ETV Bharat / sitara

ದಸ್ವಿಯಲ್ಲಿ ರಾಜಕಾರಣಿಯಾಗಲಿದ್ದಾರಂತೆ ಅಭಿಷೇಕ್​ ಬಚ್ಚನ್​!

author img

By

Published : Feb 5, 2021, 5:22 PM IST

ಇತ್ತೀಚೆಗೆ ಸುಜಯ್ ಘೋಷ್ ಅವರ ಚಿತ್ರ ಬಾಬ್ ಬಿಸ್ವಾಸ್ ಚಿತ್ರದ ಚಿತ್ರೀಕರಣ ಮುಗಿಸಿದ ಅಭಿಷೇಕ್ ಬಚ್ಚನ್ ಈಗ ದಿನೇಶ್ ವಿಜನ್ ನಿರ್ಮಾಣದ ದಸ್ವಿ ಫೆಬ್ರವರಿ 22 ರಿಂದ ಚಿತ್ರೀಕರಣಕ್ಕೆ ಸಿದ್ಧರಾಗಿದ್ದಾರೆ.

abhishek-bachchan
ಅಭಿಷೇಕ್​ ಬಚ್ಚನ್

ಹೈದರಾಬಾದ್: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಚಲನಚಿತ್ರ ನಿರ್ಮಾಪಕ ದಿನೇಶ್ ವಿಜನ್ ಬಂಡವಾಳ ಹೂಡುತ್ತಿರುವ ಮುಂಬರುವ ಚಿತ್ರದಲ್ಲಿ ರಾಜಕಾರಣಿಯ ಪಾತ್ರವನ್ನು ನಿರ್ವಹಿಸಲು ಸಜ್ಜಾಗಿದ್ದಾರೆ.

ಅಂದ ಹಾಗೇ ಈ ಸಿನಿಮಾ ಹೆಸರು ದಸ್ವಿ, ಚಿತ್ರದಲ್ಲಿ ಜೂನಿಯರ್​ ಬಚ್ಚನ್ 10ನೇ ವಿಫಲ ಮುಖ್ಯಮಂತ್ರಿಯಾಗಿ ನಟಿಸಲಿದ್ದಾರಂತೆ. ವರದಿಗಳ ಪ್ರಕಾರ, ಅಭಿಷೇಕ್ ಆಗ್ರಾದಲ್ಲಿ ದಸ್ವಿ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ. ಚಿತ್ರಕ್ಕೆ ತುಷಾರ್ ಜಲೋಟಾ ಆ್ಯಕ್ಷನ್​ ಕಟ್​ ಹೇಳಲಿದ್ದು, ಸಮಾಜದಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಸಂದೇಶವನ್ನು ನೀಡುವ ಕಥೆ ಇದೆಯಂತೆ.

ಭ್ರಷ್ಟ ರಾಜಕಾರಣಿಯೊಬ್ಬರ ಪಾತ್ರವನ್ನು ಅಭಿಷೇಕ್​ ನಿರ್ವಹಿಸಲಿದ್ದಾರೆ ಎಂಬ ಮಾತು ಬಾಲಿವುಡ್​ನಲ್ಲಿ ಹರಿದಾಡುತ್ತಿದೆ. ಚಿತ್ರದಲ್ಲಿ ಯಾಮಿ ಗೌತಮ್ ಮತ್ತು ನಿಮ್ರತ್ ಕೌರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಹರ್​ಯಾನ್ವಿ ಹುಡುಗಿಯ ಪಾತ್ರಕ್ಕಾಗಿ ಯಾಮಿ ಭರ್ಜರಿ ತಯಾರಿ ನಡೆಸಿದ್ದಾರಂತೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.