ETV Bharat / sitara

ಸಪ್ತಪದಿ ತುಳಿಯಲು ಸಜ್ಜು.. ಮುಂಬೈನಿಂದ ರಾಜಸ್ಥಾನಕ್ಕೆ ಪ್ರಯಾಣ ಬೆಳೆಸಿದ ಕತ್ರಿನಾ-ವಿಕ್ಕಿ - ಕತ್ರಿನಾ-ವಿಕ್ಕಿ ಕೌಶಲ್ ಮದುವೆ

ರಾಜಸ್ಥಾನದ ಖಾಸಗಿ ಹೋಟೆಲ್​ನಲ್ಲಿ ಬಾಲಿವುಡ್​ ಜೋಡಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್​​ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ನಾಳೆಯಿಂದ ಮೆಹಂದಿ ಕಾರ್ಯಕ್ರಮ ನಡೆಯಲಿದ್ದು, ಇಂದು ಮುಂಬೈನಿಂದ ಕುಟುಂಬ ಸಮೇತ ಪ್ರಯಾಣ ಬೆಳೆಸಿದರು.

Katrina Kaif Vicky Kaushal Wedding
Katrina Kaif Vicky Kaushal Wedding
author img

By

Published : Dec 6, 2021, 8:47 PM IST

Updated : Dec 6, 2021, 9:01 PM IST

ಮುಂಬೈ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ಬಾಲಿವುಡ್​ನ ಕ್ಯೂಟ್​​ ಗರ್ಲ್​ ಕತ್ರಿನಾ ಕೈಫ್​​ ಹಾಗೂ ನಟ ವಿಕ್ಕಿ ಕೌಶಲ್​​ ಇದೀಗ ರಾಜಸ್ಥಾನಕ್ಕೆ ಪ್ರಯಾಣ ಬೆಳೆಸಿದ್ದಾರೆ. ಮುಂಬೈನ ಏರ್​​ಪೋರ್ಟ್​​ನಿಂದ ಈ ಜೋಡಿ ವಿಶೇಷ ಹೆಲಿಕಾಪ್ಟರ್​​​​​ನಲ್ಲಿ ತೆರಳಿದರು.

ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಸಿಕ್ಸ್ ಸೆನ್ಸಸ್​ ಫೋರ್ಟ್ ಬರ್ವಾರಾದಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅದ್ಧೂರಿ ವಿವಾಹ ಕಾರ್ಯಕ್ರಮ ಡಿಸೆಂಬರ್​​ 9ರಂದು ಜರುಗಲಿದ್ದು, ಅದಕ್ಕಾಗಿ ಈಗಾಗಲೇ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ರಾಜಸ್ಥಾನಕ್ಕೆ ಪ್ರಯಾಣ ಬೆಳೆಸಿದ ಕತ್ರಿನಾ-ವಿಕ್ಕಿ

ಕನಸಿನ ಲೋಕದ ರೀತಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಬಾಲಿವುಡ್​​ನ ಪ್ರಣಯ ಪಕ್ಷಿಗಳು ಆಸೆಪಟ್ಟಿದ್ದು, ಅದಕ್ಕಾಗಿ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ವರ ವಿಕ್ಕಿ ಕೌಶಲ್ ಏಳು ಬಿಳಿ ಕುದುರೆಗಳ ಜೊತೆಗೆ ಕಲ್ಯಾಣ ಮಂಟಪಕ್ಕೆ ಎಂಟ್ರಿ ನೀಡಲಿದ್ದಾರೆ ಎನ್ನಲಾಗ್ತಿದೆ.

ನಾಳೆಯಿಂದ ಮೆಹಂದಿ ಮತ್ತು ಸಂಗೀತ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ಇಂದು ಈ ಜೋಡಿ ಮುಂಬೈನಿಂದ ಪ್ರಯಾಣ ಬೆಳೆಸಿತು. ಈಗಾಗಲೇ ಕತ್ರಿನಾ ಕೈಫ್ ಸಹೋದರಿ ನತಾಶಾ ಹಾಗೂ ಸ್ಟೈಲಿಸ್ಟ್​ ಅನೈತಾ ಶ್ರಾಫ್​​​ ಜೈಪುರ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.

ಇದನ್ನೂ ಓದಿರಿ: ನಾನು ಮದುವೆಯಾಗುವ ವ್ಯಕ್ತಿಯಲ್ಲಿ ಈ 3 ಗುಣಗಳಿರಬೇಕು ; ಕತ್ರಿನಾ ಬಯಸಿದ್ದು ನಿಜವಾಯಿತಾ?

ಡಿಸೆಂಬರ್ 9 ರಂದು ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಮದುವೆಯ ಭದ್ರತೆಗೆ ಸಲ್ಮಾನ್ ಖಾನ್ ಅವರ ಅಂಗರಕ್ಷಕ ಶೇರಾ ಹೆಚ್ಚುವರಿ ಭದ್ರತೆ ಒದಗಿಸಲಿದ್ದಾರೆ ಎಂದು ತಿಳಿದು ಬಂದಿದೆ. ಇದರ ಜೊತೆಗೆ ಮುಂಬೈ ಮೂಲದ ಈವೆಂಟ್ ಕಂಪನಿಯು ಮಾತಾ ಟ್ರಸ್ಟ್ ಧರ್ಮಶಾಲಾದಲ್ಲಿ 150 ಅತಿಥಿಗಳಿಗಾಗಿ 27 ಕೊಠಡಿಗಳು ಮತ್ತು ಐದು ಸಭಾಂಗಣಗಳನ್ನು ಕಾಯ್ದಿರಿಸಿದೆ. ಮದುವೆಗೆ ಆಗಮಿಸುತ್ತಿರುವ ಅತಿಥಿಗಳಿಗೆ ಕೋವಿಡ್​ ವ್ಯಾಕ್ಸಿನ್​​ ಪಡೆದುಕೊಳ್ಳುವುದು ಕಡ್ಡಾಯವಾಗಿದ್ದು, ಆರ್​​​ಟಿ-ಪಿಸಿಆರ್​ ವರದಿ ತೆಗೆದುಕೊಂಡು ಬರುವಂತೆ ಸೂಚನೆ ನೀಡಲಾಗಿದೆ.

Last Updated : Dec 6, 2021, 9:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.