ETV Bharat / sitara

ವಿಚ್ಛೇದನದ ಬಳಿಕವೂ ಮಗ ಆಜಾದ್ ಜತೆ ಕಾಣಿಸಿದ ಅಮೀರ್ ಖಾನ್-ಕಿರಣ್ ರಾವ್ - ಬಾಲಿವುಡ್ ಸೂಪರ್‌ಸ್ಟಾರ್ ಅಮೀರ್ ಖಾನ್

ಲಡಾಖ್​ನಲ್ಲಿ 'ಲಾಲ್ ಸಿಂಗ್ ಚಡ್ಡಾ' ಸಿನಿಮಾ ಚಿತ್ರೀಕರಣ ಮುಗಿಸಿ ಹಿಂದಿರುಗಿದ್ದ ಅಮೀರ್ ಖಾನ್ ಮತ್ತು ಮತ್ತು ಪುತ್ರ ಆಜಾದ್​ನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಕಿರಣ್​ ಬರಮಾಡಿಕೊಂಡಿದ್ದರು. ಇಬ್ಬರೂ ಕೂಡ 'ಲಾಲ್ ಸಿಂಗ್ ಚಡ್ಡಾ' ಸೇರಿ ಅನೇಕ ಸಿನಿಮಾ ಪ್ರಾಜೆಕ್ಟ್​ಗಳಲ್ಲಿ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ..

ಅಮೀರ್ ಖಾನ್-ಕಿರಣ್ ರಾವ್
ಅಮೀರ್ ಖಾನ್-ಕಿರಣ್ ರಾವ್
author img

By

Published : Sep 27, 2021, 6:11 PM IST

ಮುಂಬೈ : ಬಾಲಿವುಡ್ ಸೂಪರ್‌ಸ್ಟಾರ್ ಅಮೀರ್ ಖಾನ್ ಮತ್ತು ನಿರ್ಮಾಪಕಿ ಕಿರಣ್ ರಾವ್ ತಮ್ಮ ದಾಂಪತ್ಯ ಜೀವನಕ್ಕೆ ಪೂರ್ಣ ವಿರಾಮ ಹೇಳಿದ್ದರೂ ಕೂಡ ಬಹಳ ಆತ್ಮೀಯರಾಗಿಯೇ ಇದ್ದಾರೆ. ನಿನ್ನೆ ಮುಂಬೈನ ರೆಸ್ಟೋರೆಂಟ್​​ನಿಂದ ಮಗ ಆಜಾದ್ ರಾವ್ ಖಾನ್ ಜೊತೆ ಹೊರ ಬರುತ್ತಿದ್ದ ವಿಚ್ಛೇದಿತ ದಂಪತಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.

ಕಳೆದ ತಿಂಗಳೂ ಕೂಡ ಲಡಾಖ್​ನಲ್ಲಿ 'ಲಾಲ್ ಸಿಂಗ್ ಚಡ್ಡಾ' ಸಿನಿಮಾ ಚಿತ್ರೀಕರಣ ಮುಗಿಸಿ ಹಿಂದಿರುಗಿದ್ದ ಅಮೀರ್ ಖಾನ್ ಮತ್ತು ಮತ್ತು ಪುತ್ರ ಆಜಾದ್​ನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಕಿರಣ್​ ಬರಮಾಡಿಕೊಂಡಿದ್ದರು. ಇಬ್ಬರೂ ಕೂಡ 'ಲಾಲ್ ಸಿಂಗ್ ಚಡ್ಡಾ' ಸೇರಿ ಅನೇಕ ಸಿನಿಮಾ ಪ್ರಾಜೆಕ್ಟ್​ಗಳಲ್ಲಿ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: 'ನಾವು ತುಂಬಾ ಸಂತೋಷವಾಗಿದ್ದೇವೆ': ವಿಚ್ಛೇದನದ ಬಗ್ಗೆ ಅಮೀರ್ ಖಾನ್, ಕಿರಣ್ ರಾವ್ ಹೇಳಿಕೆ

'ಲಗಾನ್' ಸಿನಿಮಾ ಚಿತ್ರೀಕರಣ ವೇಳೆ ಆಪ್ತರಾಗಿ ಪ್ರೀತಿಸಿ 2005ರಲ್ಲಿ ವಿವಾಹವಾಗಿದ್ದ ಕಿರಣ್​ ರಾವ್​ ಹಾಗೂ ಅಮೀರ್ ಖಾನ್​ ಕಳೆದ ಜುಲೈ ತಿಂಗಳಲ್ಲಿ ತಮ್ಮ 15ನೇ ವರ್ಷದ ವೈವಾಹಿಕ ಸಂಬಂಧಕ್ಕೆ ಫುಲ್​ ಸ್ಟಾಪ್​ ಇಟ್ಟಿದ್ದರು.

ಡಿವೋರ್ಸ್​ ಬಳಿಕ ಗಂಡ ಮತ್ತು ಹೆಂಡತಿಯಾಗಿ ಅಲ್ಲ. ಆದರೆ, ಪರಸ್ಪರ ಪೋಷಕರು ಮತ್ತು ಕುಟುಂಬವಾಗಿ ನಮ್ಮ ಸಂಬಂಧ ಮುಂದುವರೆಸಲು ಇಚ್ಛಿಸುತ್ತೇವೆ ಎಂದು ಹೇಳಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.