ನವದೆಹಲಿ: ಮೆಟಾ ಒಡೆತನದ ವಾಟ್ಸ್ಆ್ಯಪ್ ಆ್ಯಪ್ ಹೊಸ ಪೀಚರ್ ಅನ್ನು ಪರಿಚಯಿಸಲಿದೆ. ಟೆಲಿಗ್ರಾಮ್ ಮತ್ತು ಟ್ವಿಟರ್ನಲ್ಲಿ ಮಾತ್ರವೇ ಬಳಕೆಯಲ್ಲಿದ್ದ ಗ್ರೂಪ್ ಪೋಲ್ ಅನ್ನು ಈಗ ವಾಟ್ಸಪ್ನಲ್ಲಿಯೂ ಕೂಡಾ ಅಳವಡಿಸಲಾಗುತ್ತದೆ. ಈ ಮೂಲಕ ಬಳಕೆದಾರರು ಯಾವುದಾದರೂ ಒಂದು ಪ್ರಶ್ನೆಯನ್ನು ಕೇಳಿ, ಪೋಲ್ (ಮತದಾನ) ಪ್ರಾರಂಭಿಸಬಹುದು.
WABetaInfo ವರದಿಯ ಪ್ರಕಾರ, ವಾಟ್ಸ್ಆ್ಯಪ್ ಶೀಘ್ರದಲ್ಲೇ ಗ್ರೂಪ್ ಚಾಟ್‌ಗಳಲ್ಲಿ ಪ್ರಶ್ನೆಗಳನ್ನು ಟೈಪ್ ಮಾಡಲು ಬಳಕೆದಾರರಿಗೆ ಅವಕಾಶ ನೀಡಲಿದೆ. ಪೋಲಿಂಗ್ ಸ್ಕ್ರೀನ್ ಶಾಟ್ನಲ್ಲಿ WABetaInfo ಟ್ವಿಟರ್ನಲ್ಲಿ ಹಂಚಿಕೊಂಡಿದೆ. ಐಫೋನ್ ಆಪರೇಷನ್ ಸಿಸ್ಟಮ್ನಲ್ಲಿ ಈ ಪೋಲ್ ಅನ್ನು ರಚಿಸಲಾಗಿದೆ.
-
WhatsApp is finally working on end-to-end encrypted group polls for a future update! What features should polls support?
— WABetaInfo (@WABetaInfo) March 7, 2022 " class="align-text-top noRightClick twitterSection" data="
Follow me for more updates 🔥 pic.twitter.com/11d9imdVOV
">WhatsApp is finally working on end-to-end encrypted group polls for a future update! What features should polls support?
— WABetaInfo (@WABetaInfo) March 7, 2022
Follow me for more updates 🔥 pic.twitter.com/11d9imdVOVWhatsApp is finally working on end-to-end encrypted group polls for a future update! What features should polls support?
— WABetaInfo (@WABetaInfo) March 7, 2022
Follow me for more updates 🔥 pic.twitter.com/11d9imdVOV
ಇದರ ಜೊತೆಗೆ, ವಾಟ್ಸ್ಆ್ಯಪ್ ಗುಂಪುಗಳು ಮತ್ತು ಸಮುದಾಯಗಳನ್ನು ಟ್ರ್ಯಾಕ್ ಮಾಡಲು ಬಳಕೆದಾರರಿಗೆ ಸುಲಭವಾಗುವಂತೆ Community Tab ಅನ್ನು ಅಳವಡಿಸಲು ಮುಂದಾಗುತ್ತಿದೆ ಎಂದು ಹೇಳಲಾಗುತ್ತಿದೆ. Community Tab ಈಗ ಅಸ್ಥಿತ್ವದಲ್ಲಿರುವ ಕ್ಯಾಮೆರಾ ಟ್ಯಾಬ್ಗೆ ಸ್ಥಳದಲ್ಲಿ ಬರುವ ನಿರೀಕ್ಷೆಯಿದೆ.
ವಾಟ್ಸಪ್ ಕಳೆದ ಕೆಲವು ವರ್ಷಗಳಿಂದ ಗ್ರೂಪ್ ಚಾಟ್ ಅನ್ನು ಸುಧಾರಣೆ ಮಾಡಲು ಯತ್ನಿಸುತ್ತಿದೆ. ತನ್ನ ಪ್ರತಿಸ್ಪರ್ಧಿಯಾದ ಟೆಲಿಗ್ರಾಮ್ ಈಗಾಗಲೇ ಗ್ರೂಪ್ ಚಾಟಿಂಗ್ನಲ್ಲಿ ಸಾಕಷ್ಟು ಮುಂದುವರೆದಿದ್ದು, ಅನೇಕ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ.
ಇದನ್ನೂ ಓದಿ: ಗೂಗಲ್‌ನ ಬಹು ನಿರೀಕ್ಷಿತ ಪಿಕ್ಸೆಲ್ 6ಎ ಫೋನ್, ವಾಚ್‌ಗಳ ಬಿಡುಗಡೆ ದಿನಾಂಕ ಮುಂದೂಡಿಕೆ ಸಾಧ್ಯತೆ