ವಾಷಿಂಗ್ಟನ್: ಸಾಮಾಜಿಕ ಮಾಧ್ಯಮ ದೈತ್ಯ Twitter ತನ್ನ Spaces ಆಡಿಯೋಗಳಿಗಾಗಿ ಹೊಸ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ. ಅದು ತಮ್ಮ ಟೈಮ್‌ಲೈನ್‌ನಲ್ಲಿ ರೆಕಾರ್ಡ್ ಮಾಡಿದ ಸ್ಪೇಸ್‌ಗಳ ಕ್ಲಿಪ್ ಹೋಸ್ಟ್ ಮಾಡಿ ಹಂಚಿಕೊಳ್ಳಬಹುದಾಗಿದೆ.
ದಿ ವರ್ಜ್ ಪ್ರಕಾರ, ಟ್ವಿಟರ್ ನೀಡಿರುವ ಈ ವೈಶಿಷ್ಟ್ಯವು ಐಒಎಸ್‌ನಲ್ಲಿ ಕೆಲವು ಹೋಸ್ಟ್‌ಗಳಿಗೆ ಮಾತ್ರವೇ ಲಭ್ಯವಿದೆ ಎಂದು ವರದಿ ಮಾಡಿದೆ. iOS ನಲ್ಲಿ ಪ್ರತಿಯೊಬ್ಬರೂ ಕ್ಲಿಪ್‌ಗಳನ್ನು ನೋಡಬಹುದು ಮತ್ತು ಆಲಿಸಬಹುದು. ಆದರೆ Android ಮತ್ತು ವೆಬ್‌ನಲ್ಲಿರುವವರು ಈ ಹೊಸ ಪೀಚರ್ ಬಳಕೆ ಮಾಡಲು ಸದ್ಯಕ್ಕೆ ಸಾಧ್ಯವಿಲ್ಲ. ಆದರೆ, ಶೀಘ್ರದಲ್ಲೇ ಈ ಹೊಸ ಆವಿಷ್ಕಾರವನ್ನು ಆಂಡ್ರೈಡ್ ಬಳಕೆದಾರರು ಪಡೆದುಕೊಳ್ಳಬಹುದು. Twitter ಹೇಳುವ ಪ್ರಕಾರ, ಒಮ್ಮೆ ಹೋಸ್ಟ್ ಮಾಡಿದ ಕ್ಲಿಪ್‌ಗಳು 30 ದಿನಗಳವರೆಗೆ ಇರುತ್ತವೆಯಂತೆ. ಕಂಪನಿ ವಕ್ತಾರ ಜೋಸೆಫ್ J. ನುನೆಜ್ ಈ ಮಾಹಿತಿ ನೀಡಿದ್ದಾರೆ.
ಟ್ವಿಟರ್ ಇದೀಗ Spaces ಹೋಸ್ಟ್‌ಗಳಿಗೆ ಮಾತ್ರ ಕ್ಲಿಪ್‌ಗಳನ್ನು ಸೀಮಿತಗೊಳಿಸುತ್ತಿದೆ. ಆದರೂ ಕಂಪನಿಯು Spaces ಕ್ಲಿಪಿಂಗ್ ಕಾರ್ಯವನ್ನು ಮುಂಬರುವ ದಿನಗಳಲ್ಲಿ Twitter ನಲ್ಲಿರುವ ಪ್ರತಿಯೊಬ್ಬರಿಗೂ ವಿಸ್ತರಿಸಲು ಕಂಪನಿ ಯೋಜಿಸಿದೆ ಎಂದು ನುನೆಜ್ ತಿಳಿಸಿದ್ದಾರೆ.
ಟ್ವಿಟರ್‌ನಲ್ಲಿ ಲೈವ್ ಆಡಿಯೊ ಸಂಭಾಷಣೆಗಳನ್ನು ಕೇಳಲು ಮತ್ತು ವೀಕ್ಷಣೆ ಮಾಡಲು 'ಸ್ಪೇಸಸ್' ಹೊಸ ಮಾರ್ಗವಾಗಿದೆ. 2020 ರಲ್ಲೇ ಈ ಆವಿಷ್ಕಾರವನ್ನು ಟ್ವಿಟರ್ ಪರಿಚಯಿಸಿದೆ ಎಂಬುದು ಗಮನಾರ್ಹ
ಇದನ್ನು ಓದಿ: ಭಾರತದ ಎಲೆಕ್ಟ್ರಿಕ್ ವಾಹನಗಳ ವಲಯದಲ್ಲಿ 104 ಬಿಲಿಯನ್ ರೂಪಾಯಿ ಹೂಡಲಿರುವ ಮಾರುತಿ ಸುಜುಕಿ