ETV Bharat / sitara

ಗಡಸು ಧ್ವನಿಯಿಂದ ರೇಡಿಯೋದಲ್ಲಿ ರಿಜೆಕ್ಟ್​...ಕಷ್ಟದಲ್ಲಿದ್ರೂ ಬಿಗ್​ ಬಿ ಪಡೆದ ಮೊದಲ ಚಿತ್ರದ ಸಂಭಾವನೆ ಎಷ್ಟು? - ಅಮಿತಾಭ್​ ಬಚ್ಚನ್

ಯಾವ ಧ್ವನಿ ಆಕಾಶವಾಣಿಯಿಂದ ತಿರಸ್ಕೃತಗೊಂಡಿತ್ತೋ, ಅದು ಈಗ ಇಡೀ ಬಾಲಿವುಡ್​ನ್ನೇ ಆಳುತ್ತಿದೆ. ಈ ಧ್ವನಿ ಕೇಳಲು ಕೋಟ್ಯಾಂತರ ಅಭಿಮಾನಿಗಳು ಹಾತೋರೆಯುತ್ತಿರುತ್ತಾರೆ. 50 ವರ್ಷಗಳಿಂದ ಬಿಟೌನ್​ನಲ್ಲಿ ತನ್ನದೇ ಭದ್ರನೆಲೆ ಕಂಡುಕೊಂಡಿರುವ ಆ ಧ್ವನಿ ಬೇರೆ ಯಾರದ್ದೂ ಅಲ್ಲ...ಅದೇ ಬಿಗ್​ ಬಿ ಅಮಿತಾಭ್ ಬಚ್ಚನ್ ಅವರದ್ದು.

ಬಿಗ್​ಬಿ ಜತೆ ಶಾರುಖ್​ ವಿಶೇಷ ಸಂದರ್ಶನ
author img

By

Published : Mar 4, 2019, 8:28 PM IST

ಬಾಲಿವುಡ್​ ನಟ ಅಮಿತಾಭ್​ ಬಚ್ಚನ್​ ಸಂಭಾವನೆ ಈಗ ಕೋಟಿ ರೂ.ಗಳು ಮುಟ್ಟಿವೆ. ಇಂದು ಸಿನಿ ಜೀವನದಲ್ಲಿ ಇಷ್ಟೆಲ್ಲ ಸಕ್ಸಸ್​​ ಕಂಡು ಗೆಲುವಿನ ಶಿಖರವೇರಿರುವ ಬಿಗ್​ ಬಿ, ಒಂದು ಕಾಲದಲ್ಲಿ ಕಷ್ಟದ ಕೂಪದಲ್ಲಿ ಮುಳುಗಿದ್ದರು. ಈ ಸಂಕೋಲೆ ತೊಡೆದು ಚಿತ್ರರಂಗದಲ್ಲಿ 5 ದಶಕಗಳನ್ನು ಸವೆಸಿರುವ ಅಮಿತಾಭ್​ ತಮ್ಮ ಕಷ್ಟದ ದಿನಗಳನ್ನು ಮೆಲುಕು ಹಾಕಿದ್ದಾರೆ.

ಬಿಟೌನ್ ಬಾದ್​ ಷಾ ಶಾರೂಖ್​ ಖಾನ್​ ಅವರು ಬಿಗ್​ಬಿ ಅವರನ್ನು ಸಂದರ್ಶಿಸಿರುವ ವಿಡಿಯೋವನ್ನು ರೆಡ್​ ಚಿಲ್ಲೀಸ್​ ಸಂಸ್ಥೆ ಟ್ವಿಟರ್​ನಲ್ಲಿ ಹಂಚಿಕೊಂಡಿದೆ. ಈ ವಿಶೇಷ ಸಂದರ್ಶನಲ್ಲಿ ಸಾಕಷ್ಟು ಇಂಟ್ರೆಸ್ಟಿಂಗ್ ವಿಚಾರಗಳನ್ನು ಬಿಗ್​ ಬಿ ರಿವೀಲ್ ಮಾಡಿದ್ದಾರೆ.

  • " class="align-text-top noRightClick twitterSection" data="">

'1969ರಲ್ಲಿ ಕಲೆಯಲ್ಲೇ ಬದುಕು ರೂಪಿಸಿಕೊಳ್ಳಬೇಕೆಂದು ಊರು ತೊರೆದು ಮುಂಬೈಗೆ ಬಂದೆ. ನನ್ನ ಸ್ನೇಹಿತರು ಆಲ್​ ಇಂಡಿಯಾ ರೇಡಿಯೋದಲ್ಲಿ ನ್ಯೂಸ್​ ರೀಡರ್​ ಆಗುವಂತೆ ಸಲಹೆ ನೀಡಿದರು. ಆದರೆ, ಧ್ವನಿ ಗಡುಸಾಗಿದೆ ಎಂಬ ಕಾರಣಕ್ಕೆ ಎಐಆರ್​ ಇಂಗ್ಲಿಷ್​ ವಿಭಾಗದಲ್ಲಿ ನಾನು ರಿಜೆಕ್ಟ್​ ಆದೆ. ಹಿಂದಿಯಲ್ಲೂ ಕೂಡ ಟ್ರೈ ಮಾಡಿದೆ ಅಲ್ಲೂ ಸೆಲೆಕ್ಟ್​ ಆಗಲಿಲ್ಲ. 1969ರಲ್ಲಿ ಅದೃಷ್ಟ ಹುಡುಕಿಕೊಂಡು ಬಂತು. 'ಸಾತ್​ ಹಿಂದೂಸ್ಥಾನಿ' ಸಿನಿಮಾದಲ್ಲಿ ನಟಿಸಿದೆ. ಅದಕ್ಕೆ 5 ಸಾವಿರ ರೂಪಾಯಿ ಸಂಭಾವನೆ ಸಿಕ್ಕಿತು. ಈಗ ಕೋಟಿ ರೂ.ಗಳ ಸಂಭಾವನೆ ನನ್ನನ್ನು ಅರಸಿ ಬರುತ್ತಿದೆ. ಅದಕ್ಕೆ ನಾನು ಹಾಕಿದ ಪರಿಶ್ರಮವೇ ಕಾರಣ ಎಂದು ಬಿಗ್​ ಬಿ ಹೇಳಿದ್ದಾರೆ.

ಇನ್ನು ಸದ್ಯ ಶಾರೂಖ್​ ಒಡೆತನದ 'ರೆಡ್​ ಚಿಲ್ಲೀಸ್​ '​ ಎಂಟರ್​ಟ್ರೆನ್ಮೆಂಟ್​ ಸಂಸ್ಥೆ ನಿರ್ಮಿಸುತ್ತಿರುವ 'ಬದ್ಲಾ' ಸಿನಿಮಾದಲ್ಲಿ ಶಾರೂಖ್​ ಜತೆ ಅಮಿತಾಭ್​ ಪ್ರಮುಖ ರೋಲ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು 'ದಿ ಇನ್​ವಿಸಿಬಲ್​ ಗೆಸ್ಟ್'​ ಎಂಬ ಸ್ಪ್ಯಾನಿಶ್​ ಸಿನಿಮಾದ ರೀಮೇಕ್​ ಆಗಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.