ಜಗತ್ತಿನಲ್ಲಿಯೇ ಅತಿಹೆಚ್ಚು ಬಳಕೆಯಲ್ಲಿರುವ ಮೈಕ್ರೋಬ್ಲಾಗಿಂಗ್ ಆದ ಟ್ವಿಟರ್ ಹೊಸ ಫೀಚರ್ವೊಂದನ್ನು ಪರಿಚಯಿಸುತ್ತಿದೆ. ಟ್ವಿಟರ್ ಅನ್ನು ಇನ್ನಷ್ಟು ಬಳಕೆ ಸ್ನೇಹಿ ಮಾಡಲು ಎಡಿಟ್(ಸಂಪಾದನೆ) ಬಟನ್ ಅವಕಾಶ ಕಲ್ಪಿಸುತ್ತಿದೆ.
ಈ ಬಗ್ಗೆ ಟ್ವೀಟ್ ಮಾಡಿ ತಿಳಿಸಿರುವ ಕಂಪನಿ, ಬಳಕೆದಾರರ ಮನವಿಯ ಮೇರೆಗೆ ಟ್ವಿಟರ್ನಲ್ಲಿ ಎಡಿಟ್ ಬಟನ್ ಆಪ್ಷನ್ ಅನ್ನು ನೀಡಲು ಪರೀಕ್ಷೆಗಳು ನಡೆಯುತ್ತಿವೆ. ಶೀಘ್ರದಲ್ಲೇ ಅದು ಬಳಕೆದಾರರಿಗೆ ಸಿಗಲಿದೆ ಎಂದು ತಿಳಿಸಿದೆ.
ಪಾವತಿಸಿದವರಿಗೆ ಎಡಿಟ್ ಬಟನ್ ಫೀಚರ್: ಇನ್ನು ಟ್ವಿಟರ್ ಪರಿಚಯಿಸುತ್ತಿರುವ ಎಡಿಟ್ ಬಟನ್ ಎಲ್ಲ ಬಳಕೆದಾರರಿಗೆ ಮುಕ್ತವಾಗಿ ಲಭ್ಯವಿರುವುದಿಲ್ಲ ಎಂಬುದು ಗೊತ್ತಾಗಿದೆ. ಈ ಬಟನ್ ಬೇಕಾದಲ್ಲಿ ಹಣ ಪಾವತಿಸಿ ಚಂದಾದಾರಿಕೆ ಪಡೆಯಬೇಕು. ಆರಂಭದಲ್ಲಿ ಇದನ್ನು ಬ್ಲೂ ಚಂದಾದಾರರಿಗೆ ಮಾತ್ರ ನೀಡಲಾಗುತ್ತದೆ ಎಂದು ಕಂಪನಿ ಹೇಳಿದೆ.
-
if you see an edited Tweet it's because we're testing the edit button
— Twitter (@Twitter) September 1, 2022 " class="align-text-top noRightClick twitterSection" data="
this is happening and you'll be okay
">if you see an edited Tweet it's because we're testing the edit button
— Twitter (@Twitter) September 1, 2022
this is happening and you'll be okayif you see an edited Tweet it's because we're testing the edit button
— Twitter (@Twitter) September 1, 2022
this is happening and you'll be okay
ಒಮ್ಮೆ ಟ್ವೀಟ್ ಮಾಡಿದ್ದನ್ನು ಮತ್ತೆ ಎಡಿಟ್ ಮಾಡಲು ನಮ್ಮ ತಂಡ ಈ ಬಗ್ಗೆ ಪರೀಕ್ಷೆ ನಡೆಸುತ್ತಿದೆ. ಬಟನ್ ಅನ್ನು ಪರಿಚಯಿಸುವ ಕಾರ್ಯ ಪ್ರಗತಿಯಲ್ಲಿದೆ. ಇದನ್ನು ಮುಂದಿನ ವಾರಗಳಲ್ಲಿ ಬ್ಲೂ ಚಂದಾದಾರರಿಗೆ ವಿಸ್ತರಿಸಲಾಗುವುದು. ಈ ಕುರಿತು ಅಪ್‌ಡೇಟ್ ನೀಡಲಾಗುವುದು ಎಂದು ಕಂಪನಿ ಟ್ವೀಟ್ ಮಾಡಿದೆ.
ಎಡಿಟ್ ಬಟನ್ನಿಂದ ಏನು ಲಾಭ: ಸದ್ಯ ಟ್ವಿಟರ್ನಲ್ಲಿ ನಾವು ಯಾವುದಾದರೂ ಪೋಸ್ಟ್ ಮಾಡಿದಾಗ ಅದರಲ್ಲಿ ಏನಾದರೂ ದೋಷವಿದ್ದಲ್ಲಿ ಮತ್ತೆ ಅದನ್ನು ಎಡಿಟ್ ಮಾಡಲು ಸಾಧ್ಯವಿಲ್ಲ. ಅಕ್ಷರ ದೋಷವಿದ್ದರೂ ಬದಲಿಸುವ ಅವಕಾಶವಿಲ್ಲ. ಇದರಿಂದ ಕೆಲವೊಮ್ಮೆ ಆ ಟ್ವೀಟ್ ಅನ್ನೇ ಡಿಲಿಟ್ ಮಾಡಬೇಕಾದ ಅನಿವಾರ್ಯ ಇರುತ್ತದೆ.
ಹೀಗಾಗಿ ಟ್ವೀಟ್ ಮಾಡಿದ ಪೋಸ್ಟ್ ಅನ್ನು ದೋಷವಿದ್ದಲ್ಲಿ ಎಡಿಟ್ ಮಾಡುವ ಅವಕಾಶ ನೀಡಲು ಬಳಕೆದಾರರು ಕಂಪನಿಗೆ ಒತ್ತಾಯ ಮಂಡಿಸಿದ್ದರು. ಬಳಕೆದಾರರ ಈ ಮನವಿಗೆ ಸ್ಪಂದಿಸಿರುವ ಟ್ವಿಟರ್ ಎಡಿಟ್ ಬಟನ್ ನೀಡಲು ಮುಂದಾಗಿದೆ. ಈ ಬಗ್ಗೆ ಪರೀಕ್ಷೆಗಳನ್ನು ನಡೆಸುತ್ತಿದ್ದು, ಅತಿ ಶೀಘ್ರದಲ್ಲೇ ಬಳಕೆದಾರರಿಗೆ ಸಿಗಲಿದೆ.
ಟ್ವೀಟ್ ಎಡಿಟ್ ಮಾಡಲು ಸಮಯ ನಿಗದಿ: ಇನ್ನು ಎಡಿಟ್ ಬಟನ್ ಪರಿಚಯಿಸಿದಾಗ್ಯೂ ಕರಾರು ಹಾಕಿರುವ ಕಂಪನಿ, ಯಾವುದೇ ಟ್ವೀಟ್ ಅನ್ನು ಪ್ರಕಟಿಸಿ ಅರ್ಧಗಂಟಯೊಳಗೆ (30 ನಿಮಿಷ) ಅದನ್ನು ಪರಿಷ್ಕರಿಸಲು ಸಾಧ್ಯ. ಪರಿಷ್ಕರಿಸಿದ ಬಳಿಕ ಅದು ಹಳೆಯ ಟ್ವೀಟ್ ಜೊತೆಗೆ ಗೋಚರಿಸುತ್ತದೆ ಎಂದು ಕಂಪನಿ ಹೇಳಿದೆ.
ಈ ಸಮಯ ಮಿತಿಯಿಂದ ಟ್ವೀಟ್ ಮೊದಲು ಏನನ್ನು ಹೇಳಲಾಗಿದೆ. ಈಗ ಏನು ತಿದ್ದಲಾಗಿದೆ ಎಂಬುದನ್ನು ತಿಳಿಸುತ್ತದೆ. ಇದು ಪೋಸ್ಟ್ನ ಸಮಗ್ರತೆಯನ್ನು ರಕ್ಷಿಸುವ ಸಲುವಾಗಿ ಇದನ್ನು ಉಳಿಸಿಕೊಳ್ಳಲಾಗಿದೆ. ಟ್ವೀಟ್ ಸಾರ್ವಜನಿಕ, ಮುಕ್ತವಾಗಿರುತ್ತದೆ ಎಂದು ಅದು ಹೇಳಿದೆ.
ಈ ತಿಂಗಳ ಕೊನೆಯಲ್ಲಿ ಟ್ವಿಟರ್ ಬ್ಲೂ ಚಂದಾದಾರರಿಗೆ ಎಡಿಟ್ ಬಟನ್ ಆಯ್ಕೆಯನ್ನು ನೀಡಲಾಗುವುದು ಎಂದು ಸಾಮಾಜಿಕ ಮಾಧ್ಯಮ ಕಂಪನಿ ದೃಢಪಡಿಸಿದೆ. ಗಮನಿಸಬೇಕಾದ ಸಂಗತಿಯೆಂದರೆ ಟ್ವಿಟರ್ ಬ್ಲೂ ಇನ್ನೂ ಭಾರತದಲ್ಲಿ ಅಧಿಕೃತವಾಗಿ ಲಭ್ಯವಿಲ್ಲ. ಆದ್ದರಿಂದ, ಈ ಚಂದಾದಾರಿಕೆಯು ಶೀಘ್ರದಲ್ಲೇ ದೇಶದಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ.
ಓದಿ: WhatsApp ಹೊಸ ಫೀಚರ್: ಗ್ರೂಪ್ ಅಡ್ಮಿನ್ಗೆ ಇನ್ಮುಂದೆ ಈ ಆಯ್ಕೆ ಸಿಗುತ್ತೆ!