ಹೈದರಾಬಾದ್(ತೆಲಂಗಾಣ) : ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ '83' ಸಿನಿಮಾದ ಟೀಸರ್ ಅನ್ನು ಹಂಚಿಕೊಂಡಿದ್ದಾರೆ. ಕಬೀರ್ ಖಾನ್ ನಿರ್ದೇಶನದ ಬಹು ನಿರೀಕ್ಷಿತ ಕ್ರೀಡಾಧಾರಿತ ಚಿತ್ರ ಇದಾಗಿದೆ. ಚಿತ್ರದ ಟ್ರೈಲರ್ ನ.30ರಂದು ಬಿಡುಗಡೆಯಾಗಲಿದೆ ಎಂದು ನಟ ರಣವೀರ್ ಸಿಂಗ್ ಬಹಿರಂಗಪಡಿಸಿದ್ದಾರೆ.
- " class="align-text-top noRightClick twitterSection" data="
">
ಜೂನ್ 25, 1983, ಲಂಡನ್‌ನ ಲಾರ್ಡ್ಸ್ ಕ್ರಿಕೆಟ್ ಸ್ಟೇಡಿಯಂನ ದೃಶ್ಯವಿರುವ ಟೀಸರ್‌ನ ಕೊನೆಯಲ್ಲಿ ಕಪಿಲ್ ದೇವ್ ಪಾತ್ರವನ್ನು ನಿಭಾಯಿಸುತ್ತಿರುವ ರಣವೀರ್ ಸಿಂಗ್ ಕ್ಯಾಚ್ ಹಿಡಿಯುತ್ತಿರುವುದು ಇದೆ.
ಕಪಿಲ್ ದೇವ್ ಹಿಡಿದ ಕ್ಯಾಚ್‌ನಿಂದ ವೆಸ್ಟ್ ಇಂಡೀಸ್‌ನ ವಿವಿಯನ್ ರಿಚರ್ಡ್ಸ್ ಅವರು ಔಟಾದರು. ಇದರಿಂದ ಭಾರತ 1983ರ ಕ್ರಿಕೆಟ್ ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಹಾದಿ ಸುಗಮವಾಗಿತ್ತು.
83 ಸಿನಿಮಾ ಕಪಿಲ್ ದೇವ್ ನೇತೃತ್ವದ ಭಾರತ ಕ್ರಿಕೆಟ್ ತಂಡವು 1983ರ ವಿಶ್ವಕಪ್ ಗೆದ್ದ ಐತಿಹಾಸಿಕ ದಿನದ ಕತೆ ಒಳಗೊಂಡಿದೆ. ರಣವೀರ್ ಸಿಂಗ್ ಅವರು ಕಪಿಲ್ ದೇವ್ ಪಾತ್ರದಲ್ಲಿ ಕಾಣಿಸಿದ್ದಾರೆ.
ಭಾರತದ ಅದ್ಭುತ ಜಯದ ಹಿಂದಿನ ಕತೆ. ಅದ್ಭುತ ಕತೆ. ಅದ್ಭುತ ಜಯ. '83' ಸಿನಿಮಾ ಡಿಸೆಂಬರ್ 24ರಂದು ಬಿಡುಗಡೆಯಾಗುತ್ತಿದೆ ಎಂದು ರಣವೀರ್ ಸಿಂಗ್ ಪೋಸ್ಟ್ ಮಾಡಿದ್ದಾರೆ.
ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ತೆರೆ ಕಾಣಲಿದೆ. ದೀಪಿಕಾ ಪಡುಕೋಣೆ ಕಪಿಲ್ ದೇವ್ ಅವರ ಪತ್ನಿ ರೋಮಿ ದೇವ್ ಪಾತ್ರದಲ್ಲಿ ಕಾಣಿಸಿದ್ದಾರೆ.
ಕಬೀರ್ ಖಾನ್ ನಿರ್ದೇಶಿಸಿದ, 83 ಚಿತ್ರ ಭಾರತದ ಐತಿಹಾಸಿಕ 1983ರ ವಿಶ್ವಕಪ್ ಗೆಲುವಿನ ಸುತ್ತ ಸುತ್ತುತ್ತದೆ. ಚಿತ್ರದಲ್ಲಿ ತಾಹಿರ್ ರಾಜ್ ಭಾಸಿನ್, ಸಾಕಿಬ್ ಸಲೀಮ್, ಆಮಿ ವಿರ್ಕ್, ಹಾರ್ಡಿ ಸಂಧು, ಪಂಕಜ್ ತ್ರಿಪಾಠಿ ಮತ್ತು ಸಾಹಿಲ್ ಖಟ್ಟರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಬಹುನಿರೀಕ್ಷಿತ '83' ಸಿನಿಮಾ ಬಿಡುಗಡೆ ದಿನಾಂಕ ಫಿಕ್ಸ್