ETV Bharat / science-and-technology

Covid Research: ಪರಸ್ಪರ ನಂಬಿಕೆಯುಳ್ಳ ಸಮುದಾಯಗಳಲ್ಲಿ ಕೊರೊನಾ ಸೋಂಕು, ಸಾವು ಕಡಿಮೆ - 2020ರಲ್ಲಿ ಕೊರೊನಾ ಸೋಂಕು

ಪರಸ್ಪರ ನಂಬಿಕೆಯಿದ್ದರೇ ಮಾತ್ರ ಸಮುದಾಯಗಳು ಅಥವಾ ರಾಷ್ಟ್ರಗಳು ಸಾಮಾಜಿಕ ಅಂತರ, ಮಾಸ್ಕ್​ ಧರಿಸುವುದು ಸೇರಿದಂತೆ ಮುಂತಾದ ಕೋವಿಡ್ ಮಾರ್ಗಸೂಚಿಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಧ್ಯಯನವೊಂದು ಹೇಳಿದೆ.

Trusting societies more successful at reducing COVID-19 cases, deaths: Study
ಪರಸ್ಪರ ನಂಬಿಕೆಯುಳ್ಳ ಸಮುದಾಯಗಳಲ್ಲಿ ಕೊರೊನಾ ಸೋಂಕು, ಸಾವು ಕಡಿಮೆ: ಅಧ್ಯಯನ
author img

By

Published : Jan 8, 2022, 10:00 AM IST

ಲಂಡನ್(ಇಂಗ್ಲೆಂಡ್​)​: ಕೊರೊನಾ ಸೋಂಕಿತರ ಹೆಚ್ಚಳ ತಡೆಯಲು ಮತ್ತು ಅದರಿಂದಾಗುವ ಸಾವಿನ ಪ್ರಮಾಣ ಕಡಿಮೆ ಮಾಡಲು ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಬಹುತೇಕ ರಾಷ್ಟ್ರಗಳು ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸುತ್ತಿವೆ.

ಇತ್ತೀಚಿಗೆ ಪ್ರಕಟವಾದ ಅಧ್ಯಯನವೊಂದು ಹೊಸ ವಿಚಾರವನ್ನು ಬೆಳಕಿಗೆ ತಂದಿದ್ದು, ಪರಸ್ಪರ ನಂಬಿಕೆಯಿರುವ ಜನರಲ್ಲಿ, ಸಮಾಜಗಳಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಮತ್ತು ಸಾವಿನ ಪ್ರಮಾಣ ಹೆಚ್ಚಿದೆಯಂತೆ. ಹೌದು.. ಜನರಲ್ಲಿನ ಪರಸ್ಪರ ನಂಬಿಕೆಯೇ ಸೋಂಕು ಪ್ರಮಾಣವನ್ನು ಕಡಿಮೆ ಮಾಡಿದೆ ಎಂದು ಸೈಂಟಿಫಿಕ್ ರಿಪೋರ್ಟ್ಸ್​​ ಜರ್ನಲ್ ('Scientific Reports Journal) ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನದ ವರದಿಯೊಂದು ಅಭಿಪ್ರಾಯಪಟ್ಟಿದೆ.

ಒಂದು ಪ್ರದೇಶದಲ್ಲಿ ಅಥವಾ ಒಂದು ದೇಶದಲ್ಲಿ ಕನಿಷ್ಠ ಶೇಕಡಾ 40ರಷ್ಟು ಜನರು 'ಹೌದು, ನಾವು ಸಮಾಜದಲ್ಲ ನಂಬಿಕೆಯಿಡುತ್ತೇವೆ' ಎಂಬ ನಂಬಿಕೆ ಇಟ್ಟುಕೊಂಡಿದ್ದೇ ಆದಲ್ಲಿ, ಆ ದೇಶದ ಅಥವಾ ಸಮುದಾಯದಲ್ಲಿ ಕೊರೊನಾ ಸೋಂಕು ಕಡಿಮೆಯಾಗುತ್ತದೆ. ಕೊರೊನಾ ಸಂಬಂಧಿ ಸಾವುಗಳನ್ನು ಕಡಿಮೆ ಮಾಡಬಹುದು ಎಂಬುದು ವರದಿಯಲ್ಲಿರುವ ಮುಖ್ಯಾಂಶ. 2020ರ ಅವಧಿಯಲ್ಲಿ ಈ ನಂಬಿಕೆ ಸಾಕಷ್ಟು ರಾಷ್ಟ್ರಗಳಲ್ಲಿ ಸೋಂಕು ಕಡಿಮೆ ಮಾಡಲು ಕಾರಣವಾಗಿತ್ತು ಎಂಬುದು ವರದಿಯಲ್ಲಿರುವ ಉಲ್ಲೇಖ.

ವರದಿ ಪ್ರಕಾರ ಇಂಗ್ಲೆಂಡ್​ನ ಸಮುದಾಯಗಳಲ್ಲಿ ಶೇಕಡಾ 40 ಅಥವಾ 40ಕ್ಕಿಂತ ಕಡಿಮೆ ನಂಬಿಕೆ ಇದೆ. ಡೆನ್ಮಾರ್ಕ್​, ನಾರ್ವೆ ಮುಂತಾದ ಸ್ಕ್ಯಾಂಡಿನೇವಿಯನ್ ರಾಷ್ಟ್ರಗಳ ಸಮಾಜಗಳಲ್ಲಿ ಶೇಕಡಾ 60ಕ್ಕಿಂತ ಹೆಚ್ಚು ಪರಸ್ಪರ ನಂಬಿಕೆಯಿದೆ. ಚೀನಾದ ಸಮುದಾಯಗಳಲ್ಲಿ ನಂಬಿಕೆಯ ಪ್ರಮಾಣ ಹೆಚ್ಚಿದೆ ಎಂದು ವರದಿ ಹೇಳಿದೆ.

ಅಂದಹಾಗೆ ಈ ಅಧ್ಯಯನ 2020ರ ಅವಧಿಯಲ್ಲಿಯ ಅಂಕಿ - ಅಂಶಗಳನ್ನು ಗಣನೆಗೆ ತೆಗೆದುಕೊಂಡಿದೆ. ಇದಕ್ಕಿಂತ ಹೆಚ್ಚು ಮುಖ್ಯವಾದ ಅಂಶವೆಂದರೆ ಪರಸ್ಪರ ನಂಬಿಕೆಯುಳ್ಳ ರಾಷ್ಟ್ರಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದೆ.

ಎಕ್ಸೆಟರ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಟಿಮ್ ಲೆಂಟನ್ ಮತ್ತು ಡಾ.ಕ್ರಿಸ್ ಬೌಲ್ಟನ್ ಮತ್ತು ವ್ಯಾಗೆನಿಂಗೆನ್ ವಿಶ್ವವಿದ್ಯಾಲಯದ ಪ್ರೊಫೆಸರ್ ಮಾರ್ಟೆನ್ ಶೆಫರ್ ಅವರು ಅಧ್ಯಯನವನ್ನು ನಡೆಸಿದ್ದಾರೆ.

ಸಮಾಜದೊಳಗಿನ ನಂಬಿಕೆಯು ಸಾಂಕ್ರಾಮಿಕ ರೋಗಗಳನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಣ ಮಾಡುವಲ್ಲಿ ಸಹಕಾರಿಯಾಗಿದೆ ಎಂಬುದು ನಮ್ಮ ಅಧ್ಯಯನದ ಫಲಿತಾಂಶಗಳಿಂದ ಗೊತ್ತಾಗುತ್ತದೆ. ಎಲ್ಲ ಸಮುದಾಯಗಳಲ್ಲಿ ನಂಬಿಕೆಯನ್ನು ಹೆಚ್ಚಿಸುವ ಕೆಲಸವನ್ನು ಅಲ್ಲಿನ ಸರ್ಕಾರಗಳು ಮಾಡಬೇಕು. ಈ ಮೂಲಕ ಭವಿಷ್ಯದ ಭಯಾನಕ ರೋಗಗಳನ್ನು ಎದುರಿಸಲೂ ಸಹಾಯವಾಗಲಿದೆ ಎಂದು ಪ್ರೊಫೆಸರ್ ಟಿಮ್ ಲೆಂಟನ್ ಅಭಿಪ್ರಾಯಪಟ್ಟಿದ್ದಾರೆ.

2020ರ ಅವಧಿಯಲ್ಲಿನ ಕೊರೊನಾ ಸೋಂಕು ಮಾಹಿತಿಯನ್ನು ಅಧ್ಯಯನಕಾರರು ತೆಗೆದುಕೊಂಡಿದ್ದು, ಪರಸ್ಪರ ನಂಬಿಕೆಯಿದ್ದರೇ ಮಾತ್ರ ಆ ಸಮುದಾಯಗಳು ಸಾಮಾಜಿಕ ಅಂತರ, ಮಾಸ್ಕ್​ ಧರಿಸುವುದು, ಮುಂತಾದ ಕೋವಿಡ್ ಮಾರ್ಗಸೂಚಿಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಧ್ಯಯನಕಾರರ ಒಮ್ಮತವಾಗಿದೆ.

ಇದನ್ನೂ ಓದಿ: ಭೂಮಿಯ ಆಳದಲ್ಲಿದೆ 4.5 ಬಿಲಿಯನ್ ವರ್ಷಗಳ ಹಿಂದಿನ ರಾಸಾಯನಿಕ: ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.