ETV Bharat / science-and-technology

ವಾಟ್ಸ್‌ಆ್ಯಪ್​ನ ಹೊಸ ಫೀಚರ್ಸ್​ ಬಗ್ಗೆ ನಿಮಗೆ ಗೊತ್ತಿದೆಯೇ?

ಹೊಸ ಫೀಚರ್ಸ್ ಪರಿಚಯಿಸಿದ ಮೆಟಾ ಮಾಲೀಕತ್ವದ ವಾಟ್ಸ್‌ಆ್ಯಪ್- 'ವಾಯ್ಸ್ ಸ್ಟೇಟಸ್' ಹಾಗೂ 'ಸ್ಟೇಟಸ್ ರಿಯಾಕ್ಷನ್ಸ್' ಸೇರಿದಂತೆ ಇನ್ನೂ ಹಲವು ಹೊಸ ವೈಶಿಷ್ಟ್ಯಗಳನ್ನು ಕೆಲವೇ ವಾರಗಳಲ್ಲಿ ಬಳಕೆ ಲಭ್ಯವಾಗಲಿವೆ.

WhatsApp
ವಾಟ್ಸ್‌ಆ್ಯಪ್
author img

By

Published : Feb 7, 2023, 11:04 PM IST

ನವದೆಹಲಿ: ಮೆಟಾ ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್‌ಆ್ಯಪ್‌ ಮಂಗಳವಾರ ಹೊಸ ಫೀಚರ್ಸ್​ ಪರಿಚಯಿಸಿದೆ. ಹೌದು, 'ವಾಯ್ಸ್ ಸ್ಟೇಟಸ್' ಮತ್ತು 'ಸ್ಟೇಟಸ್ ರಿಯಾಕ್ಷನ್ಸ್' ಸೇರಿದಂತೆ ಇನ್ನೂ ಅನೇಕ ವಿನೂತನ ಫೀಚರ್ಸ್​ ಅನ್ನು ವಾಟ್ಸ್‌ಆ್ಯಪ್‌ ಪ್ರಕಟಿಸಿದೆ. ಜಾಗತಿಕವಾಗಿ ಬಳಕೆದಾರರಿಗೆ ಹೊಸ ವೈಶಿಷ್ಟ್ಯಗಳನ್ನು ಹೊರತರಲು ಪ್ರಾರಂಭಿಸಿದೆ. ಈ ಫೀಚರ್ಸ್ ಮುಂಬರುವ ವಾರಗಳಲ್ಲಿ ಎಲ್ಲರಿಗೂ ಬಳಕೆಗೆ ಲಭ್ಯವಾಗಲಿದೆ ಎಂದು ಕಂಪನಿಯು ತಿಳಿಸಿದೆ.

ವಾಯ್ಸ್ ಸ್ಟೇಟಸ್ ನ್ಯೂ ಫೀಚರ್​: 'ವಾಯ್ಸ್ ಸ್ಟೇಟಸ್' ಫೀಚರ್​ ವಾಟ್ಸ್‌ಆ್ಯಪ್​ ಬಳಕೆದಾರರಿಗೆ ಸ್ಟೇಟಸ್‌ನಲ್ಲಿ 30 ಸೆಕೆಂಡುಗಳವರೆಗೆ ಧ್ವನಿ ಸಂದೇಶಗಳನ್ನು ರೆಕಾರ್ಡ್ ಮಾಡಲು ಮತ್ತು ಹಂಚಿಕೊಳ್ಳಲು ಅನುಮತಿ ನೀಡುತ್ತದೆ. ಮತ್ತೊಂದೆಡೆ, 'ಸ್ಟೇಟಸ್ ರಿಯಾಕ್ಷನ್‌ಗಳು' ಫೀಚರ್​ ಅನ್ನು ಬಳಕೆದಾರರು ತಮ್ಮ ಸ್ನೇಹಿತರು ಮತ್ತು ನಿಕಟವರ್ತಿಗಳಿಂದ ಸ್ಟೇಟಸ್ ಅನ್ನು ನವೀಕರಣಕ್ಕೆ ತ್ವರಿತ ಮತ್ತು ಸುಲಭವಾದ ರೀತಿಯಲ್ಲಿ ಪ್ರತಿಕ್ರಿಯಿಸಲು ಸಹಕಾರಿಯಾಗುತ್ತದೆ.

ತ್ವರಿತವಾಗಿ ಪ್ರತ್ಯುತ್ತರ ನೀಡಲು ಅನುಕೂಲ: "ಕಳೆದ ವರ್ಷ ರಿಯಾಕ್ಷನ್‌ಗಳು ಪ್ರಾರಂಭದ ನಂತರ, ಬಳಕೆದಾರರು ಈ ಹೊಸ ಫಿಚರ್​ ಅನ್ನು ಬಯಸಿದ್ದಾರೆ. ಇದೀಗ ಯಾವುದೇ ಸ್ಟೇಟಸ್​ಗೆ ಸ್ವೈಪ್ ಮಾಡುವ ಮೂಲಕ ಮತ್ತು ಎಂಟು ಎಮೋಜಿಗಳಲ್ಲಿ ಒಂದನ್ನು ಟ್ಯಾಪ್ ಮಾಡಬಹುದು ಹಾಗೂ ತ್ವರಿತವಾಗಿ ಪ್ರತ್ಯುತ್ತರ ನೀಡಲು ಸಾಧ್ಯಗುತ್ತದೆ. ಮೆಸೇಜ್​ ಹಾಗೂ ಧ್ವನಿಯೊಂದಿಗೆ ನೀವು ಖಂಡಿತವಾಗಿಯೂ ಸ್ಟೇಟಸ್​ಗೆ ಉತ್ತರ ನೀಡಲು ಸಹಕಾರಿಯಾಗುತ್ತದೆ. ಸಂದೇಶಗಳು ಹಾಗೂ ಸ್ಟಿಕ್ಕರ್‌ಗಳ ಮೂಲಕ ಪ್ರತಿಕ್ರಿಯಿಸಲು ಅನುಕೂವಾಗುತ್ತದೆ'' ಎಂದು ವೇದಿಕೆ ಹೇಳಿದೆ.

ಪ್ರೈವೇಟ್​ ಆಡಿಯನ್ಸ್​ ಸೆಲೆಕ್ಟರ್: ಕಂಪನಿಯು 'ಪ್ರೈವೇೆಟ್​ ಆಡಿಯನ್ಸ್​ ಸೆಲೆಕ್ಟರ್' ಹಾಗೂ 'ಸ್ಟೇಟಸ್ ಪ್ರೊಫೈಲ್ ರಿಂಗ್ಸ್ ಫಾರ್​ ನ್ಯೂ ಅಪ್​ಡೇಟ್ಸ್​' ಹಾಗೂ 'ಲಿಂಕ್ ಪ್ರಿವ್ಯೂಸ್ ಆನ್ ಸ್ಟೇಟಸ್' ಸೇರಿದಂತೆ ಇತರ ಫೀಚರ್ಸ್​ ಅನ್ನು ಪರಿಚಯಿಸಿದೆ. ಪ್ರೈವೆಟ್​ ಆಡಿಯನ್ಸ್​ ಸೆಲೆಕ್ಟರ್' ಜೊತೆಗೆ, ಬಳಕೆದಾರರು ಪ್ರತಿ ಸ್ಟೇಟಸ್‌ಗೆ ತಮ್ಮ ಗೌಪ್ಯತೆಯ ಸೆಟ್ಟಿಂಗ್‌ಗಳನ್ನು ಅಪ್‌ಡೇಟ್ ಮಾಡಬಹುದು. ಇದರಿಂದ ಬಳಕೆದಾರರು ಪ್ರತಿಬಾರಿಯೂ ತಮ್ಮ ಸ್ಟೇಟಸ್ ಅನ್ನು ಯಾರು ವೀಕ್ಷಿಸಬೇಕು ಎಂಬುದನ್ನು ಆಯ್ಕೆ ಮಾಡಬಹುದು.

ಕಾಂಟ್ಯಾಕ್ಟ್​ ಮಾಹಿತಿ ಕಾಣಿಸುತ್ತೆ: ಇತ್ತೀಚಿನ ಸ್ಟೇಟಸ್ ವೀಕ್ಷಕರ ಆಯ್ಕೆಯನ್ನು ಬಳಕೆದಾರರ ಮುಂದಿನ ಸ್ಟೇಟಸ್ ಡೀಫಾಲ್ಟ್ ಆಗಿ ಬಳಸಲು ಸಾಧ್ಯವಾಗುತ್ತದೆ. "ನ್ಯೂ ಸ್ಟೇಟಸ್​ನ ಪ್ರೊಫೈಲ್ ರಿಂಗ್‌ನೊಂದಿಗೆ ನೀವು ಪ್ರೀತಿ ಪಾತ್ರರ ಸ್ಟೇಟಸ್​ ಅನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ಅವರು ಸ್ಟೇಟಸ್ ಚೇಂಜ್​ ಮಾಡಿದಾಗಲೆಲ್ಲ, ಈ ರಿಂಗ್ ನಿಮ್ಮ ಪ್ರೊಫೈಲ್ ಚಿತ್ರದ ಸುತ್ತಲೂ ಇರುತ್ತದೆ. ಅಂದ್ರೆ ಚಾಟ್ ಲಿಸ್ಟ್​ಗಳು, ಗ್ರುಪ್​ನಲ್ಲಿರುವವರು ಲಿಸ್ಟ್​ಗಳು ಹಾಗೂ ಕಾಂಟ್ಯಾಕ್ಟ್​ ಮಾಹಿತಿ ಕಾಣಿಸುತ್ತವೆ'' ಎಂದು ಸಂಸ್ಥೆ ತಿಳಿಸಿದೆ.

ಲಿಂಕ್ ಪ್ರೀವಿವ್ಯೂ ಫೀಚರ್: ಈಗ ಬಳಕೆದಾರರು ತಮ್ಮ ಸ್ಟೇಟಸ್‌ನಲ್ಲಿ ಲಿಂಕ್ ಅನ್ನು ಪೋಸ್ಟ್ ಮಾಡಿದಾಗ, ಬಳಕೆದಾರರು ಸಂದೇಶವನ್ನು ಕಳುಹಿಸಿದಾಗ, ವಿಷಯಗಳನ್ನು ಪ್ರೀವಿವ್ಯೂನ ಮೂಲಕ ಸ್ಟೇಟಸ್​ ನೋಡಲು ಸಹಕಾರಿಯಾಗುತ್ತದೆ. 'ಸ್ಟೇಟಸ್‌ನಲ್ಲಿ ಲಿಂಕ್ ಪ್ರೀವಿವ್ಯೂ' ಫೀಚರ್ ಎಲ್ಲರನ್ನು ತನ್ನ ಸೆಳೆದಿದೆ. ವಾಟ್ಸ್‌ಆ್ಯಪ್‌ನಲ್ಲಿ ಸ್ನೇಹಿತರು ಮತ್ತು ನಿಕಟವರ್ತಿಗಳೊಂದಿಗೆ ಅಲ್ಪಕಾಲಿಕ ಅಪ್​ಡೇಟ್​ಗಳಿಗೆ ಸ್ಟೇಟಸ್ ಜನಪ್ರಿಯ ಮಾರ್ಗದಲ್ಲಿ ಒಂದಾಗಿದೆ. ಅವು 24 ಗಂಟೆಗಳಲ್ಲಿ ಅಂದ್ರೆ ಫೋಟೋಗಳು, ವೀಡಿಯೊಗಳು, ಗಿಫ್​ ಫೈಲ್​ಗಳು, ಮೆಸೇಜ್​ಗಳು ಡಿಸ್​ಅಪ್ಪೀಯರ್​ ಆಗುತ್ತವೆ'' ಎಂದು ಕಂಪನಿ ಹೇಳಿದೆ.

"ನಿಮ್ಮ ವೈಯಕ್ತಿಕ ಚಾಟ್‌ಗಳು ಮತ್ತು ಕರೆಗಳಂತೆಯೇ, ನಿಮ್ಮ ವಾಟ್ಸ್‌ಆ್ಯಪ್ ಸ್ಟೇಟಸ್​ ಅನ್ನು ಎಂಡ್​ ಟು ಎಂಡ್​ ಎನ್‌ಕ್ರಿಪ್ಶನ್‌ನಿಂದ ರಕ್ಷಿಸಲಾಗಿದೆ. ಆದ್ದರಿಂದ ನೀವು ಖಾಸಗಿಯಾಗಿ ಮತ್ತು ಸುರಕ್ಷಿತವಾಗಿ ಹಂಚಿಕೊಳ್ಳಬಹುದು" ಎಂದು ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: ಫೇಸ್​ಬುಕ್​, ಇನ್ಸ್​ಟಾಗ್ರಾಂನಿಂದ ನಿಯಮಬಾಹಿರ ವಿಷಯಗಳನ್ನು ತೆಗೆದು ಹಾಕಿದ ಮೆಟಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.