ETV Bharat / science-and-technology

ವರ್ಚುಯಲ್ ಕಲಿಕೆ: ತಂತ್ರಜ್ಞಾನದಿಂದ ಪಠ್ಯ ಸುಲಭವಾಗಿಸಿದ ಶಿಕ್ಷಕ

author img

By

Published : Feb 21, 2023, 2:42 PM IST

ವರ್ಚುಯಲ್ ರಿಯಾಲಿಟಿ ಮತ್ತು ಆಗ್ಮೆಂಟೆಡ್ ರಿಯಾಲಿಟಿ ತಂತ್ರಜ್ಞಾನಗಳನ್ನು ಬಳಸಿ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಶಿಕ್ಷಕರೊಬ್ಬರು ಈಗ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದಾರೆ. ಇವರು ಹೇಳುವ ಪಾಠಗಳನ್ನು ಅರ್ಥ ಮಾಡಿಕೊಳ್ಳುವುದು ವಿದ್ಯಾರ್ಥಿಗಳಿಗೆ ತುಂಬಾ ಸಲೀಸಾಗಿದೆ.

Virtual Teaching :
Virtual Teaching :

ಹೈದರಾಬಾದ್: ವರ್ಚುಯಲ್ ರಿಯಾಲಿಟಿ ಮತ್ತು ಆಗ್ಮೆಂಟೆಡ್ ರಿಯಾಲಿಟಿಯಂಥ ಸುಧಾರಿತ ತಂತ್ರಜ್ಞಾನಗಳು ಹೊಸ ಕ್ರಾಂತಿಯೊಂದನ್ನು ಸೃಷ್ಟಿಸುತ್ತಿದೆ. ಈ ತಂತ್ರಜ್ಞಾನಗಳನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿದುಕೊಂಡು ಅವುಗಳನ್ನು ಸದುಪಯೋಗಪಡಿಸಿಕೊಂಡರೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಜೋಗುಳಂಬ ಗದ್ವಾಲ ಜಿಲ್ಲೆಯ ಜೀವಶಾಸ್ತ್ರ ಶಿಕ್ಷಕರೊಬ್ಬರು ಇದೇ ಮಾದರಿಯಲ್ಲಿ ಯೋಚಿಸಿ ಕಾರ್ಯೋನ್ಮುಖರಾಗಿದ್ದಾರೆ. ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವಂತೆ ಪಠ್ಯಕ್ರಮದ ಬೋಧನೆಗೆ ಹೊಸ ತಂತ್ರಜ್ಞಾನಗಳನ್ನು ಇವರು ಸೇರಿಸುತ್ತಿದ್ದಾರೆ.

ರವಿಶಂಕರ್ ಅವರು ಜೋಗುಳಂಬ ಗದ್ವಾಲ ಜಿಲ್ಲೆಯ ಉಂಡವಳ್ಳಿ ಮಂಡಲದ ಪುಲ್ಲೂರು ಜಿಲ್ಲಾ ಪರಿಷತ್ ಪ್ರೌಢಶಾಲೆಯಲ್ಲಿ ಜೀವಶಾಸ್ತ್ರ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಠ್ಯಕ್ರಮಕ್ಕೆ ವಿಜ್ಞಾನ ತಂತ್ರಜ್ಞಾನವನ್ನು ಸೇರಿಸುವ ಮೂಲಕ, ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥಮಾಡಿಕೊಳ್ಳಲು ವರ್ಚುಯಲ್ ರಿಯಾಲಿಟಿ ಮತ್ತು ಆಗ್ಮೆಂಟೆಡ್ ರಿಯಾಲಿಟಿಯೊಂದಿಗೆ ವಿಜ್ಞಾನ ಪಾಠಗಳನ್ನು ಕಲಿಸುತ್ತಿದ್ದಾರೆ.

ವರ್ಚುಯಲ್ ರಿಯಾಲಿಟಿನಲ್ಲಿ ಹೆಡ್‌ಸೆಟ್ ಬಳಸಿ ಜೀವಶಾಸ್ತ್ರಕ್ಕೆ ಸಂಬಂಧಿಸಿದ ವಿಆರ್ ವಿಡಿಯೋಗಳನ್ನು ತೋರಿಸುವ ಮೂಲಕ ವಿದ್ಯಾರ್ಥಿಗಳ ಸಂಶಯಗಳನ್ನು ನಿವಾರಣೆ ಮಾಡಲಾಗುತ್ತಿದೆ. ಕಳೆದ ವರ್ಷದಿಂದ ಟ್ಯೂಟರ್ ಆ್ಯಪ್ ಬಳಸಿ, ಈ ತಂತ್ರಜ್ಞಾನದೊಂದಿಗೆ ಡಿಜಿಟಲ್ ಪರದೆಯ ಮೂಲಕ ಪಾಠಗಳನ್ನು ಕಲಿಸಲಾಗುತ್ತಿದೆ.

ತೆಲುಗು ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಸ್ಥಾನ: ರವಿಶಂಕರ್ ಅವರಿಗೆ ಬೋಧನೆಯಲ್ಲಿ ನವೀನ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಮತ್ತು ತಂತ್ರಜ್ಞಾನದ ಬಳಕೆ ಮಾಡುವುದು ಹೊಸ ವಿಷಯವೇನಲ್ಲ. 2019 ರಿಂದ, ಅವರು ಬೋಧನೆಯಲ್ಲಿ ವಿಶೇಷತೆ ತೋರಿಸುತ್ತಿದ್ದಾರೆ. 2020 ರಲ್ಲಿ ಬಯಾಲಜಿ ಆಲ್ಫಾಬೆಟ್ ಅನ್ನು ರಚಿಸಿದ್ದರು. 2021 ರಲ್ಲಿ, ಜೈವಿಕ ಸಂಖ್ಯಾತ್ಮಕ ಕ್ಯಾಲೆಂಡರ್ ಅನ್ನು ಸಿದ್ಧಪಡಿಸಿದ್ದರು. ಇದು ತೆಲುಗು ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಗಳಿಸಿದೆ. ಅಂದಿನಿಂದ ಪ್ರತಿ ವರ್ಷ ಜೈವಿಕ ಸಂಖ್ಯಾತ್ಮಕ ಕ್ಯಾಲೆಂಡರ್ ಅನ್ನು ಇವರು ಸಿದ್ಧಪಡಿಸುತ್ತಿದ್ದಾರೆ.

ತಮ್ಮ ಪಾಠಗಳ ವಿಶಿಷ್ಟತೆಯ ಬಗ್ಗೆ ಮಾತನಾಡಿದ ರವಿಶಂಕರ್, ಜೀರ್ಣಾಂಗ, ಉಸಿರಾಟ, ವಿಸರ್ಜನಾ ವ್ಯವಸ್ಥೆಗಳನ್ನು ವರ್ಚುಯಲ್ ರಿಯಾಲಿಟಿ ಮೂಲಕ ವಿವರಿಸಿದಾಗ, ವಿದ್ಯಾರ್ಥಿಗಳು ತಾವು ಆ ವ್ಯವಸ್ಥೆಯನ್ನು ಪ್ರವೇಶಿಸಿದ್ದೇವೆ ಎಂಬ ಭಾವನೆಯೊಂದಿಗೆ ಪಾಠಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಹೃದಯ, ರಕ್ತ ಪರಿಚಲನೆ ಮತ್ತು ಇತರ ವ್ಯವಸ್ಥೆಗಳನ್ನು ಆಗ್ಮೆಂಟೆಡ್ ರಿಯಾಲಿಟಿಯೊಂದಿಗೆ ವಿವರಿಸಿದಾಗ ಅದು ವಿದ್ಯಾರ್ಥಿಗಳಿಗೆ ತುಂಬಾ ಚೆನ್ನಾಗಿ ಆರ್ಥವಾಗುತ್ತದೆ ಮತ್ತು ಅವರು ಪಾಠಗಳನ್ನು ದೀರ್ಘಕಾಲ ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂದರು.

ಶಿಕ್ಷಣ ಸಚಿವರಿಂದ ಮೆಚ್ಚುಗೆ: 2022 ರಲ್ಲಿ ಹಾವು ಮತ್ತು ಏಣಿಗಳ ಆಟವನ್ನು 10 ನೇ ತರಗತಿಯ ಜೀವಶಾಸ್ತ್ರ ಪಠ್ಯಕ್ರಮದ ಆಧಾರದ ಮೇಲೆ ಇವರು ಸಿದ್ಧಪಡಿಸಿದ್ದರು. ಶಿಕ್ಷಣ ಸಚಿವೆ ಸಬಿತಾ ಇಂದ್ರಾ ರೆಡ್ಡಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಅವರ ಸೇವೆಯನ್ನು ವಿಶೇಷವಾಗಿ ಅಭಿನಂದಿಸಿದ್ದಾರೆ. ತಂತ್ರಜ್ಞಾನದ ನೆರವಿನಿಂದ ರವಿಶಂಕರ್ ಅವರು ಹೇಳುವ ಪಾಠಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು ಎಂದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸುತ್ತಾರೆ.

ಸರಕಾರದಿಂದ ಬೇಕಿದೆ ಇನ್ನೂ ಹೆಚ್ಚಿನ ಪ್ರೋತ್ಸಾಹ: ಸರಕಾರದಿಂದ ಸೂಕ್ತ ಪ್ರೋತ್ಸಾಹ ದೊರೆತರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸುಲಭ ಬೋಧನಾ ವಿಧಾನಗಳನ್ನು ತಯಾರಿಸಿ ಕೊಡುವುದಾಗಿ ಶಿಕ್ಷಕ ರವಿಶಂಕರ್ ಹೇಳುತ್ತಾರೆ. ವಿದ್ಯಾರ್ಥಿಗಳಿಗೆ ವಿಜ್ಞಾನ ಪಠ್ಯಕ್ರಮವನ್ನು ವಿಶೇಷವಾಗಿ ಅರ್ಥಮಾಡಿಕೊಳ್ಳಲು ತಾಂತ್ರಿಕ ಜ್ಞಾನ ಅಗತ್ಯ ಎಂದು ಅವರು ಅಭಿಪ್ರಾಯಡುತ್ತಾರೆ.

ಇದನ್ನೂ ಓದಿ: ಸಾಮಾಜಿಕ ಭಾವನಾತ್ಮಕ ಕಲಿಕೆ ಎಂದರೇನು? ಇಲ್ಲಿವೆ ಕೆಲ ಇಂಟ್ರಸ್ಟಿಂಗ್ ಅಂಶಗಳು!​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.