ದಿನಕ್ಕೊಂದು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುವ ಮೂಲಕ ಮೆಟಾ ಒಡೆತನದ ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆದ ವಾಟ್ಸ್ಆ್ಯಪ್ ಬಳಕೆದಾರರ ಸ್ನೇಹಿಯಾಗಿ ರೂಪುಗೊಳ್ಳುತ್ತಿದೆ. ಹೊಸ ಹೊಸ ತಂತ್ರಜ್ಞಾನದಲ್ಲಿ ಬದಲಾವಣೆ ನಡೆಸುವ ಮೂಲಕ ವಾಟ್ಸ್ಆ್ಯಪ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುವುದನ್ನು ಮುಂದುವರೆಸಿದೆ. ಈಗಾಗಲೇ ಬಳಕೆದಾರರ ಅಗತ್ಯ ಮತ್ತು ನಿರೀಕ್ಷೆಗೆ ತಕ್ಕಂತೆ ಹೊಸ ಹೊಸ ಫೀಚರ್ಚ್ಗಳನ್ನು ಅಳವಡಿಸಿಕೊಳ್ಳುತ್ತಿರುವ ಕಂಪನಿ, ಆ್ಯಪ್ನಲ್ಲಿ ಚಾಟ್ ಮೆನು ಸೇರ್ಪಡೆಗಾಗಿ ಮರು ವಿನ್ಯಾಸ ಮಾಡಿದೆ.
ಏನಿದು ಹೊಸ ವೈಶಿಷ್ಟ್ಯ: ವಾಟ್ಸ್ಆ್ಯಪ್ ಆಂಡ್ರಾಯ್ಡ್ ಬೀಟಾಗಾಗಿ ಮರು ವಿನ್ಯಾಸಗೊಳಿಸಲಾದ ಚಾಟ್ ಅಟ್ಯಾಚ್ಮೆಂಟ್ ಮೆನುವಿನ ಕಾರ್ಯನಿರ್ವಹಿಸುತ್ತಿದೆ. ಈ ಚಾಟ್ ಅಟ್ಯಾಚ್ಮೆಂಟ್ ಸ್ಪಷ್ಟವಾಗಿದ್ದು, ಬಳಕೆದಾರರ ಸ್ನೇಹಿಯಾಗಿದೆ ಎಂದು ವಾಬೆಟಾಇನ್ಫೋ ತಿಳಿಸಿದೆ. ಈ ಚಾಟ್ ಅಟ್ಯಾಚ್ಮೆಂಟ್ ಮೆನು ಸದ್ಯ ಅಭಿವೃದ್ಧಿ ಹಂತದಲ್ಲಿದ್ದು, ಭವಿಷ್ಯದ ಅಪ್ಡೇಟ್ನಲ್ಲಿ ಈ ಅಪ್ಲಿಕೇಷನ್ ಅನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ ಎಂದು ತಿಳಿಸಲಾಗಿದೆ. ಈ ತಿಂಗಳ ಆರಂಭದಲ್ಲಿ ಐಒಎಸ್ ಬೆಟಾಗಾಗಿ ವಾಟ್ಸ್ಆ್ಯಪ್ ಚಾಟ್ ಅಟ್ಯಾಚ್ಮೆನುವಿನ ಮರು ವಿನ್ಯಾಸದ ಕಾರ್ಯಕ್ಕೆ ಮುಂದಾಗಿತ್ತು. ಶೀಘ್ರದಕ್ಕೇ ಅದು ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ವರದಿ ತಿಳಿಸಿದೆ.
ಗ್ರೂಪ್ಚಾಟ್ ಪ್ರೊಫೈಲ್ ಪರಿಚಯ: ಈ ಮಧ್ಯೆ ವಾಟ್ಸ್ಆ್ಯಪ್ ಆಂಡ್ರಾಯ್ಡ್ ಬೆಟಾ ಗ್ರೂಪ್ ಚಾಟ್ಗಳಿಗೆ ಪ್ರೊಫೈಲ್ ಐಕಾನ್ಗಳನ್ನು ಕೂಡ ಪರಿಚಯಿಸಿತು. ವಾಟ್ಸ್ಆ್ಯಪ್ ಹೊಸ ಫೀಚರ್ ಮೂಲಕ ಡೆಸ್ಕ್ಟಾಪ್ನಲ್ಲಿ ಬಳಕೆದಾರರು ಗ್ರೂಪ್ಚಾಟ್ ವೇಳೆ ಗುಂಪಿನ ಹೊಸ ಸದಸ್ಯರು ಸೇರ್ಪಡನೆಗೆ ಮುಂಚೆಯೇ ಅವರ ಫ್ರೋಫೈಲ್ ಫೋಟೋಗಳನ್ನು ವೀಕ್ಷಿಸಬಹುದಾಗಿದೆ.
ಗ್ರೂಪ್ ಮೆಂಬರ್ಗಳು ಫೋನ್ ನಂಬರ್ ಇರದೇ ಹೋದರೂ ಅಥವಾ ಅದೇ ಹೆಸರು ಹೊಂದಿದ್ದಾಗಲೂ ಅವರನ್ನು ಪತ್ತೆ ಮಾಡಬಹುದಾಗಿದೆ. ಒಂದು ವೇಳೆ ಗ್ರೂಪ್ ಸದಸ್ಯರು ತಮ್ಮ ಪ್ರೊಫೈಲ್ ಚಿತ್ರ ಹೊಂದಿಲ್ಲದಿದ್ದಾಗ ಅಥವಾ ಪ್ರೊಫೈಲ್ ಫೋಟೋ ಹೈಡ್ ಮಾಡಿದಾಗ ಡೀಫಾಲ್ಟ್ ಪ್ರೊಫೈಲ್ ಐಕಾನ್ ಕಾಣಿಸಿಕೊಳ್ಳುತ್ತದೆ. ಜೊತೆಗೆ ಕಾಂಟಾಕ್ಟ್ ನೇಮ್ನಲ್ಲಿಯೂ ಅದೇ ಬಣ್ಣವನ್ನು ಹೈಲೈಟ್ ಮಾಡಲಾಗುತ್ತದೆ.
ಸ್ಟೀಕರ್ ಪರಿಚಯಿಸಿದ ಮನಸೆಳೆದ ವಾಟ್ಸ್ಆ್ಯಪ್: ಸಂದೇಶದಲ್ಲಿ ಸ್ಟೀಕರ್ ಕಳುಹಿಸಲು ಬಳಕೆದಾರರು ಪರದಾಡುತ್ತಿದ್ದನ್ನು ಗಮನಿಸಿದ ವಾಟ್ಸ್ಆ್ಯಪ್ ಸ್ಟೀಕರ್ ಮೇಕರ್ ಟೋಲ್ ಅನ್ನು ಐಒಎಸ್ ಬಳಕೆದಾರರಿಗೆ ಬಿಡುಗಡೆ ಮಾಡಿತ್ತು. ಈ ಮೂಲಕ ಬಳಕೆದಾರರು, ಇಮೇಜ್ಗಳನ್ನು ಸ್ಟೀಕರ್ ಆಗಿ ಬದಲಾಯಿಸಬಹುದಿತ್ತು. ಇದರಿಂದಾಗಿ ಸ್ಟೀಕರ್ ಸೃಷ್ಟಿಸಲು ಬಳಕೆ ಮಾಡುತ್ತಿದ್ದ ಧರ್ಟ್ ಪಾರ್ಟಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡುವ ಗೋಜನ್ನು ಕೂಡ ಇದು ಕಡಿಮೆ ಮಾಡಿತು.
ಇತ್ತೀಚೆಗಷ್ಟೇ ವಾಟ್ಸ್ಆ್ಯಪ್, ಸ್ಪ್ಲಿಟ್ ವಿಂಡೋ ಜೊತೆಗೆ ಅಪರಿಚಿತರ ಕಿರಿಕಿರಿ ತಪ್ಪಿಸಲು ಪರಿಹಾರ ಸೂಚಿಸಿತ್ತು. ಇದೀಗ ಬಳಕೆದಾರರ ಸುರಕ್ಷತೆ ಮತ್ತು ಸ್ನೇಹಿಯಾಗಲು ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಏಕಕಾಲದಲ್ಲಿ ಹಲವು ಮಂದಿಯೊಂದಿಗೆ ಗ್ರೂಪ್ ಚಾಟ್ ಅನ್ನು ಮಾಡುವ ಸೌಕರ್ಯವನ್ನು ವಾಟ್ಸ್ಆ್ಯಪ್ ಹೊಂದಿದೆ. ಈ ವಾಟ್ಸ್ಆ್ಯಪ್ ಐಒಎಸ್ ಬೆಟಾಗಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇದು ಗ್ರೂಪ್ಗಳಿಗೆ ಎಕ್ಸ್ಪೈರಿ ಡೇಟ್ ಕೂಡ ಸೆಟ್ ಮಾಡುವ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ಕಿಂಡಲ್ ನಿಯತಕಾಲಿಕೆ, ವೃತ್ತಪತ್ರಿಕೆ ಸಬ್ಸ್ಕ್ರಿಪ್ಷನ್ ಸ್ಥಗಿತಗೊಳಿಸಿದ ಅಮೆಜಾನ್