ಡೆಟ್ರಾಯಿಟ್ (ಅಮೆರಿಕ): ಇತ್ತೀಚೆಗೆ ಎಲಾನ್ ಮಸ್ಕ್ ಮಾಲೀಕತ್ವದ ಟೆಸ್ಲಾ ಸಂಸ್ಥೆ ಸ್ವಯಂ ಚಾಲಿತ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಬಹುತೇಕ ತಂತ್ರಜ್ಞಾನದ ನೆರವಿನಿಂದ ಕಾರುಗಳು ರಸ್ತೆಯ ಮೇಲೆ ಚಲಿಸುತ್ತಿದ್ದವು. ಟೆಸ್ಲಾ ಸಂಸ್ಥೆ ಆಟೋಪೈಲಟ್ ವ್ಯವಸ್ಥೆಯ ಸುಮಾರು 4,00,000 ಕಾರುಗಳನ್ನು ಪ್ರಾಯೋಗಿಕವಾಗಿ ರಸ್ತೆಗಿಳಿಸಿತ್ತು.
ಇದರಲ್ಲಿ ಸುಮಾರು 3,63,000 ಕಾರುಗಳನ್ನು ಸಂಸ್ಥೆ ಹಿಂದಕ್ಕೆ ಪಡೆದಿದೆ ಎಂದು ತಿಳಿದು ಬಂದಿದೆ. ಆಟೋಪೈಲಟ್ ವ್ಯವಸ್ಥೆಯ ಕಾರುಗಳು ರಸ್ತೆಯ ಫಲಕಗಳ ಮಾರ್ಗದರ್ಶನಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ದೂರುಗಳು ಸ್ವೀಕಾರವಾದ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಾರುಗಳು ತಿರುವಿನಲ್ಲಿ ಹಾಕಲಾಗಿದ್ದ ಡಿವೈಡರ್ಗಳನ್ನು ಸರಿಯಾಗಿ ಗುರುತಿಸುತ್ತಿಲ್ಲ, ರಸ್ತೆಗಳು ಇಬ್ಬಾಗವಾದಲ್ಲಿ ಎಡ - ಬಲಕ್ಕೆ ಚಲಿಸುವಲ್ಲಿ ಸಮಸ್ಯೆ ಉಂಟಾಗುತ್ತಿದೆ ಮತ್ತು ರಸ್ತೆ ಫಲಕಗಳಲ್ಲಿ ಅಳವಡಿಸಿರುವ ವೇಗವನ್ನು ಅನುಸರಿಸುತ್ತಿಲ್ಲ ಎಂಬ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಆಟೋಪೈಲಟ್ ವ್ಯವಸ್ಥೆಯ ಕಾರುಗಳನ್ನು ಹಿಂಪಡೆಯಲಾಗಿದೆ.
ಟೆಸ್ಲಾದ ಸ್ವಯಂಚಾಲಿತ ಚಾಲನಾ ವ್ಯವಸ್ಥೆಗಳ ಕುರಿತು ಯುನೈಟೆಡ್ ಸ್ಟೇಟ್ಸ್ನ ಸುರಕ್ಷತಾ ನಿಯಂತ್ರಕರು ನಡೆಸಿದ ತನಿಖೆಯ ಆಧಾರದಲ್ಲಿ ಕಾರುಗಳನ್ನು ಹಿಂಪಡೆದಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಟ್ರಾಫಿಕ್ ಸೇಫ್ಟಿ ಅಡ್ಮಿನಿಸ್ಟ್ರೇಷನ್ ಗುರುವಾರ ಪೋಸ್ಟ್ ಮಾಡಿದ ದಾಖಲೆಗಳಲ್ಲಿ ಟೆಸ್ಲಾ ಮುಂಬರುವ ವಾರಗಳಲ್ಲಿ ಆನ್‌ಲೈನ್ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಬೇಕು ಮತ್ತು ಹೆಚ್ಚಿನ ಸೇಫ್ಟಿಗಳನ್ನು ಅಳವಡಿಸ ಬೇಕು ಎಂದು ಸೂಚಿಸಿದೆ.
ರಾಷ್ಟ್ರೀಯ ಹೆದ್ದಾರಿ ಟ್ರಾಫಿಕ್ ಸೇಫ್ಟಿ ಅಡ್ಮಿನಿಸ್ಟ್ರೇಷನ್ ಸ್ವಯಂಚಾಲಿತ ಕಾರುಗಳ ಬಗ್ಗೆ, ಸುಮಾರು 400,000 ಟೆಸ್ಲಾ ಮಾಲೀಕರಿಂದ ಕಾರುಗಳನ್ನು ಪರೀಕ್ಷಿಸಲಾಗುತ್ತಿದೆ. ಈ ಕಾರುಗಳು ತಿರುವಿನಲ್ಲಿ ನೇರವಾಗಿ ಹೋಗುವುದು ಮತ್ತು ಡಿವೈಡರ್ ಪಟ್ಟಿಗಳನ್ನು ಕ್ರಾಸ್ ಮಾಡುತ್ತಿವೆ. ಸ್ಟಾಪ್ ಚಿಹ್ನೆಗಳಲ್ಲಿ ಸಂಪೂರ್ಣ ನಿಲುಗಡೆಗೆ ಆಗುತ್ತಿಲ್ಲ ಮತ್ತು ಚಿಹ್ನೆಯನ್ನು ಗುರುತಿಸದೇ ಹಾದು ಹೋಗುತ್ತಿವೆ. ಹಳದಿ ಟ್ರಾಫಿಕ್ ಲೈಟ್ ಸಮಯದಲ್ಲಿ ವಾಹನ ಚಾಲನೆ ತೆಗೆದುಕೊಳ್ಳುತ್ತಿದ್ದು ಗ್ರೀನ್ ಆಗುವವರೆಗೆ ಕಾಯುತ್ತಿಲ್ಲ ಎಂದು ತಿಳಿಸಿದೆ.
ಆಟೋಪೈಲಟ್ ವ್ಯವಸ್ಥೆಯ ಕಾರು ರಸ್ತೆಯಲ್ಲಿ ಅಳವಡಿಸಿರುವ ವೇಗದ ಮಿತಿಗಳನ್ನು ಮೀರಿ ಹೋಗುವುದು ಮತ್ತು ರಸ್ತೆ ಫಲಕಗಳನ್ನು ಮೀರಿ ಕಾನೂನುಬಾಹಿರ ಚಾಲನೆ, ಅನಿರೀಕ್ಷಿತ ರೀತಿಯಲ್ಲಿ ಛೇದಕಗಳ ಮೂಲಕ ಪ್ರಯಾಣಿಸುವುದನ್ನು ಮಾಡುತ್ತಿವೆ. ವಾಹನದಲ್ಲಿರುವ FSD ಬೀಟಾ ಸಾಫ್ಟ್‌ವೇರ್‌ನಿಂದ ಅಪಘಾತದ ಅಪಾಯಗಳು ಹೆಚ್ಚಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಟ್ರಾಫಿಕ್ ಸೇಫ್ಟಿ ಅಡ್ಮಿನಿಸ್ಟ್ರೇಷನ್ ಹೇಳಿದೆ.
2019 ರ ಮೇ ನಿಂದ ಸೆಪ್ಟೆಂಬರ್ 12, 2022 ರವರೆಗೆ ಸಾಫ್ಟ್‌ವೇರ್‌ನಿಂದ ಉಂಟಾಗಬಹುದಾದ 18 ವಾರಂಟಿ ಕ್ಲೈಮ್‌ಗಳನ್ನು ಟೆಸ್ಲಾ ಸ್ವೀಕರಿಸಿದೆ. ಆದರೆ ಆಸ್ಟಿನ್, ಟೆಕ್ಸಾಸ್, ಎಲೆಕ್ಟ್ರಿಕ್ ವಾಹನ ತಯಾರಕ ಸಂಸ್ಥೆಯು ಯಾವುದೇ ಸಾವುಗಳು ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ ಎಂದು ತಿಳಿಸಿದೆ. ರಾಷ್ಟ್ರೀಯ ಹೆದ್ದಾರಿ ಟ್ರಾಫಿಕ್ ಸೇಫ್ಟಿ ಅಡ್ಮಿನಿಸ್ಟ್ರೇಷನ್ ಜೊತೆಗೆ ಚರ್ಚಿಸಿ ಆಟೋಪೈಲಟ್ ಸಾಫ್ಟ್‌ವೇರ್‌ನ ಮರುಸ್ಥಾಪನೆಯನ್ನು ಪ್ರಾರಂಭಿಸಿದೆ ಎಂದು ಟೆಸ್ಲಾ ಸಂಸ್ಥೆ ಹೇಳಿದೆ.
ಇದನ್ನೂ ಓದಿ: ಆಟೋಪೈಲಟ್ ವ್ಯವಸ್ಥೆಗೆ ಸಂಬಂಧಿಸಿದ ಅಪಘಾತ ಪ್ರಕರಣದಲ್ಲಿ ಟೆಸ್ಲಾಗೆ ಕ್ಲೀನ್ ಚಿಟ್..