ETV Bharat / science-and-technology

ಚಾಟ್​ಜಿಪಿಟಿಗೆ ಪ್ರತಿಸ್ಪರ್ಧಿ ಟ್ರುಥ್​ ಜಿಪಿಟಿ: ಎಲೋನ್ ಮಸ್ಕ್ ಹೊಸ ಪ್ರಾಜೆಕ್ಟ್​ - ಚಾಟ್​ಜಿಪಿಟಿಗೆ ಪ್ರತಿಸ್ಪರ್ಧಿ ಟ್ರುಥ್​ ಜಿಪಿಟಿ

ಓಪನ್​ ಎಐ ನ ಚಾಟ್​ಜಿಪಿಟಿ ಗೆ ಪ್ರತಿಸ್ಪರ್ಧಿಯಾಗಿ ಟ್ರುಥ್ ಜಿಪಿಟಿ ಹೆಸರಿನ ಚಾಟ್​ ಬಾಟ್ ತಯಾರಿಸುವುದಾಗಿ ಎಲೋನ್ ಮಸ್ಕ್ ಘೋಷಿಸಿದ್ದಾರೆ.

Elon Musk working on 'TruthGPT' as ChatGPT alternative

author img

By

Published : Apr 18, 2023, 7:21 PM IST

ನವದೆಹಲಿ : ಓಪನ್ ಎಐ ಕಂಪನಿಯ ಚಾಟ್​ಬಾಟ್​ ಆಗಿರುವ ಚಾಟ್​ಜಿಪಿಟಿ (ChatGPT) ಯನ್ನು ತೀವ್ರವಾಗಿ ವಿರೋಧಿಸಿರುವ ಟ್ವಿಟರ್ ಸಿಇಒ ಎಲೋನ್ ಮಸ್ಕ್, ಚಾಟ್​ ಜಿಪಿಟಿಗೆ ಎದುರಾಳಿಯಾಗಿ ತಮ್ಮದೇ ಆದ ಟ್ರುಥ್ ಜಿಪಿಟಿ (TruthGPT) ಹೆಸರಿನ ಚಾಟ್​ ಬಾಟ್​ ತಯಾರಿಸಲು ಮುಂದಾಗಿದ್ದಾರೆ. ಅಂತಾರಾಷ್ಟ್ರೀಯ ಮಾಧ್ಯಮವೊಂದರ ಜೊತೆ ಮಾತನಾಡಿದ ಮಸ್ಕ್​, ಮಾನವ ಕುಲದ ನಾಶವನ್ನು ತಪ್ಪಿಸಲು ಕೃತಕ ಬುದ್ಧಿಮತ್ತೆಗೆ ಪರ್ಯಾಯ ತಂತ್ರಜ್ಞಾನವನ್ನು ತಯಾರಿಸುವುದು ಅಗತ್ಯವಿದೆ ಎಂದು ಹೇಳಿದ್ದಾರೆ.

ಇದಕ್ಕಾಗಿ ನಾನು ಟ್ರುಥ್ ಜಿಪಿಟಿ ಹೆಸರಿನ ಏನೋ ಒಂದನ್ನು ತಯಾರಿಸಲು ಬಯಸುತ್ತೇನೆ ಅಥವಾ ಈ ವಿಶ್ವದ ನೈಜ ಪ್ರಕೃತಿಯನ್ನು ಅರ್ಥ ಮಾಡಿಕೊಳ್ಳಬಲ್ಲ ಅತಿ ಹೆಚ್ಚು ಸತ್ಯವನ್ನು ಸಂಶೋಧಿಸುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ತಯಾರಿಸಲು ಬಯಸುತ್ತೇನೆ ಎಂದಿದ್ದಾರೆ. ನಾವು ಈ ವಿಶ್ವದ ಅತ್ಯಂತ ಅದ್ಭುತ ಜೀವಿಗಳಾಗಿದ್ದೇವೆ. ವಿಶ್ವವನ್ನು ಅರ್ಥಮಾಡಿಕೊಳ್ಳುವ ಕೃತಕ ಬುದ್ಧಿಮತ್ತೆ ಸಾಧನವು ಮಾನವರಿಗೆ ಕೆಟ್ಟದ್ದನ್ನು ಮಾಡಲಾರದು. ಹೀಗಾಗಿ ಇಂಥದೊಂದು ತಂತ್ರಜ್ಞಾನ ಆವಿಷ್ಕರಿಸುವುದು ಅಗತ್ಯವಾಗಿದೆ ಎಂದು ನನಗನಿಸುತ್ತದೆ ಎಂದು ಮಸ್ಕ್ ಹೇಳಿದ್ದಾರೆ.

ನಮಗೆ ಬೇಕಿರುವುದು ಟ್ರುಥ್​ ಜಿಪಿಟಿ: ಫೆಬ್ರವರಿಯಲ್ಲಿ ಮಸ್ಕ್ ಮೊದಲ ಬಾರಿಗೆ ನಮಗೆ ಬೇಕಾಗಿರುವುದು ಟ್ರುಥ್ ಜಿಪಿಟಿ ಎಂದು ಟ್ವೀಟ್ ಮಾಡಿದ್ದಾರೆ. ಬಿಲಿಯನೇರ್ ಎಲೋನ್ ಮಸ್ಕ್ X.AI ಹೆಸರಿನ ಹೊಸ ಕಂಪನಿಯನ್ನು ಆರಂಭಿಸಿದ್ದಾರೆ. ಇದು ChatGPTಯ ಈ ಯುಗದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಆವಿಷ್ಕಾರ ಮಾಡಲಿದೆ. ಮೈಕ್ರೋಸಾಫ್ಟ್ ಬೆಂಬಲಿತ OpenAI ಗೆ ಪ್ರತಿಸ್ಪರ್ಧಿಯಾಗಿ ಆರ್ಟಿಫಿಶಿಯಲ್ ಕಂಪನಿಯೊಂದನ್ನು ರಚಿಸುವ ಇರಾದೆ ಮಸ್ಕ್​ ಅವರದ್ದಾಗಿದೆ.

ಇತ್ತೀಚಿನ ತಿಂಗಳುಗಳಲ್ಲಿ ChatGPT ಮತ್ತು GPT-4 ಪ್ರಪಂಚದಾದ್ಯಂತ ತುಂಬಾ ಜನಪ್ರಿಯವಾಗುತ್ತಿವೆ. ಮಾರ್ಚ್‌ನಲ್ಲಿ ಆ್ಯಪಲ್‌ನ ಸಹ ಸಂಸ್ಥಾಪಕರಾದ ಮಸ್ಕ್ ಮತ್ತು ಸ್ಟೀವ್ ವೋಜ್ನಿಯಾಕ್ ಸೇರಿದಂತೆ ಹಲವಾರು ಉನ್ನತ ಉದ್ಯಮಿಗಳು ಮತ್ತು AI ಸಂಶೋಧಕರು ಬಹಿರಂಗ ಪತ್ರವೊಂದನ್ನು ಬರೆದು, ಎಲ್ಲಾ AI ಲ್ಯಾಬ್‌ಗಳು GPT-4 ಗಿಂತ ಹೆಚ್ಚು ಶಕ್ತಿಯುತವಾದ AI ವ್ಯವಸ್ಥೆಗಳ ರಚನೆಯನ್ನು ಕನಿಷ್ಠ ಆರು ತಿಂಗಳವರೆಗೆ ತಕ್ಷಣವೇ ನಿಲ್ಲಿಸುವಂತೆ ಮನವಿ ಮಾಡಿದ್ದರು.

ಏನಿದು ಎಐ?: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎನ್ನುವುದು ಕಂಪ್ಯೂಟರ್, ಕಂಪ್ಯೂಟರ್ ನಿಯಂತ್ರಿತ ರೋಬೋಟ್ ಅಥವಾ ಸಾಫ್ಟ್‌ವೇರ್ ಅನ್ನು ಮಾನವ ಮನಸ್ಸಿನಂತೆ ಬುದ್ಧಿವಂತಿಕೆಯಿಂದ ಯೋಚಿಸುವಂತೆ ಮಾಡುವ ವಿಧಾನವಾಗಿದೆ. ಮಾನವ ಮೆದುಳಿನ ಮಾದರಿಗಳನ್ನು ಅಧ್ಯಯನ ಮಾಡುವ ಮೂಲಕ ಮತ್ತು ಅರಿವಿನ ಪ್ರಕ್ರಿಯೆಯನ್ನು ವಿಶ್ಲೇಷಿಸುವ ಮೂಲಕ AI ಅನ್ನು ಸಾಧಿಸಲಾಗುತ್ತದೆ. ಈ ಅಧ್ಯಯನಗಳ ಫಲಿತಾಂಶವು ಬುದ್ಧಿವಂತ ಸಾಫ್ಟ್‌ವೇರ್ ಮತ್ತು ಸಿಸ್ಟಮ್‌ಗಳನ್ನು ಅಭಿವೃದ್ಧಿಪಡಿಸುತ್ತದೆ.

1956 ರಲ್ಲಿ ಜಾನ್ ಮೆಕಾರ್ಥಿ ಮೊಟ್ಟ ಮೊದಲ ಬಾರಿಗೆ 'ಕೃತಕ ಬುದ್ಧಿಮತ್ತೆ' ಎಂಬ ಪದವನ್ನು ಸೃಷ್ಟಿಸಿದರು ಮತ್ತು ಮೊದಲ AI ಸಮ್ಮೇಳನವನ್ನು ನಡೆಸಿದ್ದರು. 1969 ರಲ್ಲಿ ಶೇಕಿ ಹೆಸರಿನ ಮೊದಲ ಸಾಮಾನ್ಯ ಉದ್ದೇಶದ ಮೊಬೈಲ್ ರೋಬೋಟ್ ನಿರ್ಮಿಸಲಾಯಿತು. 1997 ರಲ್ಲಿ ಸೂಪರ್‌ಕಂಪ್ಯೂಟರ್ 'ಡೀಪ್ ಬ್ಲೂ' ಅನ್ನು ವಿನ್ಯಾಸಗೊಳಿಸಲಾಯಿತು ಮತ್ತು ಇದು ವಿಶ್ವ ಚಾಂಪಿಯನ್ ಚೆಸ್ ಆಟಗಾರನನ್ನು ಪಂದ್ಯದಲ್ಲಿ ಸೋಲಿಸಿತು.

ಈ ಬೃಹತ್ ಕಂಪ್ಯೂಟರ್ ರಚಿಸಿದ್ದು IBM ಇತಿಹಾಸದಲ್ಲಿ ಒಂದು ದೊಡ್ಡ ಮೈಲಿಗಲ್ಲು. 2002 ರಲ್ಲಿ ಮೊದಲ ವಾಣಿಜ್ಯಿಕ ರೊಬೊಟಿಕ್ ವ್ಯಾಕ್ಯೂಮ್ ಕ್ಲೀನರ್ ಅನ್ನು ರಚಿಸಲಾಯಿತು. 2005 - 2019 - ಇಂದು, ನಾವು ಮಾತಿನ ಗುರುತಿಸುವಿಕೆ, ರೋಬೋಟಿಕ್ ಪ್ರಕ್ರಿಯೆ ಆಟೊಮೇಷನ್ (RPA), ಡ್ಯಾನ್ಸಿಂಗ್ ರೋಬೋಟ್, ಸ್ಮಾರ್ಟ್ ಮನೆಗಳು ಮತ್ತು ಇತರ ಆವಿಷ್ಕಾರಗಳನ್ನು ನೋಡುತ್ತಿದ್ದೇವೆ.

ಇದನ್ನೂ ಓದಿ : ಭೂಮಿಗೆ ಅಪ್ಪಳಿಸಲಿದೆ ನಿಷ್ಕ್ರಿಯ ಉಪಗ್ರಹ: ನಾಸಾ ಹೇಳಿದ್ದೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.