ETV Bharat / science-and-technology

YouTubeನ ಪ್ರಥಮ ಅಫೀಶಿಯಲ್ ಶಾಪಿಂಗ್ ಚಾನೆಲ್ ತಿಂಗಳಾಂತ್ಯಕ್ಕೆ ಆರಂಭ

author img

By

Published : Jun 21, 2023, 5:38 PM IST

ಯೂಟ್ಯೂಬ್ ತನ್ನ ಪ್ರಥಮ ಶಾಪಿಂಗ್ ಚಾನೆಲ್ ಅನ್ನು ಈ ತಿಂಗಳಾಂತ್ಯಕ್ಕೆ ಆರಂಭಿಸಲಿದೆ. ಇದು ವಿಶ್ವದ ಪ್ರಥಮ ಅಧಿಕೃತ ಲೈವ್ ಕಾಮರ್ಸ್ ಚಾನೆಲ್ ಆಗಲಿದೆ.

YouTube to launch its 1st-ever official shopping channel this month

ಸಿಯೋಲ್ : ಗೂಗಲ್ ಒಡೆತನದ ಯೂಟ್ಯೂಬ್ ತನ್ನ ಪ್ರಥಮ ಅಧಿಕೃತ ಶಾಪಿಂಗ್ ಚಾನೆಲ್ ಅನ್ನು ದಕ್ಷಿಣ ಕೊರಿಯಾದಲ್ಲಿ ಈ ತಿಂಗಳಾಂತ್ಯಕ್ಕೆ ಆರಂಭಿಸಲಿದೆ. ಇದು ವಿಶ್ವದ ಪ್ರಥಮ ಅಧಿಕೃತ ಲೈವ್ ಕಾಮರ್ಸ್ ಚಾನೆಲ್ ಆಗಲಿದೆ. ಜೂನ್ 30 ರಂದು ಪ್ರಾರಂಭವಾಗಲಿರುವ ಹೊಸ ಚಾನೆಲ್ ಕಂಪನಿಗಳಿಗೆ ಲೈವ್ ಕಾಮರ್ಸ್​ ವೇದಿಕೆಯನ್ನು ಒದಗಿಸಲಿದೆ ಮತ್ತು ಪ್ರಾರಂಭದಲ್ಲಿ ಸುಮಾರು 30 ಬ್ರ್ಯಾಂಡ್‌ಗಳ ಶಾಪಿಂಗ್ ಕಂಟೆಂಟ್​ ಅನ್ನು ಲೈವ್‌ಸ್ಟ್ರೀಮ್ ಮಾಡಲಿದೆ. ಜಗತ್ತಿನ ಯಾವುದೇ ದೇಶದಲ್ಲಿ ಯೂಟ್ಯೂಬ್ ಅಧಿಕೃತ ಶಾಪಿಂಗ್ ಚಾನೆಲ್ ಆರಂಭಿಸುತ್ತಿರುವುದು ಇದೇ ಮೊದಲು.

"ಯೂಟ್ಯೂಬ್ ಕೊರಿಯಾ ಸೇರಿದಂತೆ ಎಲ್ಲ ದೇಶಗಳ ಬಳಕೆದಾರರು ಬಳಸುವಂಥ, ಅದರಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡುವ, ತಿಳಿವಳಿಕೆ ನೀಡುವ ಮತ್ತು ಮನರಂಜನಾ ಶಾಪಿಂಗ್ ಸೌಲಭ್ಯಗಳನ್ನು ನೀಡಲು ಬದ್ಧವಾಗಿದೆ. ಇದಕ್ಕಾಗಿ ನಾವು ಕಾಲಕಾಲಕ್ಕೆ ವಿವಿಧ ಯೂಟ್ಯೂಬ್ ಶಾಪಿಂಗ್ ವೈಶಿಷ್ಟ್ಯಗಳನ್ನು ಪರಿಚಯಿಸಿ ಅವುಗಳ ಬಗ್ಗೆ ಪ್ರಯೋಗ ಮಾಡಲಿದ್ದೇವೆ" ಎಂದು ಯೂಟ್ಯೂಬ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದರು.

ಕಳೆದ ವರ್ಷ ಯೂಟ್ಯೂಬ್ ತನ್ನ ಎಕ್ಸ್‌ಪ್ಲೋರ್ ವಿಭಾಗದಲ್ಲಿ ಹೊಸ ಶಾಪಿಂಗ್ ಟ್ಯಾಬ್ ಒಂದನ್ನು ಆರಂಭಿಸಿತ್ತು. ಇದರಲ್ಲಿ ಆಯ್ದ ಕಂಟೆಂಟ್​ ತಯಾರಕರು ತಮ್ಮ ಲೈವ್‌ಸ್ಟ್ರೀಮ್‌ಗಳಲ್ಲಿ ಉತ್ಪನ್ನಗಳನ್ನು ಟ್ಯಾಗ್ ಮಾಡಬಹುದು ಅಥವಾ ತಮ್ಮ ವೀಡಿಯೊಗಳ ಅಡಿಯಲ್ಲಿ ಉತ್ಪನ್ನಗಳನ್ನು ಪಟ್ಟಿ ಮಾಡಬಹುದು ಮತ್ತು ವೀಕ್ಷಕರು ಆ ಉತ್ಪನ್ನಗಳನ್ನು ಖರೀದಿಸಬಹುದು.

ಆಲ್ಫಾಬೆಟ್‌ನ 2022ರ ನಾಲ್ಕನೇ ತ್ರೈಮಾಸಿಕದ ಕಂಪನಿ ಆದಾಯದ ಬಗ್ಗೆ ಮಾಹಿತಿ ನೀಡಲು ನಡೆಸಲಾದ ಸಭೆಯಲ್ಲಿ ಮಾತನಾಡಿದ್ದ ಕಂಪನಿಯ ಮುಖ್ಯ ವ್ಯಾಪಾರ ಅಧಿಕಾರಿ ಫಿಲಿಪ್ ಷಿಂಡ್ಲರ್, ಮತ್ತಷ್ಟು ಕಂಟೆಂಟ್​ ಕ್ರಿಯೇಟರ್​ಗಳನ್ನು ಯೂಟ್ಯೂಬ್​​ನತ್ತ ಸೆಳೆಯುವ ನಿಟ್ಟಿನಲ್ಲಿ ಆಲ್ಫಾಬೆಟ್ ಯೂಟ್ಯೂಬ್ ಅನ್ನು ಮತ್ತಷ್ಟು ಶಾಪಿಂಗ್ ಸ್ನೇಹಿಯಾಗಿ ಮಾಡಲು ಬಯಸುತ್ತದೆ. ಇದರಿಂದ ಹೆಚ್ಚಿನ ಕಂಟೆಂಟ್ ಮತ್ತು ವೀಕ್ಷಕರು ಸೃಷ್ಟಿಯಾಗುತ್ತಾರೆ ಹಾಗೂ ಆ ಮೂಲಕ ಹೆಚ್ಚಿನ ಜಾಹೀರಾತು ಅವಕಾಶಗಳಿಗೆ ಕಾರಣವಾಗುತ್ತದೆ ಎಂದು ಹೇಳಿದ್ದರು.

ಈ ಯೋಜನೆ ಈಗಿನ್ನೂ ಆರಂಭಿಕ ಹಂತದಲ್ಲಿದೆ. ಆದರೆ ಈ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ ಎಂಬುದು ನಮ್ಮ ನಂಬಿಕೆಯಾಗಿದೆ. ಜನ ಇಷ್ಟಪಡುವ ಕಂಟೆಂಟ್ ಕ್ರಿಯೇಟರ್ಸ್​, ಬ್ರ್ಯಾಂಡ್‌ಗಳು ಮತ್ತು ಕಂಟೆಂಟ್​ಗಳಿಂದ ಶಾಪಿಂಗ್ ಮಾಡುವುದು ಸುಲಭವಾಗಲಿದೆ ಎಂದು ಷಿಂಡ್ಲರ್ ಹೇಳಿದರು. ಮಾರ್ಚ್​ ತ್ರೈಮಾಸಿಕದಲ್ಲಿ ಯೂಟ್ಯೂಬ್ ಜಾಹೀರಾತು ಆದಾಯವು ಶೇಕಡಾ 2.6 ರಷ್ಟು (ವರ್ಷದಿಂದ ವರ್ಷಕ್ಕೆ) ಕುಸಿದಿದೆ. ಈ ಮೂಲಕ ಯೂಟ್ಯೂಬ್ ಜಾಹೀರಾತು ಆದಾಯವು ಸತತವಾಗಿ ಮೂರನೇ ತ್ರೈಮಾಸಿಕದಲ್ಲಿ ಕಡಿಮೆಯಾದಂತಾಗಿದೆ.

ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಯೂಟ್ಯೂಬ್ 6.69 ಶತಕೋಟಿ ಡಾಲರ್ ಜಾಹೀರಾತು ಆದಾಯ ಗಳಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಜಾಹೀರಾತು ಆದಾಯ 6.87 ಶತಕೋಟಿ ಡಾಲರ್ ಆಗಿತ್ತು. ಆದಾಗ್ಯೂ ಕಂಪನಿಯ ಶಾರ್ಟ್ಸ್​ ವೀಡಿಯೊಗಳ ವೀಕ್ಷಣಾ ಸಮಯ ಹೆಚ್ಚಾಗಿದ್ದು, ಮಾನೆಟೈಸೇಶನ್ ಕೂಡ ಬೆಳವಣಿಗೆಯಾಗುತ್ತಿದೆ.

ಇದನ್ನೂ ಓದಿ : 5G Mobile: ಭಾರತದಲ್ಲಿ 1 ಕೋಟಿ ದಾಟಿದ 5ಜಿ ಬಳಕೆದಾರರ ಸಂಖ್ಯೆ: 2028ಕ್ಕೆ 70 ಕೋಟಿ ತಲುಪುವ ನಿರೀಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.