ETV Bharat / science-and-technology

ಈ ವರ್ಷದ ಗೂಗಲ್​ನ ಟಾಪ್​ ಆ್ಯಪ್​ಗಳಿವು!

ಇದರಲ್ಲಿ ಸಾಮಾನ್ಯ ಮತ್ತು ಗೇಮಿಂಗ್​ ಆ್ಯಪ್​ಗಳು ಕೂಡ ಸ್ಥಾನ ಪಡೆದಿದ್ದು, ಈ ಆ್ಯಪ್​ ಅಭಿವೃದ್ಧಿ ಪಡೆಸಿದವರು ಕೂಡ ಇತ್ತೀಚೆಗೆ ಗೌರವಕ್ಕೆ ಪಾತ್ರರಾಗಿದ್ದರು. ​

author img

By

Published : Dec 5, 2022, 12:22 PM IST

these-are-the-top-apps-of-google-this-year
ಈ ವರ್ಷದ ಗೂಗಲ್​ನ ಟಾಪ್​ ಆ್ಯಪ್​ಗಳಿವು

ಹೈದ್ರಾಬಾದ್​: ಈ ವರ್ಷದ ಉತ್ತಮ ಆ್ಯಪ್​ಗಳ ಪಟ್ಟಿಯನ್ನು ಗೂಗಲ್​ ಬಿಡುಗಡೆ ಮಾಡಿದೆ. ಭಾರತದಲ್ಲಿ ಈ ವರ್ಷ ಬಹು ಮನ್ನಣೆ ಪಡೆದ ಮೊಬೈಲ್​ ಅಪ್ಲಿಕೇಷನ್ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಸಾಮಾನ್ಯ ಮತ್ತು ಗೇಮಿಂಗ್​ ಆ್ಯಪ್​ಗಳು ಕೂಡ ಸ್ಥಾನ ಪಡೆದಿದ್ದು, ಈ ಆ್ಯಪ್​ ಅಭವೃದ್ಧಿ ಪಡೆದವರು ಕೂಡ ಇತ್ತೀಚೆಗೆ ಗೌರವಕ್ಕೆ ಪಾತ್ರರಾಗಿದ್ದರು. ​

ಫ್ಲಿಕ್​ಕಾರ್ಟ್​ನ ಶಾಪ್ಸೆ ಈ ವರ್ಷದ ಪ್ರಖ್ಯಾತಿ ಪಡೆದ ಆ್ಯಪ್​ ಆಗಿದೆ. ಈ ಆ್ಯಪ್​ ಮಾರಾಟಕ್ಕೆ ಯಾವುದೇ ಕಮಿಷನ್​ ಪಡೆಯಲಾಗಿಲ್ಲ. ಇವರ ಸಾಮಾಜಿಕ ಮಾಧ್ಯಮದ ಖಾತೆ ಮೂಲಕ ಯಾರು ಬೇಕಾದರೂ ಕೂಡ ಮಾರಾಟ ಮಾಡಬಹುದಾಗಿದೆ. ಈ ಆ್ಯಪ್​ನಲ್ಲಿ ಫ್ಯಾಷನ್​ ಮೊಬೈಲ್​​ ಬ್ಯೂಟಿ, ಫುಟ್​ವೇರ್​ ಸೇರಿದಂತೆ ಹಲವು ಉತ್ಪನ್ನಗಳು ಸಿಗಲಿದೆ. ನಿತ್ಯದ ಅವಶ್ಯಕತೆಯಲ್ಲಿ ಈ ಆ್ಯಪ್​ ಮೊದಲ ಸ್ಥಾನ ಪಡೆದಿದೆ.

ವಿದ್ಯಾರ್ಥಿಗಳಿಗಾಗಿ ರೂಪುಗೊಂಡ ಕ್ವೆಸ್ಟ್ ಆ್ಯಪ್​ ಕೂಡ ಈ ವರ್ಷದ ಬೆಸ್ಟ್​ ಆ್ಯಪ್​ ಆಗಿದೆ. ಕೃತಕ ಬುದ್ದಿಮತೆ ಮತ್ತು ವಿದ್ಯಾರ್ಥಿಗಳಿಗೆ ಬೇಕಾದ ಪಾಠಗಳನ್ನು ನೀಡುವ ಮೂಲಕ ಅವರ ಕಲಿಕೆಗೆ ಸಹಾಯ ಮಾಡುತ್ತಿದೆ. ಇದರ ವಿಶೇಷತೆ ಎಂದರೆ ಕಲಿಕೆ ಹೊತೆ ಗೇಮಿಂಗ್​ ಅನುಭವವನ್ನು ಈ ಆ್ಯಪ್​ ನೀಡುತ್ತದೆ. ​​

ಹಿರಿಯ ನಾಗರಿಕರಿಗಾಗಿ ರೂಪುಗೊಂಡಿರುವ ಖಾಯಾಲ್​ ಉತ್ತಮ ವರ್ಗದ ಬೆಸ್ಟ್​ ಆ್ಯಪ್​ ಆಗಿದೆ. ಹಿರಿಯ ನಾಗರಿಕರಿಗೆ ಪ್ರಿಪೇಯ್ಡ್​ ಕಾರ್ಡ್​ ಹಾಗೂ ಅವರ ಅವಶ್ಯಕತೆಗೆ ಅನುಗುಣವಾದ ವಸ್ತುಗಳ ಮೇಲೆ ರಿಯಾಯಿತಿಯನ್ನು ನೀಡುತ್ತದೆ.

ಬೆಸ್ಟ್​ ಹಿಡನ್​ ಜೆಮ್ಸ್​ ವರ್ಗದಲ್ಲಿ ಬೇಬಿಜಿ ಆ್ಯಪ್​ ಉತ್ತಮ ಸ್ಥಾನ ಪಡೆದಿದೆ. ಮಕ್ಕಳ ಬೆಳವಣಿಗೆ ಪತ್ತೆ ಮಾಡುವ ಆ್ಯಪ್​​​ ಇದಾಗಿದೆ. ಪೋಷಕರು ತಮ್ಮ ಮಗುವಿನ ಚಟುವಟಿಕೆಗಳನ್ನು ತಿಳಿಯಲು ಇದು ಸಹಾಯ ಮಾಡಲಿದ್ದು, ಮಕ್ಕಳಿಗೆ ಬೇಕಾದ ಕಥೆಗಳು ಕೂಡ ಇಲ್ಲಿದೆ.

2016ರಲ್ಲಿ ಬಿಡುಗಡೆಯಾದ ಲೂಡೊ ಕಿಂಗ್​ ಆ್ಯಪ್​ ಇಂದಿಗೂ ತನ್ನ ಜನಪ್ರಿಯತೆ ಉಳಿಸಿಕೊಂಡಿದ್ದು, ಇದು ಗೂಗಲ್​ ಗೌರವಕ್ಕೆ ಕೂಡ ಪಾತ್ರವಾಗಿದೆ. ಇದೆ ವರ್ಗದಲ್ಲಿ ರಿಯಲ್​ ಕ್ರಿಕೆಟ್​ 20 ಕೂಡ ಕಾಣಬಹುದಾಗಿದೆ.

ಇದನ್ನೂ ಓದಿ: ಎಲೆಕ್ಟ್ರಿಕ್​​ ಸೆಮಿ ಟ್ರಕ್​​​ ಬಿಡುಗಡೆ ಮಾಡಿದ ಟೆಸ್ಲಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.