ETV Bharat / science-and-technology

ಇಸ್ರೋದ ಎಸ್​ಎಸ್​ಎಲ್​ವಿ ವೈಫಲ್ಯಕ್ಕೆ ವೈಜ್ಞಾನಿಕ ಜಗತ್ತು ಅಚ್ಚರಿ, ತಜ್ಞರಿಂದ ವಿಶ್ಲೇಷಣೆ - ETV bharat kannada news

ಎಸ್​ಎಸ್​ಎಲ್​ವಿ ಡಿ1 ವಾಹನದ ಮೂಲಕ ಇಸ್ರೋ ಉಡಾವಣೆ ಮಾಡಿದ ಉಪಗ್ರಹಗಳು ನಿಗದಿತ ಕಕ್ಷೆ ತಲುಪದೇ ವಿಫಲವಾಗಿವೆ. ಸೆನ್ಸಾರ್​ ಸಮಸ್ಯೆಯಿಂದಾಗಿ ಉಪಗ್ರಹಗಳು ಕಕ್ಷೆ ಸೇರಲಿಲ್ಲ ಎಂದು ಇಸ್ರೋ ತಿಳಿಸಿದೆ. ಮುಂದಿನ ಉಡಾವಣೆಯು ತಮಿಳುನಾಡಿನಿಂದ ನಡೆಯಲಿದೆ.

world-surprised-by-failure-isros-sslv
ಇಸ್ರೋದ ಎಸ್​ಎಸ್​ಎಲ್​ವಿ ವೈಫಲ್ಯಕ್ಕೆ ವೈಜ್ಞಾನಿಕ ಜಗತ್ತು ಅಚ್ಚರಿ
author img

By

Published : Aug 8, 2022, 9:33 AM IST

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೇ ಮೊದಲ ಬಾರಿಗೆ ಸಣ್ಣ ಪ್ರಮಾಣದ ರಾಕೆಟ್​ ವಾಹಕದಲ್ಲಿ ಹಾರಿಬಿಟ್ಟಿದ್ದ ಎರಡು ಉಪಗ್ರಹಗಳು ನಿಗದಿತ ಕಕ್ಷೆ ಸೇರದೇ ವಿಫಲಗೊಂಡಿವೆ. ಇದು ಅತ್ಯಂತ ನಿಖರ, ಕರಾರುವಾಕ್​ ಉಡಾವಣೆ ಮಾಡುವ ಇಸ್ರೋದ ವೈಫಲ್ಯ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

75 ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ವಿದ್ಯಾರ್ಥಿಗಳು ರೂಪಿಸಿದ್ದ 8 ಕೆಜಿ ತೂಕದ ಆಜಾದಿ ಸ್ಯಾಟ್​ ಮತ್ತು ಇಸ್ರೋ ನಿರ್ಮಿತ ಭೂಪರಿಭ್ರಮಣ ಉಪಗ್ರಹ ನಿನ್ನೆ ಶ್ರೀಹರಿಕೋಟಾದ ಸತೀಶ್​ ಧವನ್​ ಕೇಂದ್ರದಿಂದ ಎಸ್​ಎಸ್​ಎಲ್​ವಿ(ಸ್ಮಾಲ್​ ಸ್ಯಾಟಲೈಟ್​ ಲಾಂಚಿಂಗ್​ ವೆಹಿಕಲ್​) ಯಿಂದ ಉಡಾವಣೆ ಮಾಡಲಾಗಿತ್ತು. ಆದರೆ, ಅದು ನಿಗದಿತ ಕಕ್ಷೆಗೆ ಸೇರದೇ ಕೊನೆಯಲ್ಲಿ ಸಂಪರ್ಕ ಕಳೆದುಕೊಂಡಿದೆ.

ಉಪಗ್ರಹಕ್ಕೆ ಏನಾಯ್ತು: ಸಣ್ಣ ಉಪಗ್ರಹ ಉಡಾವಣಾ ವಾಹನದಿಂದ ಉಡಾಯಿಸಲಾದ ಉಪಗ್ರಹಗಳು ಸೆನ್ಸಾರ್ ಸಮಸ್ಯೆಯಿಂದಾಗಿ ತಪ್ಪಾದ ಕಕ್ಷೆ ಸೇರಿವೆ. ಎಸ್​ಎಸ್ಎಲ್​ವಿಯ ವಿಟಿಎಂ ಅಂದರೆ ವೆಲಾಸಿಟಿ ಟ್ರಿಮ್ಮಿಂಗ್​ ಮಾಡ್ಯೂಲ್​ ಹಂತದಲ್ಲಿ ತೊಂದರೆ ಕಾಣಿಸಿಕೊಂಡಿದೆ. ಉಡಾವಣೆಯಾದ 650 ಸೆಕೆಂಡುಗಳಲ್ಲಿ 20 ಸೆಕೆಂಡ್​ ವಿಟಿಎಂ ದಹಿಸಬೇಕಿತ್ತು. ಆದರೆ, ಕೇವಲ 0.1 ಸೆಕೆಂಡುಗಳ ಕಾಲ ದಹಿಸಿದ್ದರಿಂದ ರಾಕೆಟ್​ ನಿಗದಿತ ಎತ್ತರಕ್ಕೆ ಹೆಚ್ಚಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಇಸ್ರೋ ಹೇಳಿದೆ.

ಇದು ಅಪರೂಪದ ವೈಫಲ್ಯ: ಇಸ್ರೋ ತನ್ನ 5 ದಶಕಗಳ ಕಾರ್ಯಾಚರಣೆಯಲ್ಲಿ ಬಲು ಅಪರೂಪದ ವೈಫಲ್ಯ ಕಂಡಿದೆ. ಈವರೆಗೂ 36 ದೇಶಗಳ 346 ಉಪಗ್ರಹಗಳನ್ನು ಉಡ್ಡಯನ ಮಾಡಿದ್ದು, ಇದರಲ್ಲಿ ಕೇವಲ 9 ಮಾತ್ರ ವಿಫಲವಾಗಿವೆ. ಕಳೆದ ವರ್ಷ ಜಿಎಸ್​ಎಲ್​ವಿ ಎಂಕೆ 2 ರಾಕೆಟ್​ ಮೂಲಕ ಉಡ್ಡಯನ ಮಾಡಲಾಗಿದ್ದ ಉಪಗ್ರಹವನ್ನು ಕಕ್ಷೆ ಸೇರಿಸದೇ ವೈಫಲ್ಯ ಅನುಭವಿಸಿತ್ತು.

ತಮಿಳುನಾಡಿನಿಂದ ಮುಂದಿನ ಉಡ್ಡಯನ: ಎಸ್​ಎಸ್​ಎಲ್​ವಿ ಸರಣಿಯ ಮೊದಲ ಉಡ್ಡಯನ ವಿಫಲವಾದರೂ ಇದರ ಇನ್ನೆರಡು ಯೋಜನೆಗಳು ಬಾಕಿ ಇವೆ. ಕೇಂದ್ರ ಸರ್ಕಾರ ಇದಕ್ಕಾಗಿ 169 ಕೋಟಿ ರೂಪಾಯಿ ಅನುದಾನ ನೀಡಿದೆ. ಮೊದಲ ಎಸ್​ಎಸ್​ಎಲ್​ವಿ ಡಿ-2, ಡಿ-3 ಸರಣಿ ವಾಹನಗಳ ಮೂಲಕ ಉಪಗ್ರಹಗಳನ್ನು ಉಡಾಯಿಸುವ ಯೋಜನೆ ಇದೆ. ಇವುಗಳನ್ನು ತಮಿಳುನಾಡಿನ ಕುಲಶೇಖರ ಪಟ್ಟಣಂ ಬಾಹ್ಯಾಕಾಶ ಕೇಂದ್ರದಿಂದ ರಾಕೆಟ್​ ಉಡಾವಣೆ ಮಾಡಲು ಉದ್ದೇಶಿಸಲಾಗಿದೆ.

ಇಸ್ರೋ ಅಧ್ಯಕ್ಷರು ಏನಂತಾರೆ.. ಮಿಷನ್ ವೈಫಲ್ಯದ ಕುರಿತು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅವರು ಹೇಳುವಂತೆ, "SSLV-D1 ಹೊತ್ತೊಯ್ದ ಉಪಗ್ರಹಗಳನ್ನು ಅದು 356 ಕಿಮೀ x 76 ಕಿಮೀ ದೀರ್ಘವೃತ್ತದ ಕಕ್ಷೆಗೆ ಸೇರಿಸಬೇಕಿತ್ತು. ಬದಲಾಗಿ 356 ಕಿಮೀ ವೃತ್ತಾಕಾರದ ಕಕ್ಷೆಗೆ ಮಾತ್ರ ಸೇರಿಸಿದೆ. 76 ಕಿಮೀ ಭೂಮಿಯ ಮೇಲ್ಮೈಗೆ ಸಮೀಪವಿರುವ ಅತ್ಯಂತ ಕಡಿಮೆ ಬಿಂದುವಾಗಿದೆ. ಅಂತಹ ಕಕ್ಷೆಯಲ್ಲಿ ಉಪಗ್ರಹಗಳನ್ನು ಇರಿಸಿದಾಗ ಅವು ಹೆಚ್ಚು ಕಾಲ ಉಳಿಯುವುದಿಲ್ಲ. ಎರಡು ಉಪಗ್ರಹಗಳು ಈಗಾಗಲೇ ಆ ಕಕ್ಷೆಯಿಂದ ಕೆಳಗಿಳಿದಿವೆ. ಅವುಗಳು ಇನ್ನು ಮುಂದೆ ಬಳಕೆಗೆ ಬರುವುದಿಲ್ಲ ಎಂಬುದು ಅವರ ಅಭಿಪ್ರಾಯ.

ತಜ್ಞರಿಂದ ವಿಶ್ಲೇಷಣೆ: ಉಪಗ್ರಹ ವೈಫಲ್ಯ ಕುರಿತು ಇಸ್ರೋ ಅಧ್ಯಕ್ಷರ ನೇತೃತ್ವದ ತಜ್ಞರ ಗುಂಪು ವಿಶ್ಲೇಷಣೆ ನಡೆಸುತ್ತಿದೆ. ಸಮಿತಿಯು ಮಾಡುವ ವಿಶ್ಲೇಷಣೆ ಮತ್ತು ಶಿಫಾರಸುಗಳ ಅನ್ವಯ SSLV-D2 ಯೋಜನೆ ಕೈಗೆತ್ತಿಕೊಳ್ಳಲಾಗುತ್ತದೆ. ರಾಕೆಟ್‌ನ ಮೂರು ಹಂತಗಳು, ಎಂಜಿನ್‌ಗಳು ಮತ್ತು ಇತರ ಎಲ್ಲ ವ್ಯವಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸಿವೆ ಎಂದು ಇಸ್ರೋ ಹೇಳಿದೆ.

ಓದಿ: ಮಾನವನನ್ನೇ ಹೊರುವ ಡ್ರೋನ್ ತಯಾರು: ಸೇನೆಗೆ ನೀಡಲು ಮುಂದಾದ ಸಂಸ್ಥೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.