ETV Bharat / sitara

ವಿವಾದಿತ ಟ್ವೀಟ್​​: ಬಾಲಿವುಡ್ ನಟಿ ಪಾಯಲ್​​​ ರೊಹಟಗಿಗೆ ಜಾಮೀನು

ಸೆಪ್ಟೆಂಬರ್​​​​ನಲ್ಲಿ ನಟಿ ಪಾಯಲ್, ನೆಹರು ಕುಟುಂಬದ ಬಗ್ಗೆ ಟ್ವಿಟರ್​​ನಲ್ಲಿ ವಿವಾದಾತ್ಮಕ ಪೋಸ್ಟ್​​ ಹಾಕಿದ್ದರು. ನೋಟೀಸ್​​​ಗೆ ಪಾಯಲ್ ಸ್ಪಂದಿಸಲಿಲ್ಲ ಎಂಬ ಕಾರಣಕ್ಕೆ ಭಾನುವಾರ ರಾಜಸ್ಥಾನ ಪೊಲೀಸರು ಪಾಯಲ್ ಅವರನ್ನು ವಶಕ್ಕೆ ಪಡೆದು ಸೋಮವಾರ ಬಂಧಿಸಿದ್ದರು.

author img

By

Published : Dec 17, 2019, 6:06 PM IST

Actress Payal Rohatgi got bail
ಪಾಯಲ್​​​ ರೊಹತ್ಗಿಗೆ ಜಾಮೀನು

ಭಾರತದ ಮಾಜಿ ಪ್ರಧಾನಿ ದಿವಂಗತ ಜವಹರ್​​​ಲಾಲ್ ನೆಹರು ಅವರ ಕುಟುಂಬದ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿ ಪೊಲೀಸರ ವಶದಲ್ಲಿದ್ದ ಬಾಲಿವುಡ್ ನಟಿ ಪಾಯಲ್​ ರೋಹಟಗಿ ಅವರಿಗೆ ಇಂದು ನ್ಯಾಯಾಲಯ ಜಾಮೀನು ನೀಡಿದೆ.

ಸೆಪ್ಟೆಂಬರ್​​​​ನಲ್ಲಿ ನಟಿ ಪಾಯಲ್, ನೆಹರು ಕುಟುಂಬದ ಬಗ್ಗೆ ಟ್ವಿಟರ್​​ನಲ್ಲಿ ವಿವಾದಾತ್ಮಕ ಪೋಸ್ಟ್​​ ಹಾಕಿದ್ದರು. ಈ ಬಗ್ಗೆ ಕಾಂಗ್ರೆಸ್ ಮುಖಂಡ ಚಾರ್ಮೇಶ್ ಶರ್ಮಾ ದೂರು ನೀಡಿದ್ದರಿಂದ ಪೊಲೀಸರು ಕೇಸ್ ದಾಖಲಿಸಿಕೊಂಡು ವಿವರಣೆ ನೀಡುವಂತೆ ಪಾಯಲ್​​​ಗೆ ನೋಟಿಸ್​​​​​​​​​​​​​​​ ನೀಡಿದ್ದರು. ಆದರೆ ಇದಕ್ಕೆ ಸ್ಪಂದಿಸಲಿಲ್ಲ ಎಂಬ ಕಾರಣಕ್ಕೆ ಭಾನುವಾರ ರಾಜಸ್ಥಾನ ಪೊಲೀಸರು ಪಾಯಲ್ ಅವರನ್ನು ವಶಕ್ಕೆ ಪಡೆದು ಸೋಮವಾರ ಬಂಧಿಸಿದ್ದರು. ನಿನ್ನೆ ಬೇಲ್ ವಿಚಾರಣೆ ನಡೆದು ಸ್ಥಳೀಯ ನ್ಯಾಯಾಲಯ ಆಕೆಯನ್ನು 8 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಆದೇಶ ಹೊರಡಿಸಿತ್ತು. ಇಂದು ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ಪಾಯಲ್​​ಗೆ ತಲಾ 25,000 ರೂಪಾಯಿಯ ಎರಡು ಬಾಂಡ್ ಆಧಾರದ ಅಡಿ ಜಾಮೀನು ನೀಡಿದೆ ಎಂದು ಸರ್ಕಾರಿ ವಕೀಲ ಯೋಗೇಶ್​​​ ಯಾದವ್​ ಹೇಳಿದ್ದಾರೆ.

Intro:Body:

payal rohatgi

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.