ETV Bharat / science-and-technology

ವಾಟ್ಸ್​ಆ್ಯಪ್​ ​ಬಳಕೆದಾರರಿಗೆ ಸಿಹಿ ಸುದ್ದಿ; 'ಮೆಸೇಜ್ ಯುವರ್‌ಸೆಲ್ಫ್' ಅಪ್​ಡೇಟ್​ ನೀಡಿದ ಮೆಟಾ

author img

By

Published : Nov 29, 2022, 5:35 PM IST

ವಾಟ್ಸ್​ಆ್ಯಪ್​​​ನಲ್ಲಿ ಬರಲಿರುವ ಈ ವೈಶಿಷ್ಟ್ಯದಿಂದ ಬಳಕೆದಾರರು ಪಟ್ಟಿಗಳನ್ನು ,ಟಿಪ್ಪಣಿಗಳನ್ನು , ಜ್ಞಾಪನೆಗಳು, ಶಾಪಿಂಗ್ ಪಟ್ಟಿಗಳು ಮತ್ತು ಹೆಚ್ಚಿನದ್ದನ್ನು ಟೈಪ್ ಮಾಡಿ ತಮ್ಮ ಖಾತೆಗೆ ಕಳುಹಿಸಬಹುದು. ಈ ಮೂಲಕ ಇದು ತನ್ನೊಂದಿಗೆ 1:1 ಚಾಟ್ ಆಗಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೇ ಈ ಚಾಟ್​ಗೆ ನೀವು ಮಾತ್ರ ಪ್ರವೇಶಿಬಹುದು, ನಿಮಗೆ ಮಾತ್ರ ಗೋಚರಿಸುವುದರ ಜೊತೆಗೆ ಖಾಸಗಿ ಭದ್ರತೆಯನ್ನೂ ಕೂಡಾ ಹೊಂದಿದೆ.

WhatsApp New Features Coming Soon
ವಾಟ್ಸಾಪ್​ ಬಳಕೆದಾರರಿಗೆ ಸಿಹಿ ಸುದ್ದಿ; 'ಮೆಸೇಜ್ ಯುವರ್‌ಸೆಲ್ಫ್' ಅಪ್​ಡೇಟ್​ ನೀಡಿದ ಮೆಟಾ ಸಂಸ್ಥೆ

ಸ್ಯಾನ್ ಫ್ರಾನ್ಸಿಸ್ಕೋ: ಮೆಟಾ ಕಂಪನಿ ತನ್ನ ವಾಟ್ಸ್​ಆ್ಯಪ್​​ ​ ಬಳಕೆದಾರರಿಗೆ ಸೋಮವಾರ ಸಂತಸದ ಸುದ್ದಿಯೊಂದನ್ನ ನೀಡಿದೆ. ಅದೇನೆಂದರೆ ವಾಟ್ಸ್​ಆ್ಯಪ್​ 'ಮೆಸೇಜ್ ಯುವರ್‌ಸೆಲ್ಫ್' ಎಂಬ ಹೊಸ ವೈಶಿಷ್ಟ್ಯ ಪ್ರಾರಂಭಿಸುವುದಾಗಿ ಪ್ರಕಟಿಸಿದೆ.

ಹೊಸ ವೈಶಿಷ್ಟ್ಯದ ಬಳಕೆ ಹೇಗೆ: ಈ ಒಂದು ಫೀಚರ್ ಬಳಸಲು ಮೊದಲು ನಿಮ್ಮ ವಾಟ್ಸ್​ಆ್ಯಪ್​​ ಅನ್ನು ಅಪ್​ಡೇಟ್​ ಮಾಡಿ ಇಲ್ಲವಾದರೆ ವಾಟ್ಸ್​ಆ್ಯಪ್​​​ ಅಪ್ಲಿಕೇಶನ್​​​ ತೆರೆಯಿರಿ. ಅಲ್ಲಿ ಹೊಸ ಚಾಟ್ ರಚಿಸಿ ಅದಕ್ಕೆ ಕ್ಲಿಕ್ ಮಾಡಿ, ಈಗ ನಿಮ್ಮ ಸಂಪರ್ಕ ಪಟ್ಟಿಯ ಮೇಲ್ಭಾಗದಲ್ಲಿ ನಿಮ್ಮ ಸಂಪರ್ಕವನ್ನು ನೀವು ನೋಡುತ್ತೀರಿ. ಅದರ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ನೀವೇ ಸಂದೇಶ ಕಳುಹಿಸಲು ಪ್ರಾರಂಭಿಸಿ.

ಇದರ ವಿಶೇಷತೆ ಏನು: ವಾಟ್ಸ್​ಆ್ಯಪ್​ನಲ್ಲಿ ಬರಲಿರುವ ಈ ವೈಶಿಷ್ಟ್ಯದಿಂದ ಬಳಕೆದಾರರು ಪಟ್ಟಿಗಳನ್ನು ,ಟಿಪ್ಪಣಿಗಳನ್ನು , ಜ್ಞಾಪನೆಗಳು, ಶಾಪಿಂಗ್ ಪಟ್ಟಿಗಳು ಮತ್ತು ಹೆಚ್ಚಿನದನ್ನ ಟೈಪ್ ಮಾಡಿ ತಮ್ಮ ಖಾತೆಗೆ ಕಳುಹಿಸಬಹುದು. ಈ ಮೂಲಕ ಇದು ತನ್ನೊಂದಿಗೆ 1:1 ಚಾಟ್ ಆಗಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೇ ಈ ಚಾಟ್​ಗೆ ನೀವು ಮಾತ್ರವೇ ಪ್ರವೇಶಿಬಹುದು, ನಿಮಗೆ ಮಾತ್ರ ಗೋಚರಿಸುವುದರ ಜೊತೆಗೆ ಖಾಸಗಿ ಭದ್ರತೆಯನ್ನೂ ನಿಮಗೆ ಒದಗಿಸುತ್ತದೆ.

ಕೆಳ ದಿನಗಳ ಹಿಂದೆ ಮೆಟಾ ಕಂಪನಿ ವಾಟ್ಸ್​​ಆ್ಯಪ್​ಗೆ ಸಂಬಂಧಿಸಿದಂತೆ ಒಂದು ಗ್ರೂಪ್​ನಲ್ಲಿ 1,024 ಬಳಕೆದಾರರನ್ನು ಸೇರಿಸುವ ಅವಕಾಶದ ಜೊತೆ, ಒಂದೇ ಬಾರಿ ವಿಡಿಯೋ ಕಾಲ್​ನಲ್ಲಿ 32 ವ್ಯಕ್ತಿಯೊಂದಿಗೆ ವ್ಯವಹರಿಸುವ ಅಪ್ಡೇಟ್​ ನೀಡಿತ್ತು.

ಇದನ್ನೂ ಓದಿ: 54 ಲಕ್ಷ ಟ್ವಿಟರ್​ ಬಳಕೆದಾರರ ಡೇಟಾ ಕಳವು: ಆನ್ಲೈನ್​ನಲ್ಲಿ ಮಾರಾಟ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.