ಈ ಹಿಂದಿನಿಂದಲೂ ಸಾಮಾಜಿಕ ಜಾಲತಣಾದಲ್ಲಿ ಸದ್ದು ಮಾಡುವ ಬಾಲಿವುಡ್ ಹಾಟ್ ನಟಿ ಕಂಗನಾ ರಣಾವತ್ ಇದೀಗ ಮತ್ತೊಮ್ಮೆ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದು, ಇದೇ ಕಾರಣಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಟ್ರೋಲ್ ಆಗಿದ್ದಾರೆ.

ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಶೇರ್ ಮಾಡಿರುವ ನಟಿ ಕಂಗನಾ ರಣಾವತ್, ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಪ್ರಮುಖವಾಗಿ ಸೆಕ್ಸಿಯಾಗಿ ಕಾಣುವ ಉದ್ದೇಶದಿಂದಲೇ ವಿಭಿನ್ನದವಾದ ಡ್ರೆಸ್ ಹಾಕಿಕೊಂಡಿರುವ ಪೋಟೋ ಶೇರ್ ಮಾಡಿದ್ದಾರೆ. ಇದು ಪಡ್ಡೆ ಹುಡುಗರ ನಿದ್ದೆ ಹಾಳು ಮಾಡಿದೆ.

ಧಾಕಡ್ ಚಿತ್ರದಲ್ಲಿ ನಟನೆ ಮಾಡುತ್ತಿರುವ ಕಂಗನಾ, ಸದ್ಯ ಯುರೋಪ್ನಲ್ಲಿದ್ದು ಶೂಟಿಂಗ್ ಮುಗಿಸಿದ್ದಾರೆ. ಇದೇ ಬೆನ್ನಲ್ಲೇ ಚಿತ್ರತಂಡದೊಂದಿಗೆ ಪಾರ್ಟಿ ಮಾಡುತ್ತಿರುವ ಅವರು ಫೋಟೋ ಕ್ಲಿಕ್ಕಿಸಿಕೊಂಡು ಶೇರ್ ಮಾಡಿದ್ದಾರೆ. ಕ್ರಿಮ್ ಕಲರ್ ಬಟ್ಟೆ ಹಾಕಿಕೊಂಡಿರುವ ಅವರು, ಸೆಕ್ಸಿಯಾಗಿ ಪೋಸ್ ನೀಡಿದ್ದಾರೆ.

ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿ ಅದಕ್ಕೆ ಕ್ಯಾಪ್ಷನ್ ನೀಡಿರುವ ಕಂಗನಾ, ಪ್ರೀತಿಯಲ್ಲಿ ಹುಟ್ಟು, ಸಾವು ಇರಲ್ಲ ಎಂದಿದ್ದಾರೆ.

ಧಾಕಡ್ ಚಿತ್ರಕ್ಕೆ ನಿರ್ದೇಶಕ ರಜನೀಶ್ ಘಾಯ್ ಆ್ಯಕ್ಷನ್ ಕಟ್ ಹೇಳಿದ್ದು, ಪ್ರಮುಖ ಪಾತ್ರದಲ್ಲಿ ಅರ್ಜುನ್ ರಾಂಪಾಲ್, ದಿವ್ಯಾ ಸತ್ ಸೇರಿದಂತೆ ಅನೇಕರು ಅಭಿನಯಿಸಿದ್ದಾರೆ.

ಈ ಹಿಂದೆ ಕೂಡ ಅನೇಕ ವಿಷಯಗಳಿಂದಾಗಿ ನಟಿ ಕಂಗನಾ ರಣಾವತ್ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಗುಲಾಮರು ಇಟ್ಟಿರುವ ಇಂಡಿಯಾ ಎಂಬ ಹೆಸರು ಬದಲಾವಣೆ ಮಾಡಿ ಎಂದು ಹೇಳುವ ಮೂಲಕ ವಿವಾದ ಕೂಡ ಮೈಮೇಲೆ ಎಳೆದುಕೊಂಡಿದ್ದರು.

ಇದನ್ನೂ ಓದಿರಿ: ಸಿನಿಮಾದಲ್ಲಿ ಬೆತ್ತಲಾಗಿದ್ದ ರಾಧಿಕಾ ಆಪ್ಟೆ.. ಚಿತ್ರರಂಗದಿಂದ ಬಹಿಷ್ಕಾರಕ್ಕೆ ಟ್ವಿಟರ್ ಟ್ರೆಂಡ್!